ಬ್ರೇಕಿಂಗ್ ನ್ಯೂಸ್
21-02-21 10:41 pm Headline Karnataka News Network ಕರಾವಳಿ
ಮಂಗಳೂರು, ಫೆ.21: ಉತ್ತರ ಪ್ರದೇಶ ಮುಖ್ಯಮಂತ್ರಿ, ಹಿಂದು ಸಂಘಟನೆ ಕಾರ್ಯಕರ್ತರ ಕಣ್ಮಣಿ ಯೋಗಿ ಆದಿತ್ಯನಾಥ್ ಇಂದು ಕರ್ನಾಟಕ ಕರಾವಳಿಗೆ ಆಗಮಿಸಿದ್ದರು. ಕೇರಳದ ಕಾಸರಗೋಡಿನಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಯಾತ್ರೆ ರ್ಯಾಲಿಗೆ ಚಾಲನೆ ನೀಡಲು ಮಧ್ಯಾಹ್ನ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ನಾಲ್ಕು ವರ್ಷಗಳ ಬಳಿಕ ಮಂಗಳೂರಿಗೆ ಬಂದ ಯೋಗಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರತಿನಿಧಿಗಳು ಶಾಲು ಹೊದಿಸಿ ಸ್ವಾಗತಿಸಿದರು.
ಎರಡುವರೆ ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಯೋಗಿ ಅವರು, ನೇರವಾಗಿ ರಸ್ತೆ ಮೂಲಕ ಕಾಸರಗೋಡಿಗೆ ತೆರಳಿದರು. ಎಸ್ ಪಿಜಿ ಭದ್ರತೆಯೊಂದಿಗೆ ಖಾಲಿ ರಸ್ತೆಯಲ್ಲಿ ಬಂದ ಯೋಗಿ ಆದಿತ್ಯನಾಥ್ ಅವರ ಕಾರನ್ನು ರಸ್ತೆಯುದ್ದಕ್ಕೂ ಅಲ್ಲಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಮೋದಿ ಕಾರಿನಲ್ಲಿ ಬಂದ ರೀತಿ ಅಲ್ಲಲ್ಲಿ ಸೇರಿದ್ದ ಕಾರ್ಯಕರ್ತರು ಕರತಾಡನ ಮಾಡಿದರು. ಕಾಸರಗೋಡಿನಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ವಿಜಯ ಯಾತ್ರೆ ಚುನಾವಣಾ ಪ್ರಚಾರ ರ್ಯಾಲಿಗೆ ಯೋಗಿ ಚಾಲನೆ ನೀಡಿದರು. ಕಾಸರಗೋಡಿನ ತಾಳಿಪಡ್ಪು ಮೈದಾನದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಉದ್ದೇಶಿಸಿ ಯೋಗಿ ಭಾಷಣ ಮಾಡಿದರು. ಕೇರಳದಲ್ಲಿ ಹಿಂದು ವಿರೋಧಿ ಸರಕಾರ ಇದ್ದು ಶಬರಿಮಲೆ ವಿಚಾರದಲ್ಲಿ ಸಾಬೀತಾಗಿದೆ. ಕಮ್ಯುನಿಸ್ಟರ ಅಧಿಕಾರವನ್ನು ಕಿತ್ತು ಬಿಜೆಪಿ ಕೈಗೆ ನೀಡುವಂತೆ ಸೇರಿದ್ದ ಜನರಿಗೆ ಕರೆ ನೀಡಿದರು.
ಝೆಡ್ ಪ್ಲಸ್ ಭದ್ರತೆ ; ಕದ್ರಿಯಲ್ಲಿ ಕಟ್ಟುನಿಟ್ಟು
ಸಂಜೆ ಏಳು ಗಂಟೆ ಸುಮಾರಿಗೆ ಮಂಗಳೂರಿಗೆ ಮರಳಿದ ಯೋಗಿ ಆದಿತ್ಯನಾಥ್, ತಮ್ಮ ಗೋರಖ್ ಪುರದ ಶಾಖಾ ಮಠವಾದ ಕದ್ರಿ ಜೋಗಿ ಮಠಕ್ಕೆ ಭೇಟಿ ನೀಡಿದರು. ಎಸ್ ಪಿಜಿಯ ಝೆಡ್ ಪ್ಲಸ್ ಭದ್ರತೆಯ ಕಾರಣ ಮಠದ ಆವರಣಕ್ಕೂ ಯಾರಿಗೂ ಪ್ರವೇಶ ಇರಲಿಲ್ಲ. ಸ್ಥಳೀಯ ಪೊಲೀಸರು, ಬಿಜೆಪಿ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿನ ಗೇಟಿನಲ್ಲೇ ತಡೆದು ನಿಲ್ಲಿಸಿದ್ದರು. ಬುಲೆಟ್ ಪ್ರೂಫ್ ವಾಹನದಲ್ಲಿ ಬಂದ ಯೋಗಿ ಜನರಿಗೆ ಕೈಬೀಸುತ್ತಾ ಮಠದ ಒಳಕ್ಕೆ ಹೋದರು. ಅರ್ಧ ಗಂಟೆ ಕಾಲ ಮಠದಲ್ಲಿದ್ದ ಯೋಗಿ ಅಲ್ಲೇನು ಮಾಡಿದ್ರು ಅನ್ನೋದು ಕುತೂಹಲದ ಸಂಗತಿ.
ಕದ್ರಿಯ ಕಾಲಭೈರವೇಶ್ವರನಿಗೆ ಯೋಗಿ ಪೂಜೆ
ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಗೋರಖಪುರ ಮಠದ ಮುಖ್ಯ ಸ್ವಾಮೀಜಿ. ಮಂಗಳೂರಿನ ಕದ್ರಿ ಸೇರಿದಂತೆ ಶಾಖಾ ಮಠಗಳಿಗೆ ಸ್ವಾಮೀಜಿಯನ್ನು ನೇಮಕ ಮಾಡುವ ಅಧಿಕಾರ ಗೋರಖಪುರ ಮಠಕ್ಕೆ ಇರುತ್ತದೆ. ಇಂಥ ಪವರ್ ಫುಲ್ ಸ್ವಾಮೀಜಿ ಆಗಿರುವ ಯೋಗಿ ಆದಿತ್ಯನಾಥ್, ಕೇವಲ ಸ್ವಾಮೀಜಿ ಮಾತ್ರವಲ್ಲ. ಹಲವು ವರ್ಷಗಳಿಂದ ಗೋರಖ್ ಪುರದ ಸಂಸದರಾಗಿರುವ ಯೋಗಿ ಈ ಬಾರಿ ಉತ್ತರ ಪ್ರದೇಶ ಸಿಎಂ ಪಟ್ಟಕ್ಕೇರಿದ್ದಾರೆ. ಸಿಎಂ ಆದ ಮೊದಲಿಗೆ, ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಮಠಕ್ಕೆ ಆಗಮಿಸಿದ್ದರು. ಇಂದು ಎರಡನೇ ಬಾರಿ ಮಂಗಳೂರಿಗೆ ಬಂದ ಯೋಗಿ, ಮಠಕ್ಕೆ ಬಂದು ಅರ್ಧ ಗಂಟೆ ಅಮೂಲ್ಯ ಕ್ಷಣಗಳನ್ನು ಕಳೆದಿದ್ದಾರೆ. ಕ್ಷೇತ್ರದ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದ ಯೋಗಿ, ಬಳಿಕ ಮಠದ ಸ್ವಾಮೀಜಿಯಿಂದ ಫಲಾಹಾರ ಸ್ವೀಕರಿಸಿದರು.
ಯೋಗಿ ಭೇಟಿ ಮಾಡಿದ ಪೇಜಾವರ ಸ್ವಾಮೀಜಿ
ಇದೇ ವೇಳೆ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಕದ್ರಿಯ ಜೋಗಿಮಠದಲ್ಲಿ ಯೋಗಿಯನ್ನು ಭೇಟಿಯಾಗಿದ್ದಾರೆ. ರಾಮಂದಿರ ತೀರ್ಥಕ್ಷೇತ್ರ ಟ್ರಸ್ಟಿನ ವಿಶ್ವಸ್ತರಾಗಿರುವ ಸ್ವಾಮೀಜಿ, ಈ ಬಾರಿ ಅಯೋಧ್ಯೆಯಲ್ಲಿ ರಾಮನವಮಿಯನ್ನು ವಿಶೇಷವಾಗಿ ಆಚರಿಸಲು ಅನುವು ಮಾಡುವಂತೆ ಕೇಳಿಕೊಂಡಿದ್ದಾರೆ. ರಾಮನವಮಿಗೆ ನಿರಂತರ ಭಜನೆ, ಸಂಕೀರ್ತನೆ, ರಾಮಲಲ್ಲಾನಿಗೆ ಪೂಜೆ ನಡೆಸಲು ಅವಕಾಶ ಮಾಡಬೇಕು. ಇದನ್ನು ತಮ್ಮದೇ ನೇತೃತ್ವದಲ್ಲಿ ನಡೆಸುವಂತಾಗಬೇಕು ಎಂದು ಪೇಜಾವರ ಸ್ವಾಮೀಜಿ ಕೇಳಿಕೊಂಡಿದ್ದು ಯೋಗಿಯವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅಯೋಧ್ಯೆಯಲ್ಲಿ ಯಾತ್ರಿ ನಿವಾಸಕ್ಕೆ ಗ್ರೀನ್ ಸಿಗ್ನಲ್
ಇದಕ್ಕು ಮುನ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸಿಎಂ ಯೋಗಿ ಅವರನ್ನು ಭೇಟಿಯಾಗಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಯೋಧ್ಯೆಯಲ್ಲಿ ಕರ್ನಾಟಕದಿಂದ ತೆರಳುವ ಭಕ್ತರಿಗಾಗಿ ಯಾತ್ರಿ ನಿವಾಸ ರಚಿಸಲು ಐದು ಎಕರೆ ಭೂಮಿ ನೀಡುವ ಬಗ್ಗೆ ಈಗಾಗ್ಲೇ ಸಿಎಂ ಯಡಿಯೂರಪ್ಪ ನೀಡಿರುವ ಮನವಿಯನ್ನು ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ಐದು ಎಕರೆ ಜಾಗ ಮಂಜೂರು ಮಾಡಿದರೆ ನಾವು ಸೂಕ್ತವಾಗಿ ಅಭಿವೃದ್ಧಿ ಪಡಿಸಲು ಮುಂದಾಗುತ್ತೇವೆ ಎಂದು ಕೋಟ ಮನವಿ ಮಾಡಿದ್ದಾರೆ. ಈ ಮನವಿ ಬಗ್ಗೆ ಸ್ಪಂದಿಸಿ ಜಾಗ ಮಂಜೂರು ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಯೋಗಿ ತಿಳಿಸಿದ್ದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಪ್ತರು ತಿಳಿಸಿದ್ದಾರೆ.
Uttar Pradesh Chief Minister Yogi Adityanath visited Kadri Yogeshwara (Jogi) Mutt in Mangalore on Sunday 21, Feb 2021. The UP CM had attended BJP's Vijaya Yathre in Kasargod, Kerala.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am