ಬ್ರೇಕಿಂಗ್ ನ್ಯೂಸ್
22-08-20 05:14 pm Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 22: ಕರಾವಳಿಯಲ್ಲಿ ಕೊರೊನಾ ಸಂಕಷ್ಟದ ನಡುವೆ ಗಣೇಶನ ಪೂಜೆ ನಡೆದಿದೆ. ಆದರೆ, ಕರಾವಳಿ ಜನ ಗಣೇಶನ ಆರಾಧನೆಯಲ್ಲಿ ತೊಡಗಿದ್ದರೆ ಇತ್ತ ಹಸಿರ ಸಿರಿಯ ಪ್ರಕೃತಿಯೇ ಗಣಪನ ರೂಪದಲ್ಲಿ ಕಂಡುಬಂದಿದ್ದಾಳೆ.
ಹೌದು.. ಮಂಗಳೂರು ನಗರ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಅಪರೂಪದ ದೃಶ್ಯ ಕಂಡುಬಂದಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. ಈಚಲು ಮರಕ್ಕೆ ಸುತ್ತಿಕೊಂಡ ಗಿಡ, ಬಳ್ಳಿಗಳೆಲ್ಲ ಸೇರಿ ಗಣೇಶನ ಆಕೃತಿ ಪಡೆದಿದ್ದು ರಮಣೀಯ ನಿಸರ್ಗ ಸಿರಿ ಭಕ್ತಜನರನ್ನು ಮಂತ್ರಮುಗ್ಧಗೊಳಿಸಿದೆ. ಕೆತ್ತಿಕಲ್ ತಿರುವಿನಿಂದ ಅಮೃತೇಶ್ವರಿ ದೇವಸ್ಥಾನಕ್ಕೆ ತಿರುಗುವ ರಸ್ತೆಯಲ್ಲಿ ಸಾಗುತ್ತಿದ್ದಂತೆ ಈ ಗಣೇಶ ರೂಪ ಕಂಡುಬರುತ್ತಿದ್ದು ಇದನ್ನು ವಿಶಾಲ್ ವಾಮಂಜೂರು ಎನ್ನುವ ಫೋಟೋಗ್ರಾಫರ್ ಸೆರೆ ಹಿಡಿದು ಆ ಫೋಟೊವನ್ನು ಹಂಚಿಕೊಂಡಿದ್ದಾರೆ.

ಕಾಕತಾಳೀಯ ಎಂಬಂತೆ, ಗಣೇಶನ ಹಬ್ಬದ ದಿವಸವೇ ಇಂಥ ನಿಸರ್ಗ ಸಿರಿ ಕಂಡುಬಂದಿದ್ದು ಆ ಚಿತ್ರಣದ ಫೋಟೊ ಈಗ ವೈರಲ್ ಆಗಿದೆ. ಈಚಲು ಮರಕ್ಕೆ ಪೊದೆಗಳು ಬೆಳೆದು ನಿಂತಿರುವುದು ಅತ್ತ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಗಣಪತಿಯ ಸೊಂಡಿಲಿನ ರೂಪ ಮನಸ್ಸಿಗೆ ಬರುತ್ತದೆ. ಇದನ್ನೇ ಫೋಟೋಗ್ರಾಫರ್ ತನ್ನ ಕಣ್ಣಿಗೆ ನಿಲುಕಿದಂತೆ ಕ್ಕಿಕ್ಕಿಸಿದ್ದು ಫೋಟೊ ವೈರಲ್ ಆಗುತ್ತಿದ್ದಂತೆ ಜನರು ಸ್ಥಳಕ್ಕೆ ಆಗಮಿಸ ತೊಡಗಿದ್ದಾರೆ. ನಿಸರ್ಗದಲ್ಲಿ ಅರಳಿದ ಗಣಪನನ್ನ ಕಂಡು ಜನರು ಭಕ್ತಿಯಿಂದ ನಮಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳಲ್ಲಿ ಫೋಟೊ ತೆಗೆದು ಕಣ್ಣು ತುಂಬಿಸಿಕೊಳ್ಳುತ್ತಿದ್ದಾರೆ. ಗಣೇಶೋತ್ಸವ ಸಡಗರದ ನಡುವಲ್ಲೇ ಹಸಿರ ಸಿರಿಯ ಮಧ್ಯೆ ಗಣೇಶನ ರೂಪ ಕಂಡಿರುವುದು, ಭಕ್ತ ಜನರ ಕುತೂಹಲಕ್ಕೆ ಕಾರಣವಾಗಿದೆ.
Photo Courtesy : Vishal Vamanjoor
Video:
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am