ಬ್ರೇಕಿಂಗ್ ನ್ಯೂಸ್
14-01-21 07:43 pm Mangaluru Correspondant ಕರಾವಳಿ
ಮಂಗಳೂರು, ಜ.14: ಆಡಳಿತದಲ್ಲಿರುವ ಸರ್ಕಾರದ ಸದಸ್ಯರೇ ಸಿಎಂ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ. ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ನೀಡಲಾಗಿದೆಯಾ..? ಕಾರ್ಕಳ ಶಾಸಕರು ಕೂಡ ನನಗೆ ಪಕ್ಷ ನಿಷ್ಠೆ ಗೊತ್ತು , ಬ್ಲಾಕ್ ಮೇಲ್ ಗೊತ್ತಿಲ್ಲ ಎನ್ನುತ್ತಾರೆ. ಇದರ ಅರ್ಥ ಏನು ? ಬ್ಲಾಕ್ ಮೇಲ್ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಸಿಡಿ ಹೇಳಿಕೆಯ ಬಗ್ಗೆ ಜನರು ಗಮನಿಸುತ್ತಾರೆ. ಎಲ್ಲ ವಿಚಾರವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪ್ರಧಾನಮಂತ್ರಿಯನ್ನು ದೂಷಿಸಿದರೆ ದೇಶದ್ರೋಹಿ ಎನ್ನಲಾಗುತ್ತದೆ. ರಾಜ್ಯದ ಸಿಎಂ ಅವರನ್ನು ದೂಷಿಸಿದರೆ ದೇಶದ್ರೋಹಿ ಆಗಲ್ವಾ..? ಈಗ ಕರ್ನಾಟಕದ ಸಿಎಂಗೆ ಅಪಮಾನ ಮಾಡಲಾಗುತ್ತಿದೆ. ಆಡಳಿತದಲ್ಲಿರುವ ಸರ್ಕಾರದ ಶಾಸಕರೇ ಸಿಎಂರನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದರು.
ಸಚಿವ ಸ್ಥಾನ ಕೊಡದ್ದಕ್ಕೆ ಬಿಜೆಪಿ ಶಾಸಕರೇ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನಗೆ ಸಚಿವ ಸ್ಥಾನ ಯಾಕೆ ಕೊಟ್ಟಿಲ್ಲವೆಂದು ಮುಖ್ಯಮಂತ್ರಿಯವರೇ ಮುನಿರತ್ನಗೆ ಸ್ಪಷ್ಟನೆ ನೀಡಬೇಕು ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಸುಳ್ಯದ ಶಾಸಕ ಎಸ್.ಅಂಗಾರ ಸಚಿವರಾದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಕೊನೆಗೂ ಸುಳ್ಯ ಜನತೆಯ ಬೇಡಿಕೆ ಈಡೇರಿದೆ. ಎಸ್.ಅಂಗಾರ ಸಚಿವರಾಗಿರುವುದು ನಮಗೆ ಖುಷಿಯ ವಿಚಾರ. ಮಂಗಳೂರಿನ ಹೊಸ ಸಚಿವರಿಗೆ ನಾವು ಸದಾ ಬೆಂಬಲ ಕೊಡುತ್ತೇವೆ. ಕರಾವಳಿಯ ಇಬ್ಬರು ಸಚಿವರು ಕೂಡ ಹಿರಿಯರು. ದ.ಕ. ಜಿಲ್ಲೆಗೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಬೇಕು ಎಂದು ಹೇಳಿದರು.
ತಾಲೂಕು ಪಂಚಾಯತ್ ವ್ಯವಸ್ಥೆ ರದ್ದು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ತಾಲೂಕು ಮಟ್ಟದ ಅಭಿವೃದ್ಧಿಯನ್ನು ಜಿಲ್ಲಾಡಳಿತ ನೇರವಾಗಿ ನೋಡಲು ಆಗುತ್ತಾ..? ಆಡಳಿತ ವಿಕೇಂದ್ರೀಕರಣ ಇದರಿಂದ ಸಾಧ್ಯವಾಗುತ್ತಾ...? ತಾಪಂ ರದ್ದು, ಬಂದ್ ಮಾಡುವುದು ಸರ್ಕಾರದ ಕೆಲಸವಲ್ಲ. ಸ್ಥಳೀಯ ಪ್ರತಿನಿಧಿಗಳಿಗೆ ಅಧಿಕಾರ ಕೊಡುವುದು ಸರ್ಕಾರದ ಕೆಲಸ. ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ನಿಭಾಯಿಸಲು ತಂಡದ ಅಗತ್ಯವಿದೆ ಎಂದು ಹೇಳಿದರು.
MLA U T Khader said that the chief minister (CM) deserves the same respect as the prime minister of the country.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
02-11-25 05:13 pm
HK News Desk
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
02-11-25 06:57 pm
Mangalore Correspondent
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm