ಬ್ರೇಕಿಂಗ್ ನ್ಯೂಸ್
02-04-21 04:43 pm Mangalore Correspondent ಕರಾವಳಿ
ಮಂಗಳೂರು, ಎ.1: ಕರಾವಳಿಯಲ್ಲಿ ತುಳು ನಾಟಕಗಳಂದ್ರೆ ಬುಕ್ಕಿಂಗ್ ಮಾಡಿಡಬೇಕಾದ ದಿನಗಳಿದ್ದವು. ಟಿಕೆಟ್ ಖರೀದಿಸಿ ನೋಡಬೇಕಿದ್ದರೂ ನಾಟಕಗಳು ಹೌಸ್ ಫುಲ್ ಆಗಿರುತ್ತಿದ್ದವು. ಆದರೆ, ಕಳೆದ ಹತ್ತು ವರ್ಷಗಳಲ್ಲಿ ತುಳು ಸಿನೆಮಾದ ಗಾಳಿ ಜೋರಾದ ಬಳಿಕ ತುಳು ನಾಟಕಗಳು ಕಡಿಮೆಯಾಗಿದ್ದವು. ಆದರೆ, ತುಳುನಾಡಿನ ಖ್ಯಾತ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತೆ ರಂಗಕ್ಕಿಳಿದಿದ್ದು ತುಳು ನಾಟಕ ರಂಗಕ್ಕೇ ಗ್ರೇಟ್ ಟಚ್ ಕೊಟ್ಟಿದ್ದಾರೆ.
"ಶಿವದೂತೆ ಗುಳಿಗೆ " ಎನ್ನುವ ಹೆಸರಿನ ಪೌರಾಣಿಕ ಟಚ್ ಇರುವ ತುಳು ನಾಟಕವನ್ನು ವಿನೂತನ ಶೈಲಿಯಲ್ಲಿ ರಂಗಕ್ಕೆ ತಂದಿದ್ದು ಸೂಪರ್ ಹಿಟ್ ಎನಿಸಿಕೊಂಡಿದ್ದಾರೆ. ದಶಕದ ಹಿಂದೆ ಮಕಾಡೆ ಮಲಗಿದ್ದ ತುಳು ಚಲನಚಿತ್ರ ರಂಗವನ್ನು "ಒರಿರ್ಯದೊರಿ ಅಸಲ್ " ಎಂಬ ನಾಟಕವನ್ನು ಚಿತ್ರವನ್ನಾಗಿಸಿ ಯಶಸ್ವಿ ಗಳಿಸಿದ್ದ ವಿಜಯ್ ಕುಮಾರ್ ರಂಗಭೂಮಿಯಲ್ಲಿ ಮತ್ತೆ ವಿಜೃಂಭಿಸಿದ್ದಾರೆ.
ಕಲಾಸಂಗಮ ಕಲಾವಿದರ ಒಟ್ಟುಗೂಡುವಿಕೆಯಲ್ಲಿ ಸ್ವರಾಜ್ ಶೆಟ್ಟಿ ಮುಖ್ಯ ನಟನೆಯಲ್ಲಿ ಶಿವದೂತೆ ಗುಳಿಗೆ ನಾಟಕವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದ್ದು ನಟ್ಟಿರುಳ ರಾತ್ರಿಯಲ್ಲಿ ಗುಳಿಗ ದೈವದ ಪಾತ್ರಧಾರಿ ನೋಡುಗರಲ್ಲಿ ಮಿಂಚು ಹರಿಸಿದ್ದಾನೆ. ಎರಡೂ ಜಿಲ್ಲೆಗಳಲ್ಲಿ ಸೇರಿ ಮೇ ತಿಂಗಳ ಅಂತ್ಯದ ವರೆಗೂ ಫುಲ್ ಬುಕ್ಕಿಂಗ್ ಆಗಿದ್ದು ಹಲವು ವರ್ಷಗಳ ಬಳಿಕ ನಾಟಕವೊಂದು ತುಳುವರನ್ನು ಮತ್ತೆ ರಂಗಭೂಮಿಯತ್ತ ಸೆಳೆಯುವಂತೆ ಮಾಡಿದೆ. ನಾಟಕವು ಈಗಾಗಲೇ 97 ಯಶಸ್ವೀ ಪ್ರದರ್ಶನಗಳನ್ನು ಕಂಡಿದ್ದು, ಎಪ್ರಿಲ್ 3 ರಂದು ಎಕ್ಕೂರಿನ ಮೈದಾನದಲ್ಲಿ 100 ನೇ ಪ್ರದರ್ಶನ ಕಾಣಲಿದೆ.
ಕಳೆದ ಬಾರಿ ಕೈಕೊಟ್ಟಿದ್ದ ಲಾಕ್ಡೌನ್ !
ವಿಜಯಕುಮಾರ್ ಕೊಡಿಯಾಲ್ ಬೈಲ್ ಶಿವದೂತೆ ಗುಳಿಗೆ ಎನ್ನುವ ಪೌರಾಣಿಕ ಕಥಾನಕವನ್ನು ಕಳೆದ ವರ್ಷವೇ ರಂಗಕ್ಕೆ ತರಲು ತಯಾರಿ ನಡೆಸಿದ್ದರು. ನಾಟಕ ರಚನೆಯಿಂದ ತೊಡಗಿ ರಂಗಸಜ್ಜಿಕೆ ಎಲ್ಲವೂ ರೆಡಿಯಾಗಿತ್ತು. ಅನೇಕ ಕಡೆ ಪ್ರದರ್ಶನಕ್ಕೆ ಬುಕ್ಕಿಂಗ್ ಕೂಡ ನಿಗದಿಯಾಗಿದ್ದವು. ಆದರೆ ಮಾರ್ಚ್ ಅಂತ್ಯದಲ್ಲಿ ಕಾಣಿಸಿಕೊಂಡ ಕೊರೊನಾ ಲಾಕ್ ಡೌನ್ ನಾಟಕ ಪ್ರದರ್ಶನ ಸಾಧ್ಯವಾಗದಂತೆ ಮಾಡಿತ್ತು. ಈ ಬಾರಿಯ ಸೀಸನಲ್ಲಿ ಮತ್ತೆ ಶಿವದೂತೆ ಗುಳಿಗೆ ಯಶಸ್ಸು ಕಂಡಿದ್ದು ವಿಜಯಕುಮಾರ್ ಅವರ ಖ್ಯಾತಿಯನ್ನು ಮತ್ತಷ್ಟು ಎತ್ತರಿಸಿದೆ. ಮುಂದಿನ ಒಂದು ವರ್ಷದ ವರೆಗೂ ನಾಟಕ ಪ್ರದರ್ಶನಕ್ಕೆ ಬುಕ್ಕಿಂಗ್ ನಿಗದಿಯಾಗಿದ್ದು ಬಹುಕಾಲದ ಬಳಿಕ ತುಳು ನಾಟಕ ರಂಗ ದಾಖಲೆ ಸೃಷ್ಟಿಸಿದೆ.
ಅದ್ಭುತ ರಂಗವಿನ್ಯಾಸ, ಮಿಂಚು ಹರಿಸುವ ಲೈಟಿಂಗ್ಸ್
ವಿಭಿನ್ನ ಶೈಲಿಯ ಪೌರಾಣಿಕ ಕಥೆಯುಳ್ಳ ನಾಟಕ ಆಗಿದ್ದರಿಂದ ವೇದಿಕೆಯ ಸೆಟ್ ಅನ್ನು ಭಾರೀ ವೆಚ್ಚದಲ್ಲಿ ವಿಭಿನ್ನವಾಗಿ ರೂಪಿಸಿದ್ದಾರೆ. ಕ್ಷಣಾರ್ಧದಲ್ಲಿ ಬದಲಾಗುವ ಕೈಲಾಸ ಮತ್ತು ವೈಕುಂಠಗಳ ದೃಶ್ಯಗಳು, ಮಿಂಚು ಹರಿಸುವ ಬೆಳಕಿನ ಚಿತ್ತಾರದಲ್ಲಿ ರಂಗ ವಿನ್ಯಾಸ ವಿಶಿಷ್ಟವಾಗಿ ಮೂಡಿಬಂದಿದೆ. ಸಂಪೂರ್ಣ ಕತ್ತಲ ನಡುವೆ ಗುಳಿಗ ದೈವ ವೇದಿಕೆಗೆ ಎಂಟ್ರಿಯಾಗುವ ದೃಶ್ಯ, ಕತ್ತಲಲ್ಲಿ ಕೋರೈಸುವ ದೇಹಕ್ಕೆ ಅಳವಡಿಸಿದ ರೇಡಿಯಂ ರಿಫ್ಲೆಕ್ಟರ್, ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಕತ್ತಲಲ್ಲಿ ಅತ್ತಿಂದಿತ್ತ ಚಲಿಸುವ ಗುಳಿಗ ದೈವದ ಘನಘೋರ ಮುಖ, ಜೀಟಿಗೆ ಇವೆಲ್ಲ ನಾಟಕದ ಪ್ರಮುಖ ಆಕರ್ಷಣೆಗಳು..
ಗುಳಿಗ ಪಾರ್ದನದ ಬಗ್ಗೆ ಖ್ಯಾತ ತುಳು ಜನಪದ ವಿದ್ವಾಂಸರಾದ ಪ್ರೊ.ವಿವೇಕ್ ರೈ, ದಯಾನಂದ ಕತ್ತಲ್ ಸಾರ್, ಡಾ.ಗಣೇಶ್ ಅಮೀನ್ ಸಂಕಮಾರ್, ಬನ್ನಂಜೆ ಬಾಬು ಅಮೀನ್ ಅವರಲ್ಲಿ ಅವಲೋಕಿಸಿದ ನಂತರ ಖ್ಯಾತ ರಂಗಕರ್ಮಿ ಪರಮಾನಂದ ಸಾಲ್ಯಾನ್ ಅವರು ಗುಳಿಗ ಪಾರ್ದನವನ್ನೇ ನಾಟಕವನ್ನಾಗಿಸಿ ಸಂಭಾಷಣೆ ಹೆಣೆದಿದ್ದಾರೆ.
ಎ.ಕೆ ವಿಜಯ್ (ಕೋಕಿಲ) ಅವರ ಸಂಗೀತ ನಿರ್ದೇಶನದಲ್ಲಿ ಯಕ್ಷಧ್ರುವ ಸತೀಶ್ ಪಟ್ಲ ಅವರು ಶೀರ್ಷಿಕೆ ಹಾಡು ಹೇಳಿದ್ದು, ತೆಳಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ಕಂಠ ಸಿರಿಯಲ್ಲಿ ಧೂಪದಾರತಿ ಎಂಬ ಸುಮಧುರ ಹಾಡು ಮೂಡಿ ಬಂದಿವೆ.
ರವೀಂದ್ರ ಪ್ರಭು, ವಿಶಾಲ್ ರಾಜ್ ಕೋಕಿಲ ಮತ್ತು ಡಾ.ವೈಷ್ಣವಿಯವರ ಹಿನ್ನೆಲೆ ಧ್ವನಿಯೂ ಇದೆ. ಜನಪದ ವಿದ್ವಾಂಸ ಕೆ.ಕೆ.ಪೇಜಾವರ ಸಾಹಿತ್ಯ ನೀಡಿ ಮೈಮ್ ರಾಮದಾಸ್ ಅವರು ಹಾಡಿರುವ ಸೂಪರ್ ಹಿಟ್ ಆಗಿರುವ "ಅಂಬರಾ ಮರ್ಲೆ .. ಅಬತಾರ ಪುರುಷೆ ..ಗಿಂಡೆ ಗಿರ್ಲೊಂಡೆ ಶಿವಧೂತೆ ಗುಳಿಗೆ... " ಹಾಡು ಎಲ್ಲರ ಮನೆ ಮಾತಾಗಿದೆ. ನಾಟಕದ ಪ್ರೋಮೊ ಕೂಡ ಇದೇ ಹಾಡಿನಿಂದಾಗಿ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯುವ ಸಾಹಿತಿ ಅರುಣ್ ಉಳ್ಳಾಲ್ ಅವರು ಹಾಡೊಂದಕ್ಕೆ ಸಾಹಿತ್ಯ ನೀಡಿದ್ದಾರೆ.ಇಡೀ ನಾಟಕದ ಸಂಭಾಷಣೆಯು ಮುದ್ರಿತ ಧ್ವನಿಯಲ್ಲಿದ್ದು ಅನೇಕ ಶ್ರೇಷ್ಠ ಕಲಾವಿದರು ಕಂಠದಾನ ನೀಡಿದ್ದಾರೆ.
ಹಾಸ್ಯದ ತುಣುಕೇ ಇಲ್ಲದೆ ರೈಸಿದ ಗುಳಿಗ..!
ತುಳು ರಂಗಭೂಮಿ ಎಂದರೆ ಕೇವಲ ಹಾಸ್ಯ ಎಂದು ಜರೆಯುವ ಕಾಲವಿತ್ತು. ಆದರೆ ಒಂದೇ ಒಂದು ಹಾಸ್ಯದ ತುಣುಕೇ ಇಲ್ಲದ ಈ ಪೌರಾಣಿಕ ನಾಟಕವು ಪ್ರೇಕ್ಷಕರನ್ನ ಹಿಡಿದಿಟ್ಟಿದೆ ಎಂದರೆ ನಿಜಕ್ಕೂ ಸಂತೋಷವಾಗುತ್ತದೆಂದು ಕೊಡಿಯಾಲ್ ಬೈಲ್ ಹೇಳಿದ್ದಾರೆ. ಓಕುಲಿ ಉತ್ಸವಗಳಲ್ಲಿ ಮಾನವ ಪಿರಮಿಡ್ ರಚಿಸಿ ಮಡಕೆ ಒಡೆದವನನ್ನೇ ಎಲ್ಲರೂ ಹೀರೋ ಮಾಡುತ್ತಾರೆ. ಆದರೆ ಮಡಕೆ ಒಡೆಯುವ ಪ್ರಕ್ರಿಯೆಯಲ್ಲಿ ಪಿರಮಿಡ್ ರಚಿಸಿದ ಪ್ರತಿಯೊಬ್ಬರ ಪರಿಶ್ರಮನೂ ಇದ್ದು ಎಲ್ಲರೂ ಯಶಸ್ಸಿನ ಪ್ರಶಂಸೆಗೆ ಪಾತ್ರರು. ನನ್ನ ಸಹೋದರನಾದ ಚಂದ್ರಕುಮಾರ್ ಕೊಡಿಯಾಲ್ ಬೈಲ್ ಅವರು ಉಚಿತವಾಗಿ ನಿರಂತರ ಸಾರಿಗೆ ವ್ಯವಸ್ಥೆ ನೀಡುತ್ತಿರುವುದರಿಂದ ನಾಟಕ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದ್ದು ದೈವ್ವೇಚ್ಚೆಯೋ ಎಂಬಂತೆ ಗುಳಿಗ ದೈವದ ಕಾರಣಿಕ ನಾಟಕವಾಗಿ ಮೂಡಿ ಬಂದು ಯಶಸ್ವಿಯಾಗಿದೆ ಎಂದಿದ್ದಾರೆ.
ಅಕ್ಟೋಬರ್ ತಿಂಗಳ ನಂತರ ಕೊಲ್ಲಿ ರಾಷ್ಟ್ರಗಳಲ್ಲಿ ನಾಟಕ ಪ್ರದರ್ಶನ ನೀಡಲು ಸಿದ್ಧತೆ ನಡೆದಿದ್ದು ಕನ್ನಡ ಭಾಷೆಗೂ ನಾಟಕ ಅವತರಣಿಸಲಿದೆ ಎಂದು ಕೊಡಿಯಾಲ್ ಬೈಲ್ ಹೇಳಿದ್ದಾರೆ. ಆಮೂಲಕ ದಶಕದ ಬಳಿಕ ತುಳು ನಾಟಕ ರಂಗ ಮತ್ತೆ ವಿದೇಶದಲ್ಲಿ ಸದ್ದು ಮಾಡಲಿದೆ.
Mangalore Vijayakumar Kodialbails Tulu drama shiva doothe gulige wins hearts of Tulu people. Director Vijayakukar gives a digital touch to the drama.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm