ಬ್ರೇಕಿಂಗ್ ನ್ಯೂಸ್
17-02-21 07:36 pm Mangaluru Correspondent ಕರಾವಳಿ
ಉಳ್ಳಾಲ, ಫೆ.17: ಕೊರೊನಾದಂತಹ ಮಹಾಮಾರಿ ನಿರ್ಮೂಲನೆಗೂ ವ್ಯಾಕ್ಸಿನ್ ಬಂದಿದೆ. ಭಾರತ ದೇಶದ ಅಸಲಿ ಶತ್ರುವಾಗಿರುವ ಆರೆಸ್ಸೆಸ್ ನಿರ್ಮೂಲನೆಗೆ ಪ್ರತಿ ಗಲ್ಲಿಗಳಲ್ಲೂ ವ್ಯಾಕ್ಸಿನ್ ನೀಡುವ ಕಾರ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಡಲಿದೆ ಎಂದು ಪಿಎಫ್ ಐ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದರು.



"ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜೊತೆಗೆ" ಧ್ಯೇಯ ವಾಕ್ಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ ಐ) ಆಯೋಜಿಸಿದ " ಪಾಪ್ಯುಲರ್ ಫ್ರಂಟ್ ಡೇ" ಪ್ರಯುಕ್ತ ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಒಂಬತ್ತು ಕೆರೆ ಅನಿಲ ಕೌಂಪೌಂಡ್ ಮೈದಾನದ ವರೆಗೆ ಪಿಎಫ್ ಐ ಕಾರ್ಯಕರ್ತರಿಂದ ಆಕರ್ಷಕ ಬೃಹತ್ ಯುನಿಟಿ ಮಾರ್ಚ್ ನಡೆಯಿತು. ಬಳಿಕ ಅನಿಲ ಕಂಪೌಡ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿ ಅಧಿಕಾರ ಗದ್ದುಗೆಯಲ್ಲಿ ಕೂತಿರುವ ಎರಡು ಮಹಾನ್ ನಾಟಕಕಾರರಿಗೆ ಸಂದೇಶ ನೀಡಲು ಈ ಸಮಾವೇಶ ಸಮರ್ಪಿಸಲಾಗುತ್ತಿದೆ. ಒಂದು ಕಾಲದಲ್ಲಿ ಪಿಎಫ್ ಐ ಗಲ್ಲಿ ಗಲ್ಲಿಗೆ ಹೋಗಿ ಸಂಘಟನೆ ಬಗ್ಗೆ ಪ್ರಚಾರ ಮಾಡುತ್ತಿದ್ದು, ಮಾಧ್ಯಮದವರಿಗೆ ನಮ್ಮ ಹೋರಾಟದ ಕುರಿತು ಪ್ರೆಸ್ ರಿಲೀಸ್ ಕೊಟ್ಟರೂ ನಗಣ್ಯ ಮಾಡುತ್ತಿದ್ದ ಕಾಲವಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು ದೇಶವೇ ನಾವು ಯಾರೂಂತ ಹಿಂದಿರುಗಿ ನೋಡುವಂತಾಗಿದೆ. ಆರೆಸ್ಸೆಸ್ ಅನ್ನು ಸಾಕಿದರೆ ಗವರ್ನರ್ ಮುಂತಾದ ಉನ್ನತ ಹುದ್ದೆಗಳನ್ನು ನೀಡುವ ಕಾಲವಿದು. ಅದರ ವಿರುದ್ದ ಮಾತಾಡಿದರೆ ಇ.ಡಿ. ಇನ್ನಿತರ ತನಿಖಾ ಸಂಸ್ಥೆಗಳಿಂದ ಪ್ರಹಾರ ನಡೆಯುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಪ್ರತಿ ದಿನವೂ ಪಿಎಫ್ ಐ ಟಾರ್ಗೆಟ್ ಆಗುತ್ತಿದೆ. ದೆಹಲಿಯಲ್ಲಿ ಸಿಎಎ ಪ್ರತಿಭಟನೆಯಲ್ಲು ಇದೇ ಆಗಿದ್ದು, ನಮ್ಮ ಸಂಘಟನೆ ಹಿಂದೆ ಇಡಿಯನ್ನು ಕೇಂದ್ರ ಸರಕಾರ ಛೂ ಬಿಟ್ಟಿದೆ. ಇ.ಡಿ ಮತ್ತಿತರ ತನಿಖಾ ಸಂಸ್ಥೆಗಳು ಇಂದು ಆರೆಸ್ಸೆಸ್ ಪ್ರೇರಿತ ಸುಪಾರಿ ಕಿಲ್ಲರ್ ಗಳಂತೆ ವರ್ತಿಸುತ್ತಿವೆ. ಇಂತಹ ತನಿಖಾ ಸಂಸ್ಥೆಗಳಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ. ಕಾನೂನು ರೀತಿಯಲ್ಲೇ ಇದನ್ನೆಲ್ಲ ಸದೆಬಡಿದು ಹೋರಾಟದಲ್ಲಿ ಮುನ್ನುಗ್ಗಬೇಕೆಂದರು.

ನಮ್ಮ ಹೋರಾಟಗಳನ್ನು ನಿಗ್ರಹಿಸಲು ಇಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುವ ಬದಲು ಹೊಸತನ್ನು ಯೋಚಿಸಿ. ಆಲಿಯಾಗೆ ಸಹಾಯ ಮಾಡಿದ್ದಕ್ಕೆ ನಮಗೆ ಐ.ಟಿ ನೋಟೀಸ್ ಬಂತು. ನಮ್ಮಲ್ಲಿ ಕೇಳುತ್ತಾರೆ, ಆಲಿಯಾಗೆ ಸಹಾಯ ಯಾಕ್ ಮಾಡಿದ್ರಿ ಎಂದು. ಎನ್ಐಎ ತನಿಖಾ ಸಂಸ್ಥೆಯೂ ನಮ್ಮಲ್ಲಿ 100 ಕೋಟಿ ಎಲ್ಲಿಂದ ಬಂತು ಎಂದು ಕೇಳುತ್ತಿದೆ. ನಾವು 100 ಕೋಟಿಯನ್ನ ಒಂದು ದಿವಸದಲ್ಲಿ ಒಟ್ಟುಗೂಡಿಸುತ್ತೇವೆ. ಬಿರಿಯಾನಿ ತಿಂದ್ರಿ, ಬಿರಿಯಾನಿ ತಿಂದ್ರಿ ಎಂದು ಮೂದಲಿಸುತ್ತೀರಿ. ನಾವು ಪ್ರತಿ ವಾರದ ಜುಮಾ ನಮಾಝಿಗೆ ಬಿರಿಯಾನಿ ತಿನ್ನೋ ತಾಕತ್ತಿನವರು ಎಂದರು.
ರಾಮಮಂದಿರ ನಿರ್ಮಾಣವಾಗಿ ದೇಶದಲ್ಲಿ ಮತೀಯ ಗಲಭೆಗಳು ಕಮ್ಮಿ ಆಗಿದೆಯೇ ?RSS ಮತ್ತು ಹಿಂದುತ್ವಕ್ಕೆ ಯಾವುದೇ ಸಂಬಂಧವಿಲ್ಲ. ಬದಲಾಗಿ ಅವರೇ ದೊಡ್ಡ ಹಿಂದು ವಿರೋಧಿಗಳು. RSS ಗೆ ಯಾವುದೇ ಬ್ಯಾಂಕ್ ಅಕೌಂಟ್ ಇಲ್ಲ. ಇದರ ಆದಾಯದ ಮೂಲವನ್ನು ಇ.ಡಿ ಪರಿಶೀಲಿಸಲಿ. ರಾಮ ಮಂದಿರದ ಹೆಸರಲ್ಲಿ ದೇಣಿಗೆ ಕೇಳಲು ಬಂದರೆ ಒಂದು ರೂಪಾಯಿ ಕೊಡಬೇಡಿ ಎಂದು ಮುಸ್ಲಿಮರಲ್ಲಿ ಕರೆ ಕೊಟ್ಟರು. ಯಾಕೆಂದರೆ ನಿರ್ಮಾಣವಾಗುತ್ತಿರುವುದು ರಾಮ ಮಂದಿರವಲ್ಲ, ಆರೆಸ್ಸೆಸ್ ಮಂದಿರ ಎಂದು ಲೇವಡಿ ಮಾಡಿದರು.
SDPI ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲು ಮಾತನಾಡಿ ಪಿಎಫ್ ಐ ಯಾವತ್ತೂ ದೇಶದ ಹಿಂದುಗಳನ್ನು ವಿರೋಧಿಸಿಲ್ಲ. ಸ್ವಾಮಿ ವಿವೇಕಾನಂದ, ರಾಮಕೃಷ್ಣರನ್ನು ಒಪ್ಕೊಂಡವರೇ ನಿಜವಾದ ಹಿಂದುಗಳು ಎಂದರು.
ಪಿಎಫ್ ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಎಫ್ ಐ ರಾಜ್ಯ ಕಾರ್ಯದರ್ಶಿ ಅಫ್ಸಲ್ ಖಾಸಿಮಿ ಕೊಲ್ಲಂ, ಉಡುಪಿ ಕ್ರೈಸ್ತ ಧರ್ಮಗುರುಗಳಾದ ರೆ.ಫಾ .ವಿಲಿಯಂ ಮಾರ್ಟಿಸ್, ಎಸ್.ಡಿ.ಪಿ.ಐ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ, ಪಿಎಫ್ಐ ಮುಖಂಡ ಎ.ಕೆ ಅಶ್ರಫ್, ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಕ್ರಂ ಹುಸೇನ್, ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಮೊದಲಾದವರು ಇದ್ದರು.
PFI Anis Ahmed makes a controversial statement about eliminating RSS by vaccine like covid in every area at a program held at Ullal in Mangalore.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm