ಬ್ರೇಕಿಂಗ್ ನ್ಯೂಸ್
18-04-21 01:31 pm Mangaluru correspondent ಕರಾವಳಿ
ಮಂಗಳೂರು, ಎ.18 : ರಂಝಾನ್ ಪ್ರವಚನ ನೀಡಲೆಂದು ಮಂಗಳೂರಿಗೆ ಬಂದಿದ್ದ ಸುಳ್ಯದ ಯುವಕ ಮಸೀದಿಯಲ್ಲೇ ಮೃತಪಟ್ಟ ಘಟನೆ ನಗರದ ಮರಕಡದಲ್ಲಿ ನಡೆದಿದೆ.
ಸುಳ್ಯದ ಅಜ್ಜಾವರದ ಹಸೈನಾರ್ ಎಂಬವರ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತ ವಿದ್ಯಾರ್ಥಿ. ರಂಝಾನ್ ತಿಂಗಳಲ್ಲಿ ಮದ್ರಸ ವಿದ್ಯಾರ್ಥಿಗಳು ವಿವಿಧೆಡೆಗೆ ತೆರಳಿ ಮತ ಪ್ರವಚನ ನೀಡುತ್ತಾರೆ. ಅದರಂತೆ ಅಬ್ದುಲ್ ಸಿನಾನ್ ಶುಕ್ರವಾರ ಮರಕಡದ ಜುಮ್ಮಾ ಮಸೀದಿಗೆ ಆಗಮಿಸಿದ್ದ. ಸಂಜೆ ಉಪವಾಸ ತೊರೆದ ಬಳಿಕ ನಮಾಝ್ ನಿರ್ವಹಿಸಿ ಪ್ರವಚನವನ್ನೂ ನೀಡಿದ್ದ.
ಆದರೆ, ಶನಿವಾರ ಮುಂಜಾನೆ ಎದ್ದು ಊಟ ಮುಗಿಸಿ ತಟ್ಟೆ ತೊಳೆಯುವ ಸಂದರ್ಭ ಸಿನಾನ್ ಕುಸಿದು ಬಿದ್ದಿದ್ದಾನೆ. ಆತನಿಗೆ ಅಪಸ್ಮಾರ ಕಾಯಿಲೆಯಿದ್ದ ಬಗ್ಗೆ ತಿಳಿದ ಮಸೀದಿಯ ಗುರು, ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆಯವರ ಸಲಹೆಯಂತೆ ಆತನಿಗೆ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬೆಳಗ್ಗೆ 8 ಗಂಟೆಯಾದರೂ ಸಿನಾನ್ ಎದ್ದೇಳದಿರುವುದನ್ನು ಕಂಡ ಗುರುಗಳು ಎಬ್ಬಿಸಲು ಪ್ರಯತ್ನಿಸಿದಾಗ, ಸಿನಾನ್ ಮಲಗಿದ್ದಲ್ಲಿಯೇ ಮೃತಪಟ್ಟಿದ್ದ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a tragic incident in Sullia a 20 year old youth died inside the mosque. It is said the youth had come to preach on Ramzan.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm