Mohan C Lazarus Udupi, Protest: ಹಿಂಜಾವೇ ಪ್ರತಿಭಟನೆ, ಎಚ್ಚರಿಕೆ ನಡುವೆಯೂ ಉಡುಪಿಯಲ್ಲಿ 'ಪೀಸ್ ಫೆಸ್ಟಿವಲ್' ; ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ, ತಮಿಳುನಾಡಿನ ವಿವಾದಾತ್ಮಕ ಮಿಷನರಿ ಲಾಝರಸ್ ಆಗಮನ

20-03-26 07:36 pm       HK News Staffer   ಕರಾವಳಿ

ಹಿಂದು ಜಾಗರಣ ವೇದಿಕೆಯ ಪ್ರತಿಭಟನೆ, ಎಚ್ಚರಿಕೆ ನಡುವೆಯೂ ತಮಿಳುನಾಡು ಮೂಲದ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದ ಪೀಸ್ ಫೆಸ್ಟಿವಲ್ ಹೆಸರಿನ ಮೂರು ದಿನಗಳ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ಆರಂಭಗೊಂಡಿದೆ.

ಉಡುಪಿ, ಮಾರ್ಚ್ 20: ಹಿಂದು ಜಾಗರಣ ವೇದಿಕೆಯ ಪ್ರತಿಭಟನೆ, ಎಚ್ಚರಿಕೆ ನಡುವೆಯೂ ತಮಿಳುನಾಡು ಮೂಲದ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದ ಪೀಸ್ ಫೆಸ್ಟಿವಲ್ ಹೆಸರಿನ ಮೂರು ದಿನಗಳ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ಆರಂಭಗೊಂಡಿದೆ.

ಉಡುಪಿ ನಗರದ ಮಿಷನ್ ಕಂಪೌಂಡಿನಲ್ಲಿ ಮಾರ್ಚ್ 20ರಿಂದ 22ರ ವರೆಗೆ ಕಾರ್ಯಕ್ರಮ ಆಯೋಜಿಸಿದ್ದು, ಇದರ ಹಿಂದೆ ಮತಾಂತರದ ಷಡ್ಯಂತ್ರ ಇದೆ, ಲಾಜರಸ್ ಭಾಗವಹಿಸಲು ಅವಕಾಶ ನೀಡಬಾರದೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆಕ್ಷೇಪಿಸಿದ್ದರು. ಅಲ್ಲದೆ, ಜಿಲ್ಲಾಡಳಿತಕ್ಕೂ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಒತ್ತಾಯ ಮಾಡಿದ್ದರು.

ಆದರೆ ಕಾರ್ಯಕ್ರಮ ಸಂಘಟಕರು ಹೈಕೋರ್ಟ್ ಮೂಲಕ ಆದೇಶ ತಂದಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಭದ್ರತೆ ನೀಡಬೇಕು ಎನ್ನುವ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಪೊಲೀಸರು ಕಾರ್ಯಕ್ರಮಕ್ಕೆ ಭದ್ರತೆ ನೀಡಿದ್ದಾರೆ. ತಮಿಳುನಾಡಿನ ಮಿಷನರಿ ಮೋಹನ್ ಲಾಝರಸ್ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಕ್ರಮವೂ ಆರಂಭಗೊಂಡಿದೆ. ಇದೇ ವೇಳೆ, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಶ್ರೀಕಾಂತ್ ಶೆಟ್ಟಿ ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನಲ್ಲಿ ಲಾಝರಸ್ ವಿರುದ್ಧ ಹಲವು ಕೇಸು ದಾಖಲಾಗಿದ್ದು, ಹಿಂದು ವಿರೋಧಿ ಭಾಷಣಕ್ಕಾಗಿ ಕುಖ್ಯಾತಿ ಪಡೆದಿದ್ದಾರೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿಯಿಂದಿರುವ ಉಡುಪಿಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದರು. ಇದರಂತೆ, ಪೊಲೀಸರು ಕಾರ್ಯಕ್ರಮ ಸಂಘಟಕರಿಗೆ ನೋಟೀಸ್ ನೀಡಿ, ಲಾಝರಸ್ ಬದಲು ಬೇರೆ ಭಾಷಣಕಾರರನ್ನು ಕರೆಯುವಂತೆ ಸಲಹೆ ಮಾಡಿದ್ದರು. ಆದರೆ ಸಂಘಟಕರು ಹೈಕೋರ್ಟ್ ಮೂಲಕ ಅನುಮತಿ ಪಡೆದು ಕಾರ್ಯಕ್ರಮ ನಡೆಸಿದ್ದಾರೆ.

Despite strong objections and warnings from the Hindu Jagarana Vedike, a three-day religious event titled “Peace Festival” (Samadhana Mahotsav), led by controversial Tamil Nadu-based missionary Mohan C. Lazarus, commenced in Udupi on Friday. The programme is being held at Mission Compound in the city from March 20 to 22. Leaders of the Hindu Jagarana Vedike had opposed the event, alleging that it was part of a larger conversion agenda.