ಕದ್ರಿಯ 'ಕುಡ್ಪೀಸ್ ಫುಡ್ಸ್' ಬೇಕರಿ ಮಳಿಗೆಗೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ; ಅನೈರ್ಮಲ್ಯ ವಿಚಾರಕ್ಕೆ ಗರಂ, ಹಲ್ವಾ, ಖರ್ಜೂರ ಉತ್ಪನ್ನಗಳು ವಶಕ್ಕೆ

24-10-26 10:54 pm       HK News Desk   ಕರಾವಳಿ

ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ಕದ್ರಿ ದೇವಸ್ಥಾನದ ಬಳಿ ಇರುವ ಕುಡ್ಪೀಸ್ ಫುಡ್ಸ್ ಬೇಕರಿ ಅಂಗಡಿಗೆ ಶನಿವಾರ ದಿಢೀರ್ ದಾಳಿ ನಡೆಸಿದರು. ಆಹಾರ ಉತ್ಪಾದನಾ ಸ್ಥಳದಲ್ಲಿ ನೈರ್ಮಲ್ಯ ಕೊರತೆ ಕಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಮಂಗಳೂರು, ಅ.24: ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ಕದ್ರಿ ದೇವಸ್ಥಾನದ ಬಳಿ ಇರುವ ಕುಡ್ಪೀಸ್ ಫುಡ್ಸ್ ಬೇಕರಿ ಅಂಗಡಿಗೆ ಶನಿವಾರ ದಿಢೀರ್ ದಾಳಿ ನಡೆಸಿದರು. ಆಹಾರ ಉತ್ಪಾದನಾ ಸ್ಥಳದಲ್ಲಿ ನೈರ್ಮಲ್ಯ ಕೊರತೆ ಕಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 

ಅನೈರ್ಮಲ್ಯದಿಂದ ತಯಾರಿಸಿಟ್ಟಿದ್ದ ಹಲ್ವಾ ಹಾಗೂ ಖರ್ಜೂರ ಉತ್ಪನ್ನಗಳನ್ನು ವಶಕ್ಕೆ ಸೀಲ್ ಮಾಡಿ ಇರಿಸಲಾಗಿದೆ. ಅಲ್ಲದೆ, ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಆಹಾರ ಉತ್ಪನ್ನಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆಹಾರ ಉತ್ಪನ್ನಗಳನ್ನು ತಯಾರಿಸುವಂತೆ ಸೂಚಿಸಲಾಯಿತು.

ಯಾವುದೇ ರೀತಿಯ ಫುಡ್ ಪಾಯಿಸನಿಂಗ್ ಆಗಲು ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಲು, ಡ್ರೈನೇಜ್ ವ್ಯವಸ್ಥೆ ಸರಿಪಡಿಸಲು, ಯಾವುದೇ ಕೀಟ, ಜಿರಳೆ ಇಲಿ ಹೆಗ್ಗಣಗಳು ತಯಾರಿಕಾ ಘಟಕದೊಳಗೆ ನುಸುಳಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆಹಾರ ತಯಾರಿಕಾ ಘಟಕವನ್ನು ಸಂಪೂರ್ಣ ಶುಚಿಗೊಳಿಸಿದ ಬಳಿಕ ಆಹಾರ ಉತ್ಪನ್ನಗಳನ್ನು ತಯಾರಿಸುವಂತೆ ಸೂಚಿಸಲಾಯಿತು. 

ಆರೋಗ್ಯ ಸಚಿವ ಯು ಟಿ ಖಾದರ್ ಅವರ ಸೂಚನೆಯ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಎಚ್ ಇವರ ನೇತೃತ್ವದ ತಂಡ ದಾಳಿ ನಡೆಸಲಾಗುತ್ತಿದೆ.