ಬ್ರೇಕಿಂಗ್ ನ್ಯೂಸ್
04-11-26 02:45 pm HK News Staffer ಕರಾವಳಿ
ಬೆಳ್ತಂಗಡಿ, ನ.4 : ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯಲ್ಲಿ ಪೊಲೀಸ್ ತಂಡ ಮಹತ್ವದ ಹೆಜ್ಜೆ ಇಟ್ಟಿದೆ. 14 ವರ್ಷಗಳ ಹಿಂದೆ ಸಂಗ್ರಹಿಸಲಾಗಿದ್ದ ವೈದ್ಯಕೀಯ ಮಾದರಿಯನ್ನು ಮತ್ತೆ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಡಿಎನ್‌ಎ ಪರೀಕ್ಷೆಯಿಂದ ಆರೋಪಿಗಳ ಕುರಿತು ಸುಳಿವು ನೀಡಬಲ್ಲ ಸಾಕ್ಷ್ಯ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ವಿಶೇಷ ತನಿಖಾ ತಂಡ ಮುಂದಡಿ ಇಟ್ಟಿದೆ.
2012ರ ಅಕ್ಟೋಬರ್ 10ರಂದು ಬೆಳ್ತಂಗಡಿ ಠಾಣೆ ಪೊಲೀಸರು ಸೌಜನ್ಯಾಳ ಮರಣೋತ್ತರ ಪರೀಕ್ಷೆಗೂ ಮುನ್ನ ಗುಪ್ತಾಂಗದಿಂದ ಮಾದರಿ (ವೆಜಿನಲ್ ಸ್ವ್ಯಾಬ್) ಸಂಗ್ರಹಿಸಿದ್ದರು. ಅಕ್ಟೋಬರ್ 20ರಂದು ಈ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಂದಿನ ಪರೀಕ್ಷೆಯಲ್ಲಿ ಇದರಲ್ಲಿ ಫಂಗಸ್ ಪತ್ತೆಯಾಗಿರುವುದಾಗಿ ವರದಿ ಬಂದಿತ್ತು.
ಆದರೆ ಈಗ ಅದೇ ಹಳೆಯ ಮಾದರಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರಯೋಗಾಲಯಕ್ಕೆ ಮರು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಹೈದರಾಬಾದ್‌ನ ವಿಶೇಷ ಪ್ರಯೋಗಾಲಯದಲ್ಲಿ ಇದನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದೆ. ವಿಶೇಷವೆಂದರೆ, ಈ ಮಾದರಿಯಲ್ಲಿ ಫಂಗಸ್ ಇದ್ದರೂ ಅದರಲ್ಲಿರುವ ಡಿಎನ್‌ಎ ಅಂಶಗಳನ್ನು ಪತ್ತೆಹಚ್ಚಲು ಸಾಧ್ಯ. ಹೀಗಾಗಿ 14 ವರ್ಷಗಳ ಹಿಂದಿನ ಮಾದರಿಯಿಂದಲೂ ಮಹತ್ವದ ಸುಳಿವು ಸಿಗಬಹುದೆಂಬ ನಿರೀಕ್ಷೆ ಮೂಡಿದೆ.
ವಾರದ ಹಿಂದೆಯೇ ಎಸ್‌ಐಟಿ ಅಧಿಕಾರಿಗಳು ಮಾದರಿಯನ್ನು ಮರು ಪರೀಕ್ಷೆಗೆ ಕಳುಹಿಸಿದ್ದು, ಈಗ ವರದಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಮಾದರಿಯಲ್ಲಿ ಡಿಎನ್‌ಎ ಪತ್ತೆಯಾದರೆ, ಅದನ್ನು ಪ್ರಕರಣದಲ್ಲಿ ಆರೋಪ ಹೊತ್ತಿರುವ ವ್ಯಕ್ತಿಗಳ ಡಿಎನ್‌ಎ ಜೊತೆಗೆ ಹೋಲಿಕೆ ಮಾಡಿ ತನಿಖೆ ಮುಂದುವರಿಸಲು ಸಾಧ್ಯವಾಗಬಹುದು. ಇದರಿಂದ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಗುವ ನಿರೀಕ್ಷೆಯಿದೆ.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
04-11-26 02:45 pm
HK News Staffer
ರಸ್ತೆ ಗುಂಡಿ ಬಿದ್ದಿದ್ದಕ್ಕೆ ಜನಪ್ರತಿನಿಧಿಗಳು, ಪೊಲ...
04-11-26 02:41 pm
ಎಸ್ಐಆರ್ ಹೆಸರಲ್ಲಿ ಕಾಂಗ್ರೆಸಿನಿಂದ ದೇಶದಲ್ಲಿ ಅರಾ...
03-11-26 10:51 pm
ವರ್ಷದ ಹಿಂದೆ ಶರಣಾಗಿದ್ದ ನಕ್ಸಲ್ ನಾಯಕಿ ಮುಂಡಗಾರು ಲ...
03-11-26 09:12 pm
ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇ...
03-11-26 11:41 am
04-11-26 10:00 am
HK News Staffer
ಸ್ಟಿಂಗ್ ಆಪರೇಷನ್ ಬಗ್ಗೆ ರಾಹುಲ್ ಗಾಂಧಿಗೆ ದೂರು ಹೇಳ...
03-11-26 10:44 am
15 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಖತರ್ನಾಕ್...
02-11-26 09:48 pm
ಬೈಕಂಪಾಡಿಯಲ್ಲಿ ಲಾರಿ- ಸ್ಕೂಟರ್ ಡಿಕ್ಕಿ ; ಸವಾರ ತೀವ...
02-11-26 09:44 pm
ಕಾಪುವಿನ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ದಾಳಿ: ಕಟ್ಟಡ...
02-11-26 11:31 am