ಬ್ರೇಕಿಂಗ್ ನ್ಯೂಸ್
09-01-21 12:54 pm Mangalore Correspondent ಕರಾವಳಿ
ಮಂಗಳೂರು, ಜ.9: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳಿಂದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಪಕ್ಷದ ಭವಿಷ್ಯದ ಬಗ್ಗೆ ಆತಂಕಗೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳೂರಿನ ಕಂಕನಾಡಿಯ ಗರೋಡಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶೋಭಾ, ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಮೊನ್ನೆಯ ಪಂಚಾಯತ್ ಚುನಾವಣೆಯಲ್ಲೂ ಇದರ ಸುಳಿವು ಸಿಕ್ಕಿದೆ. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಎಲ್ಲಾ ಚುನಾವಣೆಗಳಲ್ಲೂ ಸೋಲು ಕಂಡಿದೆ. ಇದರಿಂದ ಡಿಕೆಶಿ, ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವರಿಗೆ ಜನ ಬೆಂಬಲವಿಲ್ಲ. ಕಾರ್ಯಕರ್ತರ ಬೆಂಬಲವೂ ಇಲ್ಲ. ಬಿಜೆಪಿಯ ಸಂಘಟನಾತ್ಮಕ ಕಾರ್ಯತಂತ್ರಗಳೆನ್ನು ಡಿಕೆಶಿ ಫಾಲೋ ಮಾಡ್ತಿದ್ದಾರೆ. ಆದರೆ, ಡಿಕೆಶಿಯವರ ಕಾರ್ಯಶೈಲಿಯನ್ನು ಸಿದ್ದರಾಮಯ್ಯ ಅವರೇ ಒಪ್ಪುತ್ತಿಲ್ಲ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಆದರೆ, ಜನರು ಜಾಗ್ರತರಾಗಿದ್ದಾರೆ. ಅವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಎಲ್ಲವನ್ನೂ ನೋಡುತ್ತಿದ್ದಾರೆ. ಕಾಂಗ್ರೆಸ್ ಭವಿಷ್ಯಕ್ಕೆ ಕತ್ತಲು ಕವಿಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಪಾಕ್ ಪರ ಘೋಷಣೆ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಸ್ ಡಿಪಿಐ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ, ಎಸ್ ಡಿಪಿಐನವರು ಗ್ರಾಪಂ ಚುನಾವಣೆಯಲ್ಲಿ ಒಂದೆರಡು ಸ್ಥಾನ ಗಳಿಸಿದ್ದಕ್ಕೇ ಏನೇನು ಮಾತನಾಡುತ್ತಿದ್ದಾರೆ. ಎಸ್ ಡಿಪಿಐ ವಿಜಯೋತ್ಸವದಲ್ಲಿ ಅಂಥ ಘೋಷಣೆ ಕೇಳಿಬಂದಿದ್ದು ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಿದ್ದಾರೆ. ಎಸ್ ಡಿಪಿಐನವರ ಉದ್ದೇಶ ಏನು, ಕಾರ್ಯ ಚಟುವಟಿಕೆ ಏನೆಂಬುದರ ಬಗ್ಗೆ ಸಾಮಾನ್ಯ ಜನರಿಗೂ ಗೊತ್ತಾಗಿದೆ. ಇನ್ನು ಬಿಜೆಪಿ ಕಾರ್ಯಕರ್ತರ ಬಾಯಲ್ಲಿ ಅಂಥ ಘೋಷಣೆ ಬರಲು ಸಾಧ್ಯವೇ ಇಲ್ಲ. ಅಂಥ ಭಾವನೆಯೇ ನಮ್ಮ ಕಾರ್ಯಕರ್ತರ ರಕ್ತದಲ್ಲಿ ಇರಲ್ಲ ಎಂದು ಹೇಳಿದರು.
Dk Shivakumar and Siddaramaiah are unable to withstand the goodness of BJP slams MP Shobha Karandlaje in Mangalore.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm