ಬ್ರೇಕಿಂಗ್ ನ್ಯೂಸ್
13-03-26 10:04 pm Mangaluru Staffer ಕರಾವಳಿ
ಮಂಗಳೂರು, ಮಾರ್ಚ್ 13: ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಏರ್ ಇಂಡಿಯಾ ಎಕ್ಸ್ಪ್ರೆಸ್ ಮಾರ್ಚ್ 16ರಿಂದ ತೊಡಗಿ 28ರ ವರೆಗೆ ಮಂಗಳೂರು ಏರ್ಪೋರ್ಟ್ (IXE) ನಿಂದ ಶಾರ್ಜಾ (SHJ) ಗೆ ಪ್ರತಿ ದಿನ ವಿಮಾನ ಹಾರಾಟ ನಡೆಸುವುದಾಗಿ ಹೇಳಿದೆ. ಯುದ್ಧ ಆರಂಭಗೊಂಡ ಬಳಿಕ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.
ಇದರಂತೆ, IX 6057 ಮಂಗಳೂರಿನಿಂದ ಮಧ್ಯಾಹ್ನ 13:25ಕ್ಕೆ ಹೊರಟು ಅಲ್ಲಿ ಸ್ಥಳೀಯ ಸಮಯ ಸಂಜೆ 16:05 ಕ್ಕೆ ಶಾರ್ಜಾ ತಲುಪುತ್ತದೆ. IX 6058 ವಿಮಾನದಲ್ಲಿ ಸ್ಥಳೀಯ ಸಮಯ 17:05 ಕ್ಕೆ ಶಾರ್ಜಾದಿಂದ ಹೊರಟು ರಾತ್ರಿ 22:30 IST ಕ್ಕೆ ಮಂಗಳೂರು ಏರ್ಪೋರ್ಟ್ ತಲುಪುತ್ತದೆ.
ಅಂತೆಯೇ, IX 1991 ವಿಮಾನವು ಮಂಗಳವಾರ, ಬುಧವಾರ ಮತ್ತು ಭಾನುವಾರ ಮಂಗಳೂರಿನಿಂದ ಬೆಳಗ್ಗೆ 05.15ಕ್ಕೆ ಹೊರಟು 8.30ಕ್ಕೆ ದೆಹಲಿ ತಲುಪುತ್ತದೆ. IX 1992 ಈ 3 ದಿನಗಳಲ್ಲಿ ದೆಹಲಿಯಿಂದ ಬೆಳಗ್ಗೆ 09.30ಕ್ಕೆ ಹೊರಟು ಮಧ್ಯಾಹ್ನ 12.25 ಕ್ಕೆ ಮಂಗಳೂರು ಏರ್ಪೋರ್ಟ್ ತಲುಪುತ್ತದೆ. ಈ ವಿಮಾನಗಳ ಸಮಯ ಮಾರ್ಚ್ 16ರಿಂದ 25 ರವರೆಗೆ ಮಾತ್ರ ಆಗಿರುತ್ತದೆ. ಈ ವಿಮಾನ ಸಮಯ ಮತ್ತು ಸಂಖ್ಯೆ ಈ ಮೂರು ದಿನಗಳಿಗೆ ನಿರ್ದಿಷ್ಟವಾಗಿದೆ.
ವಾರದ ಇತರ ದಿನಗಳಲ್ಲಿ, IX 1276 ಮಂಗಳೂರಿನಿಂದ ಬೆಳಗ್ಗೆ 08.30 ಕ್ಕೆ ಹೊರಟು ಪೂರ್ವಾಹ್ನ 11.45 ಕ್ಕೆ ದೆಹಲಿಗೆ ತಲುಪುತ್ತದೆ. IX 1275 ವಿಮಾನ ದೆಹಲಿಯಿಂದ ಬೆಳಗ್ಗೆ 5 ಕ್ಕೆ ಹೊರಟು 8ಕ್ಕೆ ಮಂಗಳೂರಿಗೆ ಆಗಮಿಸುತ್ತದೆ ಎಂದು ಮಂಗಳೂರು ಏರ್ಪೋರ್ಟ್ ಪ್ರಕಟಣೆ ತಿಳಿಸಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm