ಬ್ರೇಕಿಂಗ್ ನ್ಯೂಸ್
19-04-21 06:04 pm Udupi Correspondent ಕರಾವಳಿ
ಉಡುಪಿ, ಎ.19 : ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು, "ಬೆಂಗಳೂರಿನಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಬೆಂಗಳೂರಿನಿಂದ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

ಸಾರ್ವಜನಿಕರು ಕುಟುಂಬದ ಹಿತದೃಷ್ಟಿಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಪರೀಕ್ಷೆಗೆ ವ್ಯವಸ್ಥೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
"ಸಮುದಾಯಕ್ಕೆ ಕೊರೊನಾ ಹಬ್ಬುವುದನ್ನು ತಡೆಯಬೇಕಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 3000 ಸ್ವಾಬ್ ಟೆಸ್ಟ್ ಮಾಡುತ್ತಿದ್ದೇವೆ. ಯಾವುದೇ ಒಂದು ಪ್ರದೇಶದಲ್ಲಿ ಹೆಚ್ಚು ಕೇಸುಗಳು ಪತ್ತೆಯಾಗುತ್ತಿಲ್ಲ. ಜಿಲ್ಲೆಯ ಅಲ್ಲಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದರು.

"ಇಂದು ಎರಡು ಕಡೆ ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡುತ್ತಿದ್ದೇವೆ. ಕೇವಲ ಐದು ಪ್ರಕರಣ ಬಂದ ಪರಿಸರದಲ್ಲೂ ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡಲಾಗುತ್ತದೆ. ಎಂಐಟಿ ಎರಡು ದಿನದಲ್ಲಿ ಕಂಟೈನ್ಮೆಂಟ್ ಮುಕ್ತವಾಗಲಿದೆ" ಎಂದು ವಿವರಣೆ ನೀಡಿದರು.

"ಜಿಲ್ಲೆಯಲ್ಲಿ ಐಸಿಯುಗಳ ಕೊರತೆಯಿಲ್ಲ. ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಕೂಡ ಸಾಕಷ್ಟಿದೆ. ಆದರೆ, ಜಿಲ್ಲೆಯ ಜನ ಮೈಮರೆಯಬಾರದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಡಿ, ಜನ ಸೇರುವ ಸ್ಥಳಗಳಿಗೆ ಹೋಗಬೇಡಿ ಎಂದು ಮನವಿ ಮಾಡಿದರು.
Those entering Udupi from Maharashtra and Kerala must have covid negative report states Udupi Dc Jagadeesh.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm