ಬ್ರೇಕಿಂಗ್ ನ್ಯೂಸ್
17-03-21 01:18 pm Mangalore Correspondent ಕರಾವಳಿ
ಮಂಗಳೂರು, ಮಾ.17: ಮಂಗಳೂರು ನಗರದಲ್ಲಿ ಮತ್ತೆ ಕೊರೊನಾ ಸೋಂಕು ಕಾಲ್ಕೆರೆದುಕೊಂಡು ನಿಂತಿದೆ. ಸದ್ದಿಲ್ಲದೇ ಸೋಂಕು ಹರಡತೊಡಗಿದ್ದು, ಮೆಡಿಕಲ್ ಕಾಲೇಜುಗಳೇ ಕೋವಿಡ್ ಸೋಂಕಿನ ಟಾರ್ಗೆಟ್ ಆಗಿದ್ದಂತೆ ಕಾಣುತ್ತಿದೆ. ದೇರಳಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜಿನಲ್ಲಿ ಅತ್ಯಧಿಕ ವಿದ್ಯಾರ್ಥಿಗಳು ಮತ್ತು ಸಿಬಂದಿಗೆ ಸೋಂಕು ಕಾಣಿಸಿದ್ದರಿಂದ ಇಡೀ ಕಾಲೇಜನ್ನೇ ಬಂದ್ ಮಾಡಿದೆ.

ಇದೇ ವೇಳೆ, ಮಂಗಳೂರು ನಗರದ ಶ್ರೀದೇವಿ ಡೆಂಟಲ್ ಕಾಲೇಜು ಮತ್ತು ಬಾಸ್ಕೋಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಲ್ಲಿಯೂ ಸೋಂಕು ಕಾಣಿಸಿದೆ. ಶ್ರೀದೇವಿ ಕಾಲೇಜಿನಲ್ಲಿ 50ರಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ವೇಳೆ, ಬಾಸ್ಕೋಸ್ ಕಾಲೇಜಿನಲ್ಲಿ 12 ಮಂದಿಗೆ ಸೋಂಕು ಕಂಡುಬಂದಿದೆ. ಹೀಗಾಗಿ ಇವೆರಡು ಕಾಲೇಜುಗಳನ್ನೂ ಸೀಲ್ ಡೌನ್ ಮಾಡಲಾಗಿದೆ.
ಯೇನಪೋಯ ಕಾಲೇಜಿನಲ್ಲಿ ಬಹುತೇಕ ಎಲ್ಲ ಮೆಡಿಕಲ್ ಕಾಲೇಜು ವಿಭಾಗಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳಿಗೆ ತರಗತಿಗೆ ರಜೆ ಘೋಷಿಸಿ ಮನೆಗೆ ಕಳುಹಿಸಲಾಗಿದೆ. ಆದರೆ, ಯೇನಪೋಯ ಕಾಲೇಜಿನವರು ತೆಗೆದುಕೊಂಡ ನಿರ್ಧಾರದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಗರಂ ಆಗಿದ್ದು, ನೋಟೀಸ್ ಜಾರಿಗೊಳಿಸಿದ್ದಾರೆ.

ಯೇನಪೋಯಕ್ಕೆ ಜಿಲ್ಲಾಧಿಕಾರಿ ನೋಟಿಸ್
ಯೇನಪೋಯದಲ್ಲಿ ಎರಡು ದಿನದ ಅಂತರದಲ್ಲಿ 50ಕ್ಕೂ ಹೆಚ್ಚು ಮಂದಿಗೆ ಸೋಂಕು ಕಂಡುಬಂದಿದೆ ಎನ್ನಲಾಗುತ್ತಿದ್ದು, ಹೀಗಿದ್ದರೂ ಸಂಪರ್ಕಿತರನ್ನು ಪ್ರತ್ಯೇಕವಾಗಿರಿಸದೆ ಮನೆಗೆ ಕಳಿಸಿದ್ದು ಎಷ್ಟು ಸರಿ ಎಂದು ಜಿಲ್ಲಾಧಿಕಾರಿಗಳು ಮೆಡಿಕಲ್ ಕಾಲೇಜು ಆಡಳಿತಾಧಿಕಾರಿಗಳನ್ನು ದಬಾಯಿಸಿದ್ದಾರೆ. ಕೊರೊನಾ ಸೋಂಕು ತಡೆ ನಿರ್ಬಂಧಿತ ಕಾಯ್ದೆ ಮತ್ತು ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ಕಾಯ್ದೆ ಪ್ರಕಾರ ಯೆನಪೋಯ ಮೆಡಿಕಲ್ ಕಾಲೇಜಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ವೈದ್ಯಕೀಯ ಶಿಕ್ಷಣ ಸಂಸ್ಥೆಯಾಗಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣದ ಕಾನೂನಿನ ಬಗ್ಗೆ ಜ್ಞಾನ ಇಲ್ಲದ ರೀತಿ ವರ್ತಿಸಿದರೆ ಹೇಗೆ ಎಂದು ಜಿಲ್ಲಾಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಯೇನಪೋಯದಲ್ಲಿ ಸೋಂಕು ದೃಢಪಡುತ್ತಿದ್ದಂತೆ, ಎರಡು ದಿನಗಳ ಹಿಂದೆ ಕಾಲೇಜನ್ನು ಪೂರ್ತಿಯಾಗಿ ಬಂದ್ ಮಾಡಿರುವ ಆಡಳಿತ ವಿವಿಧ ಕಡೆಯ ವಿದ್ಯಾರ್ಥಿಗಳಿಗೆ ರಜೆ ನೀಡಿತ್ತು.
ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳೇ ಹೆಚ್ಚಿದ್ದು ಅಲ್ಲಿನ ವಿದ್ಯಾರ್ಥಿಗಳಿಗೇ ಹೆಚ್ಚು ಸೋಂಕು ಕಂಡುಬರುತ್ತಿರುವುದು ಮೆಡಿಕಲ್ ಕಾಲೇಜು ಆಡಳಿತಗಳ ಚಿಂತೆಗೆ ಕಾರಣವಾಗಿದೆ.
ಉಳ್ಳಾಲದ ನರ್ಸಿಂಗ್ ಕಾಲೇಜು, ಹಾಸ್ಟೆಲ್ ಸೀಲ್ ಡೌನ್ ! ಒಂದೇ ದಿನ 40 ವಿದ್ಯಾರ್ಥಿಗಳಿಗೆ ಕೊರೊನಾ !
Mangalore Sridevi college and Boscoss college have been seal down by health authorities after spiking in covid cases in students of colleges.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm