ಬ್ರೇಕಿಂಗ್ ನ್ಯೂಸ್
01-03-21 11:08 am Mangalore Correspondent ಕರಾವಳಿ
ಮಂಗಳೂರು, ಮಾ.1: ಮದುವೆಯಾದ ದಿನವೇ ನವ ವಧು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ನಗರದ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ.
ಅಡ್ಯಾರ್ ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಸೋಮವಾರ ಮುಂಜಾವಿನ ಸಮಯದಲ್ಲಿ ಸಾವು ಕಂಡಿದ್ದಾರೆ.

ಭಾನುವಾರವಷ್ಟೇ ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ನಡೆದಿತ್ತು. ಅಡ್ಯಾರ್ ಕಣ್ಣೂರು ಜುಮಾ ಮಸ್ಜಿದ್‌ನಲ್ಲಿ ನಿಖಾ ನಡೆದಿತ್ತು. ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಬಳಿಕ ಸಂಪ್ರದಾಯದಂತೆ ಮದುಮಗ ಮುಬಾರಕ್ ಅತ್ತೆಯ ಮನೆಗೆ ಆಗಮಿಸಿದ್ದರು. ನವಜೋಡಿ ಅತ್ಯಂತ ಸಂತಸದಲ್ಲೇ ಇದ್ದರು. ಈ ನಡುವೆ ಒಂದು ರಾತ್ರಿ ಕಳೆಯುವಷ್ಟರಲ್ಲಿ ನವ ವಧುವಿಗೆ ಹೃದಯಾಘಾತ ಆಗಿದೆ ಎನ್ನಲಾಗುತ್ತಿದೆ. ಸೋಮವಾರ ಮುಂಜಾವಿನ 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಸ, ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಶೋಕಸಾಗರ ಎದ್ದಿದೆ. ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ. ಇಂದು ಮಸೀದಿಯಲ್ಲಿ ಲುಹರ್ ನಮಾಝ್ ನಂತರ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Video:
In a shocking incident reported from Adyar in Mangalore a bride who entered wedded life a few hours earlier died due to a Massive heart attack on Monday, March 1 morning. The deceased has been identified as Laila Afia (23) daughter of KHK Abdul Karim.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 03:20 pm
HK News Staffer
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
11-10-26 05:37 pm
Mangaluru Staffer
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm