ಬ್ರೇಕಿಂಗ್ ನ್ಯೂಸ್
22-03-26 02:42 pm HK News Staffer ಕರಾವಳಿ
ಉಳ್ಳಾಲ, ಮಾ.22: ಕಳೆದ ಮಳೆಗಾಲದ ಪ್ರಾಕೃತಿಕ ವಿಕೋಪದಲ್ಲಿ ಮನೆಯನ್ನೇ ಕಳಕೊಂಡಿದ್ದ ಕೊಲ್ಯ ಸಾರಸ್ವತ ಕಾಲನಿಯ ತೊಂಭತ್ತರ ವೃದ್ಧೆ ಗಿರಿಜಾ ಅವರ ಕುಟುಂಬಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿಯವರು ದಾನಿಗಳ ಸಹಕಾರದಿಂದ ನಿರ್ಮಿಸಿಕೊಟ್ಟ ನೂತನ ಮನೆ "ಗಿರಿಜಾ ನಿಲಯ"ದ ಗೃಹಪ್ರವೇಶ ಸಮಾರಂಭ ಶನಿವಾರ ನಡೆಯಿತು.
ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲ್ ಅವರು ನೂತನ ಮನೆಯ ಕೀಲಿ ಕೈಯನ್ನು ಗಿರಿಜಾ ಅವರಿಗೆ ಹಸ್ತಾಂತರಿಸಿದರು. ಕಳೆದ ವರ್ಷ ಮೇ ತಿಂಗಳ ಕೊನೆಯಲ್ಲಿ ಸುರಿದಿದ್ದ ಭಾರೀ ಮಳೆಗೆ ವೃದ್ಧೆ ಗಿರಿಜಾ ಗಟ್ಟಿ ಅವರ ಗುಡಿಸಲಿನ ಮೇಲೆ ಪಕ್ಕದ ಖಾಸಗಿ ಶಾಲೆಯ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಮನೆ ಸಂಪೂರ್ಣ ನೆಲಸಮಗೊಂಡಿತ್ತು. ಘಟನೆಯ ನಾಲ್ಕು ದಿನಗಳ ಹಿಂದಷ್ಟೆ ಗಿರಿಜಾ ಕುಟುಂಬವನ್ನು ಧನಲಕ್ಷ್ಮಿ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದ ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿತ್ತು.
ಗಿರಿಜಾ ಅವರ ಕಿರಿಯ ಮೊಮ್ಮಗಳಾದ ರೂಪಿಕಾ ಅವರ ಪತಿ ಕಾಯಿಲೆಯಿಂದ ಮೃತಪಟ್ಟಿದ್ದರು. ಮೊಮ್ಮಗಳು ಮತ್ತು ಆಕೆಯ ಇಬ್ಬರು ಮಕ್ಕಳನ್ನ ಸಾಕುವ ಜವಬ್ದಾರಿಯನ್ನೂ ಗಿರಿಜಾ ಅವರೇ ಹೊತ್ತುಕೊಂಡಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಕುಟುಂಬವು ಇದ್ದ ಮನೆಯನ್ನೂ ಕಳಕೊಂಡಿತ್ತು. ಅಶಕ್ತ ಕುಟುಂಬಕ್ಕೆ ಆಧಾರವಾಗಿ ನಿಂತ ಧನಲಕ್ಷ್ಮಿ ಅವರು ರೂಪಿಕಾಳಿಗೆ ಜೀವನೋಪಾಯಕ್ಕಾಗಿ ಶಿಶುಪಾಲನಾ ಕೇಂದ್ರವೊಂದರಲ್ಲಿ ಶಿಶುಪಾಲಕಿ ಉದ್ಯೋಗವನ್ನು ಒದಗಿಸಿ ಕೊಟ್ಟಿದ್ದರು. ತನ್ನಲ್ಲಿ ಆರ್ಥಿಕ ಸಂಪತ್ತು ಇಲ್ಲದಿದ್ದರೂ ಸಹ ಸಮಾಜದ ಉದಾರಿ ದಾನಿಗಳ ನೆರವಿನಿಂದ ಗಿರಿಜಾ ಕುಟುಂಬಕ್ಕೆ ಸುಂದರ ಮನೆಯೊಂದನ್ನ ನಿರ್ಮಿಸಿ ಕೊಟ್ಟಿದ್ದಾರೆ.




ಗಿರಿಜಾ ಅವರಿಗೆ ಮನೆ ನಿರ್ಮಾಣದ ಯೋಜನೆಯ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿ ನೋಡಿದ್ದ ಸಂಸದ ಬ್ರಿಜೇಶ್ ಚೌಟ ಅವರು ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡಿದ್ದಲ್ಲದೆ, ಅನೇಕ ದಾನಿಗಳು ಕೂಡ ಧನ ಸಹಾಯ ನೀಡಿ ಸಹಕರಿಸಿದ್ದಾರೆ. ಮನೆ ನಿರ್ಮಾಣಕ್ಕೆ ಎಂಟೂವರೆ ಲಕ್ಷ ರೂಪಾಯಿ ವೆಚ್ಚ ತಗುಲಿದ್ದು, ಗುತ್ತಿಗೆದಾರರಿಗೆ ಇನ್ನೂ ಮೂರುವರೆ ಲಕ್ಷ ರೂಪಾಯಿ ಹಣ ಪಾವತಿಸಲು ಬಾಕಿ ಇದೆ. ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ನ ಪರಿಹಾರ ನಿಧಿಯ ನಿರೀಕ್ಷೆಯಲ್ಲಿದ್ದು, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಸೋಮೇಶ್ವರ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಅವರು ಅದಕ್ಕಾಗಿ ಶ್ರಮಿಸುತ್ತಿದ್ದಾರೆಂದು ಧನಲಕ್ಷ್ಮಿ ಗಟ್ಟಿ ತಿಳಿಸಿದ್ದಾರೆ.
ಧನಲಕ್ಷ್ಮಿ ಅವರು ಓರ್ವ ಮಹಿಳೆಯಾಗಿ ಇಳಿ ವಯಸ್ಸಿನ ವೃದ್ಧೆಗೆ ಮನೆ ಕಟ್ಟಿ ಕೊಟ್ಟಿರುವುದು ಶ್ಲಾಘನೀಯ ಹಾಗೂ ಎಲ್ಲರಿಗೂ ಮಾದರಿ ಕಾರ್ಯವಾಗಿದೆ. ಈ ಸತ್ಕಾರ್ಯಕ್ಕೆ ಆರ್ಥಿಕವಾಗಿ ಸಹಕರಿಸಿದ ದಾನಿಗಳ ಕಾರ್ಯವೂ ಅಭಿನಂದನಾರ್ಹವಾಗಿದೆ. ಎಲ್ಲರ ಪ್ರಯತ್ನದಲ್ಲಿ ಗಿರಿಜಾ ಅವರು ತಮ್ಮ ಜೀವನದ ಅಂತಿಮ ದಿನಗಳನ್ನು ಸ್ವಂತ ಸುಂದರ ಮನೆಯಲ್ಲಿ ಕಳೆಯುವಂತಾಗಿದೆ. ಧನಲಕ್ಷ್ಮಿ ಅವರಿಂದ ಮತ್ತಷ್ಟು ಅಶಕ್ತರಿಗೆ ಮನೆ ನಿರ್ಮಾಣಗೊಳಿಸುವ ಕಾರ್ಯ ಮುಂದುವರೆಯಲಿಯೆಂದು ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲ್ ಹಾರೈಸಿದರು.
ಮಾನವೀಯ ನೆಲೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟ ಗುತ್ತಿಗೆದಾರರಾದ ಸುಂದರ ಗಟ್ಟಿ, ಗಾಯತ್ರಿ ಗಟ್ಟಿ ದಂಪತಿಯನ್ನ ಸನ್ಮಾನಿಸಲಾಯಿತು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm