ಬ್ರೇಕಿಂಗ್ ನ್ಯೂಸ್
30-06-26 11:39 am HK News Staffer ಕರಾವಳಿ
ಮಂಗಳೂರು, ಜೂನ್ 30: ಸುರತ್ಕಲ್ ಕಡಲ ತೀರದಿಂದ 33 ನಾಟಿಕಲ್ಸ್ ಮೈಲು ದೂರದ ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಉಡುಪಿ ಮೂಲದ 6 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಪಡೆ ರಕ್ಷಣೆ ಮಾಡಿ ಮಂಗಳೂರು ಬಂದರಿಗೆ ಕರೆತಂದಿದೆ.
ಜೂನ್ 29ರ ಸಂಜೆ ನಾಲ್ಕು ಗಂಟೆಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಅಪಾಯಕ್ಕೆ ಸಿಲುಕಿರುವ ಬಗ್ಗೆ ಇಂಡಿಯನ್ ಕೋಸ್ಟ್ ಗಾರ್ಡ್ ಗೆ ಮಾಹಿತಿ ಬಂದಿತ್ತು. ಕೂಡಲೇ ಅಲ್ಲಿಗೆ ತೆರಳಿದ್ದ ಐಸಿಜಿಎಸ್ ಸಚೇತ್ ಹಡಗಿನ ಮೂಲಕ ಕೋಸ್ಟ್ ಗಾರ್ಡ್ ಪಡೆ ಕಾರ್ಯ ನಡೆಸಿದೆ. ಮೀನುಗಾರರನ್ನು ರಕ್ಷಿಸಿದ ಯೋಧರು ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತಂದಿದ್ದಾರೆ.


ಉಡುಪಿಯ ಮಂಜು ಮಾತಾ ಹೆಸರಿನ ಮೀನುಗಾರಿಕಾ ಬೋಟ್ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಅಪಾಯಕ್ಕೆ ಈಡಾಗಿತ್ತು. ಅದರಲ್ಲಿದ್ದವರು ತಮ್ಮನ್ನು ಬಚಾವ್ ಮಾಡುವಂತೆ ಸಂದೇಶ ಕಳಿಸಿದ್ದರು. ಬೋಟ್ ತಳಭಾಗಕ್ಕೆ ಹಾನಿಯಾಗಿ ಬೋಟ್ ನೊಳಗೆ ನೀರು ನುಗ್ಗತೊಡಗಿತ್ತು. ತುರ್ತು ಸಂದೇಶ ಸ್ವೀಕರಿಸಿದ ಕೋಸ್ಟ್ ಗಾರ್ಡ್ ಬೋಟ್ ICG ಸಚೇತ್ ಕಾರ್ಯಾಚರಣೆಗೆ ಮುಂದಾಗಿತ್ತು.
ಮುಳುಗುತ್ತಿದ್ದ ಮೀನುಗಾರಿಕಾ ಬೋಟನ್ನು ಪತ್ತೆ ಹಚ್ಚಿ 90 ನಿಮಿಷಗಳ ಕಾಲ ಸವಾಲಿನ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ರಿಮೋಟ್ ಆಪರೇಟೆಡ್ ಲೈಫ್ ಬಾಯ್ಸ್ ಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಿ, ಮೀನುಗಾರರನ್ನು ರಕ್ಷಿಸಲಾಗಿದೆ.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
09-10-26 10:01 am
HK News Staffer
ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪ...
08-10-26 08:44 pm
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am