ಬ್ರೇಕಿಂಗ್ ನ್ಯೂಸ್
12-01-21 08:52 pm Dilip: Political Correspondent, Bengaluru ಕರಾವಳಿ
ಬೆಂಗಳೂರು, ಜ.12: ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕೈಹಾಕಿದ್ದಾರೆ. ನಾಳೆ ಮಧ್ಯಾಹ್ನ 3.30ಕ್ಕೆ ಏಳರಿಂದ ಎಂಟು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಫೈನಲ್ ಆಗಿದೆ.
ಕರಾವಳಿಯ ಹಿರಿಯ ಶಾಸಕ ಎಸ್.ಅಂಗಾರ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೀಶ್ವರ್, ಉಮೇಶ್ ಕತ್ತಿ ಅವರನ್ನು ಸ್ವತಃ ಸಿಎಂ ಯಡಿಯೂರಪ್ಪ ಕರೆ ಮಾಡಿ ನಾಳೆ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಮಾಹಿತಿ ಪ್ರಕಾರ, ಐವರು ಮೂಲ ಬಿಜೆಪಿ ಶಾಸಕರಿಗೆ ಮತ್ತು ಮೂವರು ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ವಲಸಿಗರ ಪೈಕಿ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲು ನಿರ್ಧಾರ ಆಗಿದೆ. ಆದರೆ, ಈಗ ಖಾಲಿ ಇರುವ ಸಚಿವ ಸ್ಥಾನ ಏಳು ಮಾತ್ರ ಆಗಿರುವುದರಿಂದ ಒಬ್ಬರು ಹಾಲಿ ಸಚಿವರನ್ನು ಸ್ಥಾನದಿಂದ ಕೈಬಿಡುತ್ತಾರೆಯೇ ಎನ್ನುವ ಅನುಮಾನ ಮೂಡಿದೆ.
ಸಚಿವ ಸ್ಥಾನದಿಂದ ಕೈಬಿಡುವುದಾದ್ರೆ, ಶಶಿಕಲಾ ಜೊಲ್ಲೆ ಅಥವಾ ಅಬಕಾರಿ ಸಚಿವ ಆರ್.ನಾಗೇಶ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಂಗಳವಾರ ಸಂಜೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಏಳರಿಂದ ಎಂಟು ಮಂದಿ ಸಚಿವರಾಗಲಿದ್ದಾರೆ ಎಂದು ಹೇಳಿದ್ದಾರೆ.
ಇದೆಲ್ಲ ಸಿಎಂ ಯಡಿಯೂರಪ್ಪ ಲೆಕ್ಕಾಚಾರವಾಗಿದ್ದು ನಾಳೆಯ ಹೊತ್ತಿಗೆ ಈ ಹೆಸರು ಬದಲಾದರೂ ಅಚ್ಚರಿ ಪಡಬೇಕಿಲ್ಲ. ಹೈಕಮಾಂಡ್ ಹೆಸರಲ್ಲಿ ಬೇರೆ ಕೆಲವರ ಸ್ಥಾನ ಬದಲಿಸಿ, ಸಂಪುಟ ಪುನಾರಚನೆಯೂ ಆಗುವ ಸಾಧ್ಯತೆ ಇದೆ. ಏನಿದ್ದರೂ, ಸಂಪುಟ ವಿಸ್ತರಣೆ ವಿಚಾರ ಕಳೆದ ಆರು ತಿಂಗಳಿಂದಲೂ ಚರ್ಚೆಯಲ್ಲಿತ್ತು. ಸಿಎಂ ಯಡಿಯೂರಪ್ಪ ವಿಸ್ತರಣೆಗೆ ಲಿಸ್ಟ್ ರೆಡಿ ಮಾಡಿಕೊಂಡರೂ, ಹೈಕಮಾಂಡ್ ಮಾತ್ರ ಅಸ್ತು ಎಂದಿರಲಿಲ್ಲ. ಈಗ ಕಡೆಗೂ ಕೇಂದ್ರ ಗೃಹ ಸಚಿವ ರಾಜ್ಯಕ್ಕೆ ಆಗಮಿಸುವ ವೇಳೆಗೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
Karnataka cabinet expansion 2021 post-fixed for Angara from Sullia, Murgesh Nirani, Arvind Limbavali, M. T. B. Nagaraj and four other leaders. List of new ministers to be inducted will be released by the evening said BSY.
10-07-26 07:42 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
10-07-26 05:25 pm
HK News Staffer
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
10-07-26 08:22 pm
HK News Staffer
ರಿವರ್ಸ್ ಮಾಡುವಾಗ ನಿಯಂತ್ರಣ ತಪ್ಪಿ ತೋಡಿಗೆ ಉರುಳಿ ಬ...
10-07-26 05:29 pm
ರೆಡ್ ಅಲರ್ಟ್; ರಜೆ ಆದೇಶ ಪಾಲಿಸದ ಹತ್ತಕ್ಕೂ ಹೆಚ್ಚು...
10-07-26 03:25 pm
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾ...
10-07-26 02:22 pm
ಟೀಚರ್ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು ; ಈ ಅವಮಾನ...
09-07-26 09:11 pm