ಬ್ರೇಕಿಂಗ್ ನ್ಯೂಸ್
11-01-21 11:00 pm Mangaluru Correspondent ಕರಾವಳಿ
ಬಂಟ್ವಾಳ, ಜ.11: ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ, ಎಷ್ಟು ಸ್ಥಾನಕ್ಕೆ ಬದಲಾವಣೆ ಆಗಲಿದೆ, ಇವೆಲ್ಲವನ್ನು ರಾಜ್ಯ ಹಾಗು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಜನವರಿ 13 ರಂದು ಇವೆಲ್ಲ ವಿಚಾರ ಕ್ಲಿಯರ್ ಆಗುತ್ತೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಬಂಟ್ವಾಳದಲ್ಲಿ ಬಿಜೆಪಿಯ ಜನಸೇವಕ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಕರಾವಳಿಯ ಅಂಗಾರ, ಸುನಿಲ್ ಕುಮಾರ್ ಗೆ ಸಚಿವ ಸ್ಥಾನ ಸಿಗಲಿದೆಯಾ ಎನ್ನುವ ಪ್ರಶ್ನೆಗೆ ಎಲ್ಲವನ್ನೂ ಮೇಲಿನ ನಾಯಕರು ತೀರ್ಮಾನಿಸುತ್ತಾರೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಸಹಕಾರದಿಂದ ಈ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ತಮ್ಮ ಪಕ್ಷ ಬಿಟ್ಟು ಬಂದಾಗ, ಅವರಿಗೆ ಪ್ರಾಮಿಸ್ ಮಾಡಿದಂತೆ ಸಚಿವ ಸ್ಥಾನ ನೀಡಿ ಋಣ ತೀರಿಸಿದ್ದೇವೆ. ಮೊದಲು ಅಲ್ಲಿಂದ ಬಂದ ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಋಣ ತೀರಿಸಬೇಕಿದೆ. ಹೀಗಾಗಿ ಎಲ್ಲ ಲೆಕ್ಕಾಚಾರವನ್ನು ಮಾಡಿ ವರಿಷ್ಠರು ನಿರ್ಧರಿಸುತ್ತಾರೆ. ನಮಗೆ ಪೂರ್ಣ ಬಹುಮತ ಬಂದಿದ್ರೆ ಈ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದರು.
ಇನ್ನು ಸಿದ್ದರಾಮಯ್ಯ ಗೋಮಂಸ ಭಕ್ಷಣೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ, ಸಿದ್ದರಾಮಯ್ಯ ಅವರ ಎರಡು ಹೇಳಿಕೆ ನೋಡಿದ್ದೇನೆ. ಸುಳ್ಳು ಹೇಳುವವರಿಗೆ ನೀಡಬಹುದಾದ ನೋಬೆಲ್ ಪ್ರಶಸ್ತಿ ಸಿದ್ದರಾಮಯ್ಯ ಅವರಿಗೇ ನೀಡಬೇಕು. ಸಿದ್ದರಾಮಯ್ಯ ಹೇಳೊದು ಬರೀ ಸುಳ್ಳು ಸುಳ್ಳು.. ಮುಖ್ಯಮಂತ್ರಿ ಆಗಿದ್ದವರ ನಡವಳಿಕೆ, ಆಚಾರ ವಿಚಾರವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಬೇಕಿದ್ದರೆ ಮುಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಲಿ. ಪ್ರತಿ ಮನೆಗೆ ಉಚಿತ ಗೋಮಂಸ ಕೊಡುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಹೇಳಲಿ. ಗೋರಕ್ಷರಿಗೆ ರಕ್ಷಣೆ ನೀಡದೇ ಕಾಂಗ್ರೆಸ್ ಗೋಕಳ್ಳರಿಗೆ ರಕ್ಷಣೆ ನೀಡಿತ್ತು. ಇವತ್ತು ಅದರ ಪರಿಣಾಮವನ್ನು ಆನುಭವಿಸುತ್ತಿದ್ದಾರೆ ಎಂದು ಹೇಳಿದರು.
23-05-25 02:35 pm
Bangalore Correspondent
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
23-05-25 10:46 pm
Mangalore Correspondent
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
VHP, Mangalore, Suhas Shetty Murder: ಸುಹಾಸ್ ಶ...
22-05-25 10:29 pm
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm