ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ; ಆರಿಫ್ ಪಡುಬಿದ್ರೆ, ಕಿರಣ್ ಶಿರ್ಸೀಕರ್, ಡಾ.ಸುರೇಶ್ ರಾವ್, ಪ್ರವೀಣ್ ಮಾರ್ಟಿಸ್ ಸೇರಿದಂತೆ 119 ಸಾಧಕರಿಗೆ ರಾಜ್ಯೋತ್ಸವ ಗೌರವ

01-11-26 10:49 pm       HK News Desk   ಕರಾವಳಿ

ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ, ಸಮಾಜಸೇವೆ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 119 ಮಂದಿಯನ್ನು ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಗೌರವ ನೀಡಿ ಸನ್ಮಾನಿಸಲಾಯಿತು. ಇದಲ್ಲದೆ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 54 ಸಂಘ- ಸಂಸ್ಥೆಗಳನ್ನೂ ಗೌರವಿಸಲಾಯಿತು.

ಮಂಗಳೂರು, ನ.1: ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ, ಸಮಾಜಸೇವೆ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 119 ಮಂದಿಯನ್ನು ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಗೌರವ ನೀಡಿ ಸನ್ಮಾನಿಸಲಾಯಿತು. ಇದಲ್ಲದೆ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 54 ಸಂಘ- ಸಂಸ್ಥೆಗಳನ್ನೂ ಗೌರವಿಸಲಾಯಿತು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರಾದ ಆರಿಫ್ ಪಡುಬಿದ್ರೆ, ಕಿರಣ್ ಶಿರ್ಸೀಕರ್, ದಿವಾಕರ್ ಬೈಕಂಪಾಡಿ, ಸಿದ್ದಿಕ್ ನೀರಾಜೆ, ಮನೋಹರ ಬಳಂಜ, ಗಂಗಾಧರ ಮಟ್ಟಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಮತ್ತು ಸಂಸದ ಕ್ಯಾ,ಬ್ರಿಜೇಶ್ ಚೌಟ ಶಾಲು ಹೊದಿಸಿ ಪೇಟ ತೊಡಿಸಿ ಸನ್ಮಾನಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅಲೋಶಿಯಸ್ ವಿವಿ ಪ್ರಿನ್ಸಿಪಾಲ್ ಪ್ರವೀಣ್ ಮಾರ್ಟಿಸ್, ಯಕ್ಷಗಾನ- ನಾಟಕ ಕ್ಷೇತ್ರದಲ್ಲಿ ರವಿಕುಮಾರ್ ಸುರತ್ಕಲ್, ಮೋಹನ್ ಕೊಪ್ಪಳ ಕದ್ರಿ, ರಾಜೇಶ್ ಕೆಂಚನಕೆರೆ, ಕ್ರೀಡಾ ಕ್ಷೇತ್ರದಲ್ಲಿ ಜೆಸ್ಸಿ ಕೊರೆಯ, ಸುರೇಶ್ ಪಟ್ಟಣಗೆರೆ, ಲಿಖಿತ್ ರಾಮಚಂದ್ರ, ಜಾನಪದ ಕ್ಷೇತ್ರದಲ್ಲಿ ಬೇಬಿ ಪರವ, ಶೀನ ನಲಿಕೆ, ಸತೀಶ್ ಪಂಬದ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸುರೇಶ್ ರಾವ್, ಡಾ.ರಮೀಳಾ ಶೇಖರ್, ಸಮಾಜಸೇವೆ ವಿಭಾಗದಲ್ಲಿ ರವಿ ಕಕ್ಕೆಪದವು, ಸಂಜೀವ ಕಬಕ, ಐಕಳ ಹರೀಶ್ ಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಮಹಾಬಲೇಶ್ವರ ಹೆಬ್ಬಾರ್, ಮಾಲತಿ ಶೆಟ್ಟಿ ಮಾಣೂರು, ಬಾಲಪ್ರತಿಭೆ ಕುಮಾರಿ ಅದ್ವಿಕಾ ಬಾಕಿಲ, ಯೋಗ ಕ್ಷೇತ್ರದಲ್ಲಿ ದೇವಿಕಾ ಪುರುಷೋತ್ತಮ್, ಹರೀಶ್ ಭಟ್ ಕೇವಳ, ಕಂಬಳ ಕ್ಷೇತ್ರದಲ್ಲಿ ಕೊಂಡಾಣ ನಾರಾಯಣ ರೈ, ಲೋಕೇಶ್ ಶೆಟ್ಟಿ, ವಿನ್ಸೆಂಟ್ ಪಿಂಟೋ, ಅಣ್ಣು ಪೂಜಾರಿ ಸೇರಿದಂತೆ 119 ಮಂದಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇದೇ ವೇಳೆ, ಸಾಮಾಜಿಕ- ಸಾಂಸ್ಕೃತಿಕ, ಸಮಾಜ ಸೇವೆಗಾಗಿ 54 ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ರಾಜ್ಯೋತ್ಸವ ಅಂಗವಾಗಿ ಗೌರವಿಸಲಾಯಿತು. ಇದರ ಪಟ್ಟಿಯನ್ನು ಜಿಲ್ಲಾ ಮಟ್ಟದಲ್ಲಿ ಅಂತಿಮಗೊಳಿಸಿ ಬಿಡುಗಡೆ ಮಾಡಿದ್ದು ವಿಳಂಬವಾಗಿದ್ದು ಇಂದು ಬೆಳಗ್ಗಿನ ತನಕವೂ ಹೊಸ ಹೆಸರುಗಳ ಸೇರ್ಪಡೆ ಆಗುತ್ತಿದ್ದುದರಿಂದ ಹೆಸರಿನ ಘೋಷಣೆಯೂ ವಿಳಂಬವಾಗಿತ್ತು.