ಬ್ರೇಕಿಂಗ್ ನ್ಯೂಸ್
02-11-26 11:31 am HK News Staffer ಕ್ರೈಂ
ಕಾಪು, ನವೆಂಬರ್ 2: ಉದ್ಯಮಿಯೊಬ್ಬರಿಗೆ ಸೇರಿದ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ, ಕಟ್ಟಡವನ್ನೇ ಧ್ವಂಸಗೊಳಿಸಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಎರಡು ಕಾಟೇಜ್‌ಗಳ ಗೋಡೆಗಳನ್ನು ಒಡೆದು ಹಾಕಿ, ಒಳಗಿದ್ದ ವಸ್ತುಗಳನ್ನು ಪುಡಿಪುಡಿ ಮಾಡಲಾಗಿದೆ. ಅಷ್ಟೇ ಅಲ್ಲ, ಸಿಸಿಟಿವಿ ಕ್ಯಾಮೆರಾಗಳನ್ನೂ ಕಳವು ಮಾಡಲಾಗಿದ್ದು, ಘಟನೆಯಿಂದ ಮಾಲೀಕರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ನಷ್ಟವಾಗಿದೆ.
ಕಲ್ಮಾಡಿ ಮೂಲದ ಉದ್ಯಮಿ ಹರ್ಷಿತ್ ಎಸ್. ಕುಂದರ್ ಅವರಿಗೆ ಸೇರಿದ ಕಾಪುವಿನ ಪ್ರಸಿದ್ಧ ತುಲಂ ಕಾಟೇಜಸ್ ಹೋಂಸ್ಟೇಯಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 31ರಂದು ಮಧ್ಯಾಹ್ನ ಸ್ನೇಹಿತರೊಬ್ಬರು ಕರೆ ಮಾಡಿ ಹೋಂಸ್ಟೇಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಡೀ ಆವರಣ ಧ್ವಂಸಗೊಂಡಿರುವುದು ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಅಕ್ರಮವಾಗಿ ಹೋಂಸ್ಟೇ ಆವರಣಕ್ಕೆ ಪ್ರವೇಶಿಸಿ ಎರಡು ಕಾಟೇಜ್‌ಗಳ ಗೋಡೆಗಳನ್ನು ಸಂಪೂರ್ಣವಾಗಿ ಒಡೆದು ಹಾಕಿದ್ದಾರೆ. ಕೊಠಡಿಗಳಲ್ಲಿದ್ದ ಎರಡು ಏರ್ ಕಂಡಿಷನರ್‌ಗಳನ್ನು ಕಳವು ಮಾಡಿದ್ದಾರೆ. ಬಾತ್‌ರೂಮ್‌ನ ಟೈಲ್ಸ್, ಕಮೋಡ್, ಶವರ್, ವಾಶ್‌ಬೇಸಿನ್, ಕನ್ನಡಿಗಳು ಹಾಗೂ ಬಾಗಿಲುಗಳನ್ನೂ ಒಡೆದು ಹಾಕಿದ್ದಾರೆ. ಕಟ್ಟಡದ ಅವಶೇಷಗಳು ಆವರಣದಾದ್ಯಂತ ಹರಡಿಕೊಂಡಿದ್ದು, ಒಟ್ಟು ಸುಮಾರು 20 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಘಟನೆಯ ಸಾಕ್ಷ್ಯಗಳು ಸೆರೆಯಾಗಬಾರದು ಎಂಬ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾಗಳನ್ನೂ ಕಳವು ಮಾಡಿಕೊಂಡು ಹೋಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆದರಿಕೆ ಕರೆ ಮಾಡಿದ್ದ ಗೌತಮ್ ಸೇರಿದಂತೆ ಐವರು ಶಂಕಿತರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ಸ್ಥಳ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ. ಶಂಕಿತರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
01-11-26 10:49 pm
HK News Desk
ಮಂಗಳೂರಿನ ಮಂಜುಗಡ್ಡೆ ತಯಾರಿಕಾ ಘಟಕಕ್ಕೆ ಆಹಾರ ಸುರಕ್...
01-11-26 10:13 pm
ದೇಶದಲ್ಲಿ ಆಡಳಿತ ಬದಲಿಸುವುದಕ್ಕೇ ನಮ್ಮ ಹೋರಾಟ ; ರಂಗ...
31-10-26 09:40 pm
14 ವರ್ಷಗಳ ಬಳಿಕ ಸೌಜನ್ಯ ಕೇಸ್ ಮರುತನಿಖೆ ; ಮೃತದೇಹ...
31-10-26 05:19 pm
ಉದ್ಘಾಟನೆಗೂ ಮುನ್ನವೇ ಇಂದಿರಾ ಕ್ಯಾಂಟೀನ್ ಹೆದ್ದಾರಿಗ...
31-10-26 02:25 pm
02-11-26 11:31 am
HK News Staffer
ಪ್ರೀತಿಸುತ್ತಿದ್ದ ಯುವತಿಯ ಖಾಸಗಿ ಫೋಟೊ ಜಾಲತಾಣದಲ್ಲಿ...
01-11-26 04:08 pm
ಪ್ರೇಮ ಪ್ರಕರಣ ; ಪ್ರೀತಿಸುತ್ತಿದ್ದ ಯುವತಿ ಮನೆಗೆ ಕರ...
31-10-26 01:16 pm
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm