ಬ್ರೇಕಿಂಗ್ ನ್ಯೂಸ್
16-03-21 09:45 pm Mangaluru correspondent ಕರಾವಳಿ
ಉಳ್ಳಾಲ, ಮಾ.16: ದನದ ಕರುವನ್ನು ಕಣ್ಣಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಗೋಣಿ ಚೀಲದಲ್ಲಿ ತುಂಬಿ ಆಕ್ಟಿವಾದಲ್ಲಿ ಸಾಗಿಸುತ್ತಿದ್ದ ಮೂವರನ್ನು ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆಯಲ್ಲಿ ಸಾರ್ವಜನಿಕರು ತಡೆದಿದ್ದು ದನಗಳ್ಳರು ಕರುವನ್ನ ರಸ್ತೆಗೆಸೆದು ಪಲಾಯನಗೈದ ಘಟನೆ ನಡೆದಿದೆ.
ರಾಣಿಪುರ ಗಂಡಿ ಪ್ರದೇಶದಿಂದ ಸೇವಂತಿ ಗುಡ್ಡೆಗೆ ಆಕ್ಟಿವಾ ಸ್ಕೂಟರಲ್ಲಿ ಮೂರು ಮಂದಿ ಪಯಾಣಿಸುತ್ತಿದ್ದ ವೇಳೆ ಎದುರಿನಲ್ಲಿ ಇರಿಸಿದ್ದ ಗೋಣಿ ಚೀಲ ಕೆಳಗೆ ಬಿದ್ದಿದೆ. ಇದನ್ನ ಕಂಡ ಸ್ಥಳೀಯ ಯುವಕನೋರ್ವ ಸ್ಕೂಟರ್ ಸವಾರರಲ್ಲಿ ಬಿದ್ದಿದ್ದು ಏನೆಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸಿದ ಸವಾರರು, ಅದು ವೇಸ್ಟೇಜ್ ಎಂದಿದ್ದಾರೆ. ಯುವಕ ಹತ್ತಿರ ಬಂದು ನೋಡಿದಾಗ ದನದ ಕರು ಗೋಣಿ ಚೀಲದಲ್ಲಿ ಇರುವುದು ತಿಳಿದು ಕಿರುಚಾಡಿದ್ದಾನೆ. ತಕ್ಷಣ ಸ್ಥಳೀಯರು ಜಮಾಯಿಸಿದ್ದು ಸ್ಕೂಟರ್ ಸವಾರರು ಕರುವನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಗೋಣಿ ಚೀಲದಲ್ಲಿ ಉಸಿರುಗಟ್ಟಿದ್ದ ಕರುವನ್ನ ಹೊರತೆಗೆದು ಸ್ಥಳೀಯರು ಉಪಚರಿಸಿದ್ದು ಕರುವಿನ ಕಣ್ಣು ಹಾನಿಗೊಳಗಾಗಿದ್ದು ಮತ್ತು ದೇಹಕ್ಕೆ ಚಿತ್ರಹಿಂಸೆ ನೀಡಿದ್ದು ಕಂಡುಬಂದಿದೆ.
ವಿಶ್ವ ಹಿಂದು ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡವು ಕರುವನ್ನು ಕಸಾಯಿ ಖಾನೆಗೆ ಒಯ್ಯುತ್ತಿದ್ದ ದನಗಳ್ಳರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕೆಂದು ಉಳ್ಳಾಲ ಪೊಲೀಸರಿಗೆ ಆಗ್ರಹಿಸಿದ್ದು ದೂರು ನೀಡಲು ತಯಾರಿ ನಡೆಸಿದೆ.
Three men who were carrying a live calf in a sack for slaughter were caught in ullal, Mangalore and the calf was rescued by locals.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm