ಬ್ರೇಕಿಂಗ್ ನ್ಯೂಸ್
06-02-21 02:12 pm Mangalore Correspondent ಕರಾವಳಿ
ಮಂಗಳೂರು, ಫೆ. 6: ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಬಿಲ್ಲವರು ಮತ್ತು ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಅಧಿಕಾರಿ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. ಮೂಡುಬಿದ್ರಿಯ ಬಿಲ್ಲವ ಮುಖಂಡರು ಜಗದೀಶ ಅಧಿಕಾರಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಎರಡು ದಿನಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಬಗ್ಗೆ ಅವಹೇಳನ ಆಗುವ ರೀತಿ ಮಾತನಾಡಿದ್ದರು. ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಮೂಲಕ ಜಗದೀಶ್ ಅಧಿಕಾರಿ ಬಿಲ್ಲವರು ಮತ್ತು ಕಾಂಗ್ರೆಸ್ ಪ್ರಮುಖರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ಸ್ಪಷ್ಟನೆ ಕೇಳಲು ಬಿಲ್ಲವ ಸಮುದಾಯ ಮುಖಂಡರೊಬ್ಬರು ಜಗದೀಶ ಅಧಿಕಾರಿಗೆ ಕರೆ ಮಾಡಿದ್ದರು.

ಮಾತುಕತೆ ಬಳಿಕ ಕರೆ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಜಗದೀಶ್ ಅಧಿಕಾರಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಫೋನ್‌ನಲ್ಲಿ ರೆಕಾರ್ಡ್ ಆಗಿದ್ದು ಅದೀಗ ವೈರಲ್ ಆಗಿದೆ. ಬಿಲ್ಲವರನ್ನು ಯಾವತ್ತೂ ನಂಬುವಂತಿಲ್ಲ. ಅವರಿಗಿಂತ ಬ್ಯಾರಿಗಳನ್ನು ನಂಬಬಹುದು. ಕೋಟಿ ಚೆನ್ನಯರು ಕೂಡ ಪೆರ್ಮಲೆ ಬಲ್ಲಾಳರಿಗೆ ಅನ್ಯಾಯ ಮಾಡಿದರು. ಮತ್ತೊಂದು ರಾಜನಲ್ಲಿಗೆ ಹೋಗಿ ಅಲ್ಲಿಯ ಮಂತ್ರಿಯನ್ನು ಕೊಂದರು. ಇನ್ನೊಂದು ಕಡೆ ಹೋಗಿ ಅಲ್ಲಿಯ ರಾಜನನ್ನೇ ಸೋಲಿಸಿದರು.
ಕೊನೆಗೆ ಆಸುಪಾಸಿನ ಎಲ್ಲ ರಾಜರು ಸೇರಿ ಕೋಟಿ ಚೆನ್ನಯರನ್ನು ಕೊಲ್ಲುತ್ತಾರೆ. ಆಗಲೂ ಕೋಟಿ ಚೆನ್ನಯರು ಒಳ್ಳೆದು ಮಾಡಿಲ್ಲ. ಅವರ ಸಂತಾನದವರೂ ಅಷ್ಟೇ. ಜನಾರ್ದನ ಪೂಜಾರಿಯ ಕಾಲಿಗೆ ಬೀಳುವುದು ಯಾಕೆ ? ನಂಗೇನು ಅಂಥ ಗತಿ ಬಂದಿದೆ ಎಂದು ಬಿಲ್ಲವರ ಬಗ್ಗೆ ಮೂದಲಿಸಿ ಮಾತನಾಡಿದ್ದ ಆಡಿಯೋ ಈಗ ವೈರಲ್ ಆಗಿದ್ದು ಬಿಲ್ಲವ ಸಮುದಾಯದ ಮುಖಂಡರು ಬಿಜೆಪಿ ಮುಖಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leaders of different units of Moodbidri Billawa Sangha, on Friday, February 5, filed a complaint at Moodbidri police station against BJP leader Jagadish Adhikari.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm