ಬ್ರೇಕಿಂಗ್ ನ್ಯೂಸ್
26-06-26 09:42 pm HK News Staffer ಕರಾವಳಿ
ಉಡುಪಿ, ಜೂನ್ 26: ರಾಮಮಂದಿರದಲ್ಲಿ ಅವ್ಯವಹಾರ ಆರೋಪದ ಬಗ್ಗೆ ಅವರಿವರು ಮಾಡಿದ ಸುದ್ದಿಗಳಿಂದ ನಾನು ಅಭಿಪ್ರಾಯ ನೀಡಲು ಆಗಲ್ಲ. ಜುಲೈ 11ರಂದು ಟ್ರಸ್ಟನ ಸಭೆಯಿದೆ. ಅಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ. ನಾನು ಆ ಸಭೆಯಲ್ಲಿ ಭಾಗಿಯಾಗುತ್ತೇನೆ. ವಿಚಾರ ತಿಳಿದು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಶ್ರೀ ರಾಮಮಂದಿರ ವಿಶ್ವಸ್ಥಮಂಡಳಿ ಟ್ರಸ್ಟ್ ಸದಸ್ಯ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಕೆ.ಜಿ ಬೆಳ್ಳಿ ನೀಡಿದರೂ ರಶೀದಿ ಕೊಟ್ಟಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿ, ದೊಡ್ಡ ಮಟ್ಟದ ದೇಣಿಗೆ ನೀಡಿದವರು, ಅಲ್ಲಿಯೇ ರಶೀದಿ ತೆಗೆದುಕೊಳ್ಳಬೇಕು. ದೇಣಿಗೆ ನೀಡುವವರು ಮತ್ತು ಪಡೆದವರು ಇಬ್ಬರಿಗೂ ಜವಾಬ್ದಾರಿಯಿದೆ. ದೇಣಿಗೆ ತೆಗೆದುಕೊಂಡವರಿಗೆ ದೊಡ್ಡ ಜವಾಬ್ದಾರಿ ಇದೆ. ರಶೀದಿ ಕೊಟ್ಟಿಲ್ಲವಾದರೆ ಅದು ದೊಡ್ಡ ತಪ್ಪು. ಕೇವಲ ಬಾಯಿ ಮಾತಿನ ಹೇಳಿಕೆಗಳು ಉಳಿಯಬಾರದು. ಅವರು ಆರೋಪ ಮಾಡಿದ್ದರೆ ವಾಸ್ತವ ಇರಬಹುದು. ಆದರೆ ರಶೀದಿ ಕೊಟ್ಟಿಲ್ಲ ಎಂಬ ಮಾತು ನಂಬಲಾಗಲ್ಲ ಎಂದರು.
ಎಸ್ ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತ ಅರ್ಹ ಬೆಳವಣಿಗೆ. ತಪ್ಪಿದ್ದಲ್ಲಿ ಅದರ ವಿಮರ್ಶೆ ನಡೆಯಲೇಬೇಕು. ಆರೋಪಿಗಳಿಗೆ ತಕ್ಕುದಾದ ಶಿಕ್ಷೆಯಾಗಬೇಕು. ದೇಶ ವಿದೇಶದ ಸಮಸ್ತ ಶ್ರದ್ದಾಳುಗಳ ಕೇಂದ್ರ ಇದು. ಇಂತಹ ಕೇಂದ್ರದಲ್ಲಿ ಇಂತಹ ಘೋರ ಅಪಚಾರ ನಡೆಯಬಾರದಿತ್ತು. ನಡೆದದ್ದು ಹೌದಾದರೆ ಖಂಡಿತ ಶಿಕ್ಷೆಯಾಗಬೇಕು. ಸತ್ಯಾಸತ್ಯತೆ ಶೀಘ್ರವಾಗಿ ಹೊರಬರಬೇಕು ಎಂದರು.
ಎಸ್ ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತ ಅರ್ಹ ಬೆಳವಣಿಗೆ. ತಪ್ಪಿದ್ದಲ್ಲಿ ಅದರ ವಿಮರ್ಶೆ ನಡೆಯಲೇಬೇಕು. ಆರೋಪಿಗಳಿಗೆ ತಕ್ಕುದಾದ ಶಿಕ್ಷೆಯಾಗಬೇಕು. ದೇಶ ವಿದೇಶದ ಸಮಸ್ತ ಶ್ರದ್ದಾಳುಗಳ ಕೇಂದ್ರ ಇದು. ಇಂತಹ ಕೇಂದ್ರದಲ್ಲಿ ಇಂತಹ ಘೋರ ಅಪಚಾರ ನಡೆಯಬಾರದಿತ್ತು. ನಡೆದದ್ದು ಹೌದಾದರೆ ಖಂಡಿತ ಶಿಕ್ಷೆಯಾಗಬೇಕು. ಸತ್ಯಾಸತ್ಯತೆ ಶೀಘ್ರವಾಗಿ ಹೊರಬರಬೇಕು ಎಂದರು.
ನಾನು ಹೋದಾಗಲೆಲ್ಲ ಕೆಲವು ಸಲಹೆ ನೀಡುತ್ತಿದ್ದೆ. ಸಭೆಗಳಲ್ಲೂ ಕೂಡ ಪ್ರಸ್ತಾಪ ಮಾಡುತ್ತಿದ್ದೆ. ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ನಾನು ಅಲ್ಲೇ ನಿಲ್ಲಲು ಸಾಧ್ಯವಿಲ್ಲ, ಹೋದಾಗ ಪರಿಶೀಲಿಸಿ ಸಲಹೆ ನೀಡುತ್ತಿದ್ದೆ. ನಾನು ವಿಶ್ವಸ್ಥ ಮಂಡಳಿ ಸದಸ್ಯ, ವಿಶ್ವಾಸವಿಟ್ಟು ಸಲಹೆ ಕೊಡುತ್ತಿದ್ದೆ. ಸಂಬಂಧಪಟ್ಟವರು ವಿಶ್ವಾಸಾರ್ಹ ವ್ಯಕ್ತಿಗಳಾಗಿರಬೇಕಿತ್ತು ಎಂದರು.
ಚಂಪತ್ ರಾಯ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ವಾಟ್ಸಪ್ ಗ್ರೂಪಿನಲ್ಲಿ ಅವರು ಯಾವುದೇ ರೀತಿಯ ಸಂದೇಶ ಕಳುಹಿಸಿಲ್ಲ. ಟ್ರಸ್ಟನ ವಾಟ್ಸಪ್ ಗ್ರೂಪಿನಲ್ಲಿ ಮಾಹಿತಿ ನೀಡಿಲ್ಲ. ಅವರ ನೇರ ನಂಬರ್ ನಿಂದಲೂ ನನಗೆ ಮೆಸೇಜ್ ಬಂದಿಲ್ಲ. ಈ ತರದ ವಿಷಯಗಳಿದ್ದಾಗ ಅವರು ಮೆಸೇಜ್ ಮಾಡುತ್ತಿರುತ್ತಿದ್ದರು. ಅಲ್ಲಿ ಏನು ಬೆಳವಣಿಗೆಯಾಗಿದೆ ಗೊತ್ತಿಲ್ಲ ಎಂದರು.
ಆರ್ ಎಸ್ ಎಸ್ ನೊಂದಣಿ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಘಟನೆಯನ್ನು ರಿಜಿಸ್ಟರ್ ಮಾಡಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ, ಮಾಡಿದ್ರೆ ಒಳ್ಳೇದು ಎಂದರು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
09-10-26 10:01 am
HK News Staffer
ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪ...
08-10-26 08:44 pm
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am