ಬ್ರೇಕಿಂಗ್ ನ್ಯೂಸ್
14-03-26 05:19 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 14 :ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ, ನಲಿಕೆಯವರು ಇತ್ಯಾದಿ 16 ಜಾತಿಗಳವರು ಮಾಡಬೇಕೇ ವಿನಾ ಬೇರೆ ಜಾತಿಯವರು ಮಾಡುವಂತಿಲ್ಲ. ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಿಸಿದ್ದಾರೆ. ಇದನ್ನು ದೈವ ನರ್ತನ ಸೇವೆ ಮಾಡುವ ಪಂಗಡದವರು ವಿರೋಧಿಸಬೇಕು ಎಂದು ಪಂಬದ ಜನಾಂಗಕ್ಕೆ ಸೇರಿದ ಡಾ.ರತಿ ಹೇಳಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬೋಳೂರಿನ ಜಾರಂದಾಯ ದೈವಸ್ಥಾನದಲ್ಲಿ ಹಿಂದೆ ಸುಬ್ಬಣ್ಣ ಪಂಬದ, ಆನಂತರ ಭಾಸ್ಕರ ಪಂಬದ ಪದವಿನಂಗಡಿ, ಮೂಲ್ಕಿಯ ಕುಮಾರ ಪಂಬದರು ದೈವ ನರ್ತನ ಸೇವೆ ಮಾಡುತ್ತಿದ್ದರು. 2026ರ ಈ ಬಾರಿಯ ದೈವದ ಸೇವೆಗೆ ಆಡಳಿತ ಕಮಿಟಿಯು ಕಾಸರಗೋಡು ಜಿಲ್ಲೆಯ ಚಿಪ್ಪಾರಿನ ಗಣೇಶ ಪಂಬದರಿಗೆ ವಹಿಸಿತ್ತು. ಆದರೆ ಗಣೇಶ್ ಪಂಬದ ಮತ್ತು ಆತನ ಪರಿಚಾರಕರು ಕಡಿಮೆ ಸಂಬಳಕ್ಕೆ ಸಿಗುತ್ತಾನೆಂದು ಪದವಿನಂಗಡಿಯ ದಿವಂಗತ ಗಣೇಶ್ ಪಂಬದರ ಕ್ರಿಶ್ಚಿಯನ್ ಪತ್ನಿಯ ಪುತ್ರನನ್ನು ನೇಮ ಕಟ್ಟಲು ಬಳಸಿದ್ದಾರೆ. ಇದು ಪಂಬದ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.
ಗಣೇಶ ಪಂಬದರಿಗೆ ಎರಡು ಮದುವೆಯಾಗಿದ್ದು, ಮೊದಲಿಗೆ ಕ್ರಿಶ್ಚಿಯನ್ ಪತ್ನಿಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಬಳಿಕ ಆಕೆಯನ್ನು ತ್ಯಜಿಸಿ ವಿಶ್ವಕರ್ಮ ಸಮುದಾಯದ ಮಹಿಳೆಯನ್ನು ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದು, ಇದೀಗ ಆತನ ಮಗನಿಂದ ನೇಮ ಕಟ್ಟಿಸಿದ್ದಾರೆ. ಹೀಗಾದರೆ ಮುಂದೆ ಬೇರೆ ಜಾತಿಯವರು, ಕ್ರಿಶ್ಚಿಯನ್ ಧರ್ಮದವರೂ ನೇಮ, ಕೋಲ ಕಟ್ಟುವುದನ್ನು ಮಾಡಿದರೆ ಒಪ್ಪಲು ಆಗುತ್ತದೆಯೇ.. ಇದರಿಂದ ಪಂಬದ ಜನಾಂಗದ ವೃತ್ತಿ ಗೌರವ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.
ಬೋಳೂರಿನ ಜಾರಂದಾಯ ಸ್ಥಾನದ ಕಮಿಟಿಯವರಿಗೆ ಹೇಳಿದ್ದಕ್ಕೆ, ಅಲ್ಲಿನ ಅಜಲು ಹೋಯಿತೆಂಬ ನೆಪದಲ್ಲಿ ನನ್ನ ಬಗ್ಗೆ ಗಣೇಶ ಪಂಬದನ ಕಡೆಯವರು ನಿಂದಿಸಿದ್ದಾರೆ. ನಿನಗೆ ಅರದಲ ಹಾಕಿ ನೇಮ ಕಟ್ಟಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಿದ್ದೇನೆ.
ಈ ಬಗ್ಗೆ ದೈವ ನರ್ತಕರ ಸಂಘಕ್ಕೆ ಮತ್ತು ಪ್ರಮುಖ ಗುತ್ತಿನವರಿಗೆ ತಿಳಿಸಿದ್ದು, ಈ ರೀತಿ ಮಾಡಿರುವುದು ತಪ್ಪೆಂದು ಹೇಳಿದರೂ, ಬಳಿಕ ನನ್ನದೇ ಬಾಯಿ ಮುಚ್ಚಿಸಲು ನೋಡಿದ್ದಾರೆ. ಬೋಳೂರಿನ ಜಾರಂದಾಯ ದೈವಸ್ಥಾನದ ಕಮಿಟಿಯವರು ಮುಂದಿನ ಬಾರಿ ಚಿಪ್ಪಾರಿನ ಗಣೇಶ ಪಂಬದರಿಗೆ ಸೇವೆ ನೀಡುವುದಿಲ್ಲ ಎಂದಿದ್ದಾರೆ. ದೈವಾರಾಧನೆಗೆ ಅಪಚಾರ ಮಾಡಿರುವ ಗಣೇಶ ಪಂಬದರ ಕೆಲಸವನ್ನು ನಮ್ಮ ಜನಾಂಗದವರು ಖಂಡಿಸಬೇಕು ಎಂದು ಡಾ.ರತಿ ಹೇಳಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm