ಬ್ರೇಕಿಂಗ್ ನ್ಯೂಸ್
02-09-26 11:02 am HK News Staffer ಕರಾವಳಿ
ಮಂಗಳೂರು, ಸೆ.2: ಜೀವಂತವಾಗಿರುವ ವ್ಯಕ್ತಿಯೊಬ್ಬರನ್ನು ಎಸ್‌ಐಆರ್ ಕರಡು ಪಟ್ಟಿಯಲ್ಲಿ ‘ಮರಣ’ ಎಂದು ನಮೂದಿಸಿರುವ ಘಟನೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಬಿಜೈ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೋ (61) ಅವರ ಎಸ್‌ಐಆರ್ ಕರಡು ಪಟ್ಟಿಯ ಗಣತಿ ನಮೂನೆಯನ್ನು ಹಿಂದಿರುಗಿಸದಿರುವುದಕ್ಕೆ ಕಾರಣ ಎಂಬ ಕಾಲಂನಲ್ಲಿ ‘ಮರಣ’ ಎಂದು ನಮೂದಿಸಿರುವುದು ಕಂಡುಬಂದಿದೆ. ಈ ಬೆಳವಣಿಗೆ ಎಸ್‌ಐಆರ್ ಕರಡು ಪಟ್ಟಿ ತಯಾರಿ ಪ್ರಕ್ರಿಯೆಯ ನಿಖರತೆ ಹಾಗೂ ದತ್ತಾಂಶ ದಾಖಲಾತಿ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡೊನಾಲ್ಡ್ ಜೋಸೆಫ್ ರೇಗೋ, ‘ನಾನು ಹುಟ್ಟಿದ್ದು ಇಲ್ಲೇ. ನನ್ನ ಬಳಿ ವೋಟರ್ ಐಡಿಯೂ ಇದೆ. ಕೆಲಕಾಲ ಗಲ್ಫ್‌ನಲ್ಲಿ ಕೆಲಸ ಮಾಡಿದ್ದು, ಇದೀಗ ಊರಿನಲ್ಲೇ ಇದ್ದೇನೆ. ಕಳೆದ ಬಾರಿಯ ಎಸ್‌ಐಆರ್ ಪ್ರಕ್ರಿಯೆಯಲ್ಲೂ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ. ಆದರೆ ಇತ್ತೀಚೆಗೆ ಪರಿಶೀಲನೆ ನಡೆಸಿದಾಗ ‘ನೊ ರೆಕಾರ್ಡ್ಸ್ ಫೌಂಡ್’ ಎಂದು ತೋರಿಸುತ್ತಿದೆ. ಅದಕ್ಕೂ ಮಿಗಿಲಾಗಿ ಗಣತಿ ನಮೂನೆಯನ್ನು ಹಿಂದಿರುಗಿಸದಿರುವುದಕ್ಕೆ ಕಾರಣದ ಕಾಲಂನಲ್ಲಿ ‘ಮರಣ’ ಎಂದು ನಮೂದಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಾನಿನ್ನೂ ಜೀವಂತವಾಗಿದ್ದೇನೆ. ಆದರೂ ಸಂಬಂಧಪಟ್ಟವರು ನನ್ನನ್ನು ಜೀವಂತವಾಗಿಯೇ ಕೊಂದುಬಿಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ? ಬಿಎಲ್‌ಒ ಅವರನ್ನು ವಿಚಾರಿಸಿದಾಗ ಇದು ನನ್ನ ತಪ್ಪಲ್ಲ, ಡಾಟಾ ಎಂಟ್ರಿ ಮಾಡಿದವರ ತಪ್ಪು ಎಂದು ಹೇಳುತ್ತಾರೆ. ಈಗಾಗಲೇ ಎರಡು ಬಾರಿ ಸಂಬಂಧಪಟ್ಟವರ ಕಚೇರಿಗೆ ಅಲೆದಾಡಿದ್ದೇನೆ. ಮತ್ತೆ ನಾಳೆಯೂ ಹೋಗಬೇಕಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ನನ್ನ ಹೆಸರು ಈಗಲೂ ಮತದಾರರ ಪಟ್ಟಿಯಲ್ಲಿದೆ. ಕಳೆದ ಬಾರಿ ನಾನು ಮತವನ್ನೂ ಚಲಾಯಿಸಿದ್ದೇನೆ. ಇಷ್ಟಾದರೂ ಎಸ್‌ಐಆರ್ ಪಟ್ಟಿಯಲ್ಲಿ ನನ್ನನ್ನು ‘ಮರಣ’ ಎಂದು ದಾಖಲಿಸಿರುವುದು ಹೇಗೆ?’ ಎಂದು ಪ್ರಶ್ನಿಸಿರುವ ಅವರು, ‘ಈ ತಪ್ಪಿಗೆ ಯಾರು ಹೊಣೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೀವಂತವಾಗಿರುವ ವ್ಯಕ್ತಿಯೊಬ್ಬರ ಹೆಸರನ್ನೇ ಎಸ್‌ಐಆರ್ ಕರಡು ಪಟ್ಟಿಯಲ್ಲಿ ‘ಮರಣ’ ಎಂದು ದಾಖಲಿಸಿರುವ ಪ್ರಕರಣ ಇದೀಗ ಮತದಾರರ ದತ್ತಾಂಶದ ನಿಖರತೆ ಮತ್ತು ಪರಿಶೀಲನಾ ಪ್ರಕ್ರಿಯೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಈ ರೀತಿಯ ದಾಖಲಾತಿ ಮಾಡಿರುವುದು ಹೇಗೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm