ಬ್ರೇಕಿಂಗ್ ನ್ಯೂಸ್
07-09-26 09:57 pm HK News Staffer ಕರಾವಳಿ
ಉಳ್ಳಾಲ, ಸೆ-07: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಹೆಸರು ಎಸ್ಐಆರ್ ಪ್ರಕ್ರಿಯೆಯಲ್ಲಿ ತಾಳೆಯಾಗದ ಕಾರಣ ಚುನಾವಣಾ ಆಯೋಗವು ಸೋಮವಾರ ಬೆಳಗ್ಗೆ ಅವರಿಗೆ ನೋಟಿಸ್ ನೀಡಿದ್ದು, ಸಂಜೆಯ ವೇಳೆಗೆ ಸಂಬಂಧಪಟ್ಟ ಅಧಿಕಾರಿಗಳು ನೋಟೀಸನ್ನು ವಾಪಸ್ಸು ಪಡೆದುಕೊಂಡಿದ್ದಾರೆ.
2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ‘ಹಾಜಬ್ಬ’ ಎಂದು ಮಾತ್ರ ದಾಖಲಾಗಿದ್ದು, ಪ್ರಸ್ತುತ ಆಧಾರ್, ರೇಷನ್ ಕಾರ್ಡ್, ಪಾಸ್ಪೋರ್ಟ್ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ ಇತರ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಿಸಲಾಗಿದೆ. ಹಳೆಯ ಮತದಾರರ ಪಟ್ಟಿಯಲ್ಲಿನ ಹೆಸರು ಮತ್ತು ಈಗಿನ ದಾಖಲೆಗಳಲ್ಲಿನ ಹೆಸರು ಹೊಂದಿಕೆಯಾಗದ ಹಿನ್ನೆಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯಡಿ ನೋಟಿಸ್ ನೀಡಿ ಸೆ.11ರಂದು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್ಗೆ ಹಾಜರಾಗುವಂತೆ ಸೂಚಿಸಿದ್ದರೆನ್ನಲಾಗಿದೆ.
ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡುತ್ತಿದ್ದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜಬ್ಬರ ಮನೆಗೆ ಬಂದು ನೋಟೀಸ್ ವಾಪಸ್ಸು ಪಡೆದು ಪರಿಶೀಲಿಸಿ ಹೇಳುತ್ತೇವೆಂದು ಹೇಳಿ ತೆರಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಜಬ್ಬರು ಇಂದು ಸುಮಾರು ಹನ್ನೊಂದು ಗಂಟೆಯ ವೇಳೆಗೆ ಇಬ್ಬರು ಅಂಗನವಾಡಿ ಶಿಕ್ಷಕಿಯರು ಮನೆಗೆ ಬಂದು ಮತದಾರರ ಪಟ್ಟಿಯ ವಿಷಯಕ್ಕೆ ಸಂಬಂಧಿಸಿ ನೋಟೀಸ್ ನೀಡಿ, ಬಳಿಕ ಶುಕ್ರವಾರ ಪಂಚಾಯತ್ ಗೆ ದಾಖಲೆಗಳೊಂದಿಗೆ ಬರಲು ತಿಳಿಸಿದ್ದರು. ಆದರೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಪಂಚಾಯತ್ ನಿಂದ ಸಂಬಂಧಪಟ್ಟ ಅಧಿಕಾರಿಗಳು ಬಂದು ನೋಟೀಸ್ ಹಿಂಪಡೆದು, ಈ ಬಗ್ಗೆ ಪರಿಶೀಲಿಸಿ ಬರುತ್ತೇವೆ ಎಂದು ಹೇಳಿ ತೆರಳಿದ್ದಾರೆ ಎಂದಿದ್ದಾರೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
30-10-26 12:51 pm
HK News Staffer
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
UPSCಯಲ್ಲಿ 42ನೇ ರ್ಯಾಂಕ್ನಿಂದ ರಫೇಲ್ ಪೈಲಟ್ ವರೆ...
30-10-26 12:16 pm
ಕುಸುಮಾವತಿಯೇ, ಇಂದಿರಾವತಿಯೇ ? ಸರ್ಕಾರಿ ಜಮೀನು ಅಕ್ರ...
29-10-26 08:19 pm
ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ; ಪಿಎಸ್ಐ ಯೋಗೀಶ್...
29-10-26 02:12 pm
30-10-26 05:16 pm
HK News Staffer
ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಬೆಂಗಳೂ...
30-10-26 05:13 pm
ಶಿವಮೊಗ್ಗದಿಂದ ಮಂಗಳೂರಿಗೆ 1.15 ಕೋಟಿ ನಗದು ರವಾನೆ ;...
29-10-26 11:02 pm
ಫರಂಗಿಪೇಟೆ ಸ್ಟುಡಿಯೋ ಮಾಲೀಕನ ಕೊಲೆ ಯತ್ನ ಪ್ರಕರಣ ;...
29-10-26 01:14 pm
Kedila Society, Keshav Gowda, Blackmail: ಮುಸ್...
29-10-26 12:14 pm