ಬ್ರೇಕಿಂಗ್ ನ್ಯೂಸ್
20-02-21 05:42 pm Mangalore Correspondent ಕರಾವಳಿ
ಉಳ್ಳಾಲ: ಫೆ.20 : HLH (Hemophagocyti Lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಏಳು ವರ್ಷದ ಮಗು ತನಿಶ್ ಗಟ್ಟಿಯ ಹೆಚ್ಚಿನ ಚಿಕಿತ್ಸೆಗಾಗಿ 45 ಲಕ್ಷ ರೂಪಾಯಿ ವೆಚ್ಚ ತಗುಲಲಿದ್ದು ವಿಶ್ವ ಹಿಂದು ಪರಿಷತ್, ಬಜರಂಗದದ ವತಿಯಿಂದ ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ದಿನದಂದು ಸನ್ನಿಧಾನದಲ್ಲಿ ಸಾರ್ವಜನಿಕರಲ್ಲಿ ಭಿಕ್ಷೆ ಎತ್ತಿ 30,000 ನಗದನ್ನು ಕ್ರೋಡೀಕರಿಸಿದೆ.

ಮಂಗಳೂರಿನ ವಿವಿ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಸೆಕ್ಯುರಿಟಿ ಕೆಲಸದಲ್ಲಿರುವ ಬಜಾಲ್ ಕಾವು ಬೈಲ್ ನಿವಾಸಿ ನವೀನ್ ಗಟ್ಟಿಯವರ ಏಕೈಕ ಮಗ ತನಿಷ್ ಗಟ್ಟಿ(7) Hemophagocyti Lymphohistocytosis(ಬೆನ್ನು ಮೂಳೆ ಕ್ಯಾನ್ಸರ್) ಎಂಬ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಾನೆ. ಪ್ರಸ್ತುತ ತನಿಷ್ ಮಂಗಳೂರಿನ K.M.C ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ವೈದ್ಯರು ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದಾಗಿ ಹೇಳಿದ್ದಾರೆ. ಅವರ ನಿರ್ದೇಶನದಂತೆ ಮಗುವನ್ನು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜುಂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ ಕೊಂಡೊಯ್ದು ಪರಿಶೀಲಿಸಿದ್ದು ಅಲ್ಲಿಯ ಉನ್ನತ ವೈದ್ಯರು ಮೂಳೆ ಅಸ್ಥಿ ಮಜ್ಜೆ ಕಸಿ ( Bone Marrow Transplant) ಮಾಡಲು ಸೂಚಿಸಿದ್ದಾರೆ. ಈ ಚಿಕಿತ್ಸೆಗೆ ಅಂದಾಜು ಸುಮಾರು 45 ಲಕ್ಷ ರೂಪಾಯಿ ಖರ್ಚು ತಗಲಲಿದ್ದು ಅಷ್ಟೊಂದು ದೊಡ್ಡ ಮೊತ್ತವನ್ನು ಕ್ರೋಢೀಕರಿಸಲು ಸೆಕ್ಯುರಿಟಿ ಗಾರ್ಡ್ ನವೀನ್ ಗಟ್ಟಿ ಅವರ ಕುಟುಂಬ ಪರದಾಡುವಂತಾಗಿದೆ.

ಇದುವರೆಗಿನ ಚಿಕಿತ್ಸೆಗೆ ಅನೇಕ ಹೃದಯ ವೈಶಾಲ್ಯ ದಾನಿಗಳು ತಮ್ಮಿಂದಾದ ಸಹಾಯ ಹಸ್ತವನ್ನು ನೀಡಿದರ ಫಲವಾಗಿ ತನಿಷ್ ಇಂದು ಬದುಕುಳಿದಿದ್ದಾನೆ. ತನಿಷ್ ನ ಚಿಕಿತ್ಸೆಗೆ ಸಹಾಯ ನೀಡುವಂತೆ ಪೋಷಕರು ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರ ಮೊರೆ ಹೋಗಿದ್ದು ಮರುಗಿದ ಶಾಸಕರು ತನ್ನ ವೈಯಕ್ತಿಕ ಮತ್ತು ಸ್ನೇಹಿತ ವರ್ಗದವರಿಂದ ಸಹಾಯ ಧನವನ್ನು ದೊರಕಿಸುವ ಭರವಸೆ ನೀಡಿದ್ದಾರೆ.


ತನಿಷ್ ಗಟ್ಟಿ ಚಿಕಿತ್ಸೆಗೆ ಬೃಹತ್ ಮೊತ್ತ ಕ್ರೋಡೀಕರಿಸಲು ಬಜರಂಗದಳ ಬೋಳಾರ ಶಾಖೆಯವರು ಪಣ ತೊಟ್ಟಿದ್ದು ಇದುವರೆಗೆ 8 ಲಕ್ಷ ಹಣವು ಕ್ರೋಢೀಕೃತವಾಗಿದೆ.

ವಿಶೇಷ ವೇಷದಲ್ಲಿ ವಿಕ್ಕಿ ಶೆಟ್ಟಿ ಬೆದ್ರರಿಂದಲೂ ಭಿಕ್ಷಾಟನೆ
ತನಿಷ್ ಅವರ ಚಿಕಿತ್ಸೆಗಾಗಿ ನಮ್ಮ ತುಳುನಾಡು ಟ್ರಸ್ಟ್(ರಿ) ಆಶಿಸಾ ನಿಧಿ ಯೋಜನೆಯಡಿ ಸಾಮಾಜಿಕ ಕಾರ್ಯಕರ್ತ ವಿಕ್ಕಿ ಶೆಟ್ಟಿ ಬೆದ್ರ ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ಧೃಢಕಲಶಾಭಿಷೇಕದಲ್ಲಿ ನಿನ್ನೆಯಿಂದ(ಫೆ.19) ನಾಳೆ ರಾತ್ರಿಯವರೆಗೂ ಭಕ್ತಾದಿಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ. ವಿಕ್ಕಿ ಶೆಟ್ಟಿ ಬೆದ್ರ ಅವರು ನಾಲ್ಕನೇ ಬಾರಿ ಬಡ ಜನರ ಸೇವೆಗಾಗಿ ವಿಶೇಷ ವೇಷ ಧರಿಸಿ ಸತ್ಕಾರ್ಯ ಮಾಡುತ್ತಿದ್ದಾರೆ.

ತನಿಷ್ ಗಟ್ಟಿ ಚಿಕಿತ್ಸೆಗೆ ಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ.
Name :- Naveen
Address:- D.No 8-125/1
Kudthadka kankanady bajal mangalore
Branch:- Bajal (Mangalore)
State bank of India
Account number:-38955686728
IFSC CODE:- SBINOOO9052
Mob :(Google pay) 7899500542
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 03:20 pm
HK News Staffer
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm