ಬ್ರೇಕಿಂಗ್ ನ್ಯೂಸ್
20-03-21 11:10 pm Mangaluru correspondent ಕರಾವಳಿ
ಮಂಗಳೂರು, ಮಾ.20 : ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೋಶಾಲೆಯನ್ನೇ ಕೆಡವಿ ಹಾಕಿದ್ದಾರೆ. ಗೋವನ್ನು ಸಾಕುತ್ತಿದ್ದವರಿಗೂ ರಕ್ಷಣೆ ನೀಡಲು ಸಾಧ್ಯವಾಗಿಲ್ಲ. ಇವರಿಗೆ ಗೋವು ರಾಜಕೀಯ ಮಾಡುವುದಕ್ಕೆ ಮಾತ್ರ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊರವಲಯದ ಕೆಂಜಾರಿನಲ್ಲಿ ಕಪಿಲಾ ಗೋಶಾಲೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಧ್ವಂಸ ಮಾಡಲಾಗಿದೆ. ಗೋಶಾಲೆಯಲ್ಲಿರುವ ಕರುಗಳು ಬೀದಿಗೆ ಬೀಳುವಂತಾಗಿದ್ದು ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ಬಿಜೆಪಿಯವರು ಗೋವು ರಕ್ಷಣೆಗಾಗಿ ಕಾನೂನು ತರುತ್ತಾರೆ. ಕಡಿಯುವುದನ್ನು ತಪ್ಪಿಸುವ ನೆಪದಲ್ಲಿ ರಾಜಕೀಯ ಮಾಡುತ್ತಾರೆ. ಆದರೆ ಇವರು ಅಧಿಕಾರದಲ್ಲಿರುವಾಗಲೇ ದೇಶ ಬೀಫ್ ರಫ್ತು ಮಾಡುವುದರಲ್ಲಿ ಜಗತ್ತಿಗೆ ನಂಬರ್ ವನ್ ಆಗಿದೆ. ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು.

ಇಲ್ಲಿನ ಸಂಸದರು, ಶಾಸಕರೆಲ್ಲ ಬಿಜೆಪಿಯವರಿದ್ದಾರೆ. ಇವರಿಗೆ ಯಾರಿಗೂ ಗೋವಿನ ಕಾಣಿಸಲಿಲ್ಲ. ಗೋವನ್ನು ಬೀದಿಗೆ ಹಾಕುವಾಗ ಇಲ್ಲಿನ ಹಿಂದು ಸಂಘಟನೆಗಳಿಗೆ ಕಣ್ಣು ಕಾಣಲಿಲ್ಲ. ಎಲ್ಲರ ಕಣ್ಣು ಕುರುಡಾಗಿತ್ತು. ಇವರಿಗೆ ಗೋವಿನ ಮೇಲೆ ನೈಜ ಪ್ರೇಮ ಇದ್ದರೆ ಗೋಶಾಲೆ ಕೆಡಹುವುದನ್ನು ತಪ್ಪಿಸಬೇಕಿತ್ತು. ಇಲ್ಲಿನ ಸಂಸದರಿಗೆ ಗೋವು ಬರೀ ರಾಜಕೀಯಕ್ಕೆ ಮಾತ್ರ. ಇವರ ಗೋ ಪ್ರೇಮ ನಕಲಿಯೆಂದು ಮೊಯ್ದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದರು.
ನೆಲಸಮಗೊಂಡ ಗೋಶಾಲೆಯ ಮಾಲೀಕ ಪ್ರಕಾಶ್ ಶೆಟ್ಟಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಸಹಾಯಧನ ನೀಡುತ್ತೇನೆ ಎಂದು ಚೆಕ್ಕನ್ನು ಗೋಶಾಲೆಯ ಮಾಲೀಕ ಪ್ರಕಾಶ್ ಶೆಟ್ಟಿಯವರಿಗೆ ಇದೇ ವೇಳೆ ಹಸ್ತಾಂತರಿಸಿದರು. ಅಲ್ಲದೆ, ತನ್ನ ಸೋದರ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ಕೊಡಿಸುವುದಾಗಿ ಹೇಳಿದರು.
Former MLA Mohiuddin Bava handed over a cheque of Rs 1 lac to the owner of Kapila goshala Prakash Shetty for construction of a temporary goshala.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 03:20 pm
HK News Staffer
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm