ಬ್ರೇಕಿಂಗ್ ನ್ಯೂಸ್
15-07-26 10:44 pm HK News Staffer ಕರಾವಳಿ
ಉಳ್ಳಾಲ, ಜು.15: ತೊಕ್ಕೊಟ್ಟು ಹೆದ್ದಾರಿ ಫ್ಲೈ ಓವರ್ ಕೆಳಗಡೆ ದಿಢೀರ್ ತಲೆ ಎತ್ತಿರುವ ಅನಧಿಕೃತ ಮಿನಿ ಮಾರ್ಕೆಟಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿರುವ ಪರಿಣಾಮ ನಗರದ ಸೌಂಧರ್ಯವೇ ಕೆಟ್ಟು ಹೋಗಿದ್ದು, ಜನಸಾಮಾನ್ಯರು ರಸ್ತೆ ದಾಟಲು ಪರದಾಡುವಂತಹ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಲ್ಲಿ ಪ್ರಶ್ನಿಸಿದರೆ ಮಾರುಕಟ್ಟೆ ತೆರವುಗೊಳಿಸಲು ಪೊಲೀಸರ ಸಹಕಾರ ಕೋರಲಾಗಿದ್ದು, ಅವರಿಂದ ಇನ್ನೂ ಸ್ಪಂದನೆ ದೊರಕಿಲ್ಲವೆಂದು ಸಬೂಬು ನೀಡಿದ್ದಾರೆ.
ಕಳೆದ ಎರಡು ವರುಷಗಳಿಂದ ತೊಕ್ಕೊಟ್ಟುವಿನ ಫ್ಲೈ ಓವರ್ ಕೆಳಭಾಗದಲ್ಲಿ ವ್ಯಾಪಾರಿಗಳು ಸ್ಟಾಲ್ ಗಳನ್ನ ಹಾಕಿ ಹಣ್ಣು,ತರಕಾರಿ, ಒಣಮೀನು, ಬಟ್ಟೆಗಳನ್ನ ಮಾರಾಟ ನಡೆಸುತ್ತಿದ್ದು, ತಮ್ಮಲ್ಲಿ ಉತ್ಪತ್ತಿಯಾಗುವ ಕಸ, ತ್ಯಾಜ್ಯಗಳನ್ನ ಫ್ಲೈ ಓವರ್ ಅಡಿಯಲ್ಲೇ ಎಸೆದು ಹೋಗುತ್ತಿರುವ ಪರಿಣಾಮ ತೊಕ್ಕೊಟ್ಟು ಜಂಕ್ಷನ್ ಗಬ್ಬು ನಾರುವಂತಾಗಿದೆ. ಇಲ್ಲಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನ ರಸ್ತೆಯಲ್ಲೇ ನಿಲ್ಲಿಸುವ ಪರಿಣಾಮ ರಸ್ತೆ ಸಂಚಾರದಲ್ಲಿ ದಿನ ನಿತ್ಯ ವ್ಯತ್ಯಯ ಉಂಟಾಗುತ್ತಿದೆ. ಇನ್ನು ಪಾದಚಾರಿಗಳಿಗೆ ಫ್ಲೈ ಓವರ್ ಕೆಳಗಡೆ ನಡೆದಾಡಲು ಅವಕಾಶವೇ ಇಲ್ಲದ ಪರಿಸ್ಥಿತಿಯನ್ನ ಬೀದಿ ಬದಿ ವ್ಯಾಪಾರಿಗಳು ತಂದೊಡ್ಡಿದ್ದಾರೆ. ಫ್ಲೈ ಓವರ್ ಕೆಳಭಾಗದಲ್ಲಿ ವ್ಯಾಪಾರ ನಿಷೇಧಿಸಿ ಈ ಹಿಂದೆ ಉಳ್ಳಾಲ ನಗರಸಭೆ ಆಡಳಿತ ವತಿಯಿಂದ ಎಚ್ಚರಿಕೆಯ ಫಲಕ ಅಳವಡಿಸಿದ್ದರೂ ಸಹ ಅದನ್ನೇ ಕಿತ್ತೆಸೆದು ಜೋರಾದ ವ್ಯಾಪಾರ,ವಹಿವಾಟುಗಳನ್ನ ಮುಂದುವರಿಸಲಾಗಿದೆ.
ಸ್ಥಳೀಯ ಕೆಲವು ರಾಜಕೀಯ ಪುಡಾರಿಗಳು ಹಾಗೂ ಸೋ ಕಾಲ್ಡ್ ಕಾರ್ಮಿಕ ಸಂಘಟನೆಯ ಮುಖಂಡರು ಫ್ಲೈ ಓವರ್ ಕೆಳಗಿನ ವ್ಯಾಪಾರಿಗಳಲ್ಲಿ ಹಫ್ತಾ ವಸೂಲಿ ಮಾಡಿ ಅವರ ವಹಿವಾಟುಗಳಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಆರೋಪಗಳೂ ಇವೆ. ರಸ್ತೆ ಮಧ್ಯದಲ್ಲೇ ಅನಧಿಕೃತ ವ್ಯಾಪಾರ, ವಹಿವಾಟುಗಳು ಜೋರಾಗಿರುವ ಪರಿಣಾಮ ಸ್ಥಳೀಯಾಡಳಿತಕ್ಕೆ ತೆರಿಗೆ ಕಟ್ಟಿ ಆಯಕಟ್ಟಿನ ಮಳಿಗೆಗಳಲ್ಲಿ ಕಾನೂನು ಬದ್ಧ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಆದಾಯಕ್ಕೆ ಕುತ್ತು ಬಂದಿದೆ.
ಸ್ಥಳೀಯ ಉಳ್ಳಾಲ ನಗರಸಭೆ ಆಡಳಿತವು ತೊಕ್ಕೊಟ್ಟು ಹೃದಯ ಭಾಗದ ಇಂತಹ ದುಸ್ಥಿಯನ್ನ ಕಂಡೂ ಕಾಣದಂತೆ ಮೌನ ವಹಿಸುತ್ತಲೇ ಬಂದಿದೆ. ಹೆದ್ದಾರಿ ಪ್ರಾಧಿಕಾರವು ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ಸ್ಟಾಲ್ ಗಳನ್ನ ತೆರವು ಮಾಡಬೇಕಾಗಿದ್ದು, ಸ್ಥಳೀಯಾಡಳಿತವು ಕೂಡ ಸಮಸ್ಯೆಯ ಬಗ್ಗೆ ಪ್ರಾಧಿಕಾರಕ್ಕೆ ಪರಿಣಾಮಕಾರಿಯಾಗಿ ಮನವರಿಸಬೇಕಿದೆ.




ಉಳ್ಳಾಲ ನಗರಸಭೆಗೆ ಬಂದಿರುವ ನೂತನ ಪೌರಾಯುಕ್ತರಾದ ಸಂತೋಷ್ ಎಸ್.ಡಿ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ ತೊಕ್ಕೊಟ್ಟು ಫ್ಲೈ ಓವರಿನ ಕೆಳ ಭಾಗವು ಹೆದ್ದಾರಿ ಇಲಾಖೆ ಪ್ರಾಧಿಕಾರದ ಅಧೀನಕ್ಕೆ ಬರುತ್ತದೆ. ಪ್ರಾಧಿಕಾರದ ಅಧಿಕಾರಿಗಳೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆ ನಗರಸಭೆಯ ಅಧಿಕಾರಿಗಳು ಇಲ್ಲಿನ ಮಾರುಕಟ್ಟೆಯನ್ನ ತೆರವುಗೊಳಿಸಲು ನಡೆಸಿದ್ದ ಪ್ರಯತ್ನ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹೆದ್ದಾರಿ ಪ್ರಾಧಿಕಾರದವರಲ್ಲಿ ಫ್ಲೈ ಓವರ್ ಮಾರುಕಟ್ಟೆಯ ಸಮಸ್ಯೆ ಬಗ್ಗೆ ಮತ್ತೊಮ್ಮೆ ವಿಚಾರ ಪ್ರಸ್ತಾಪಿಸಲಾಗುವುದೆಂದು ಹೇಳಿದ್ದಾರೆ.
ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ಕಾರ್ಯಾಚರಿಸುತ್ತಿರುವ ಅನಧಿಕೃತ ಮಾರುಕಟ್ಟೆಯ ಬಗ್ಗೆ ವಿಚಾರ ತಿಳಿದಿದೆ. ನಾವು ನೇರವಾಗಿ ಇದರ ವಿರುದ್ಧ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ.ಹಾಗಾಗಿ ಪೊಲೀಸ್ ಇಲಾಖೆಯ ಸಹಕಾರ ಕೋರಲಾಗಿದ್ದು,ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಸ್ಪಂದನೆ ಇನ್ನೂ ದೊರೆತಿಲ್ಲವೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕರಾದ ಅಬ್ದುಲ್ಲ ಜಾವೆದ್ ಅಜ್ಮಿ ಸಬೂಬು ನೀಡಿದ್ದಾರೆ.
ಸೌಂಧರ್ಯ ವೃದ್ಧಿಗೆ ಮೊದಲ ಆದ್ಯತೆ ನೀಡಬೇಕು
ರವಿಶಂಕರ್ ಮಿಜಾರು ಅವರು ಮೂಡದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತೊಕ್ಕೊಟ್ಟು ಫ್ಲೈ ಓವರ್ ಕೆಳಭಾಗದಲ್ಲಿ ಸುಂದರೀಕರಣ ನಡೆಸಿ, ರಾಣಿ ಅಬ್ಬಕ್ಕಳ ಕುರಿತ ಸ್ಮಾರಕ ನಿರ್ಮಿಸಲು ಪಸ್ತಾವನೆ ಸಲ್ಲಿಸಿದ್ದೆ. ಆದರೆ ಸರಕಾರ ಬದಲಾಗಿ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ತೊಕ್ಕೊಟ್ಟಿನಂತಹ ಬೆಳೆಯುತ್ತಿರುವ ನಗರದಲ್ಲಿ ಅನಧಿಕೃತ ವ್ಯಾಪಾರಕ್ಕೆ ಅವಕಾಶ ಕೊಡಬಾರದು. ಅರ್ಹ ಬೀದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ಒದಗಿಸುವುದು ಸ್ಥಳೀಯಾಡಳಿತದ ಜವಾಬ್ದಾರಿಯಾಗಿದೆಯೆಂದು ಬಿಜೆಪಿ ಮಂಗಳೂರು ಮಂಡಲದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ತಿಳಿಸಿದ್ದಾರೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 09:33 pm
Mangaluru Staffer
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm