ಬ್ರೇಕಿಂಗ್ ನ್ಯೂಸ್
31-12-20 08:07 pm Mangaluru Correspondent ಕರಾವಳಿ
Photo credits : Facebook
ಮಂಗಳೂರು, ಡಿ.31: ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ. ವಿಕಾಶ್ ಕುಮಾರ್ ಅವರನ್ನು ಕೆಎಸ್ ಆರ್ ಪಿ ಡಿಐಜಿ ಆಗಿ ವರ್ಗ ಮಾಡಿದ್ದು ನೂತನ್ ಪೊಲೀಸ್ ಕಮಿಷನರ್ ಆಗಿ ಎನ್. ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಶಶಿಕುಮಾರ್ ಬೆಂಗಳೂರು ವೈರ್ ಲೆಸ್ ವಿಭಾಗದಲ್ಲಿ ಎಸ್ಪಿ ಆಗಿದ್ದರು.
ಕಳೆದ ಜೂನ್ 29ರಂದು ವಿಕಾಶ್ ಕುಮಾರ್ ಮಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಕೇವಲ ಆರು ತಿಂಗಳಲ್ಲಿ ಕಮಿಷನರ್ ಹುದ್ದೆಯಿಂದ ತೆರವು ಮಾಡಿದ್ದು ಸಂಶಯಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಕಮಿಷನರ್ ಆಗಿದ್ದವರನ್ನು ಒಂದು ವರ್ಷಗಳ ಕಾಲ ವರ್ಗ ಮಾಡುವುದಿಲ್ಲ.

ಇದಕ್ಕೂ ಮುನ್ನ ಪಿ.ಎಸ್.ಹರ್ಷ ಮಂಗಳೂರು ಕಮಿಷನರ್ ಆಗಿದ್ದರು. ಕಳೆದ ಬಾರಿ ಗೋಲಿಬಾರ್ ಸಂದರ್ಭ ಹರ್ಷ ವಿರುದ್ಧ ಆರೋಪ ಕೇಳಿಬಂದರೂ, ಅವರನ್ನು ಉಳಿಸಿಕೊಳ್ಳಲಾಗಿತ್ತು. ಮೃದು ಸ್ವಭಾವದವರಾಗಿದ್ದ ಹರ್ಷ ಅವರ ಬಗ್ಗೆ ಮಂಗಳೂರಿನ ಪೊಲೀಸರಲ್ಲಿ ಉತ್ತಮ ಅಭಿಪ್ರಾಯವೇ ಇತ್ತು.
ಆದರೆ, ವಿಕಾಶ್ ಕುಮಾರ್ ಕಮಿಷನರ್ ಆಗಿ ಬಂದ ಬಳಿಕ ಸಹೋದ್ಯೋಗಿಗಳಲ್ಲಿಯೇ ಉತ್ತಮ ಅಭಿಪ್ರಾಯ ಇರಲಿಲ್ಲ. ಕೆಲವು ವಿಚಾರಗಳಲ್ಲಿ ಏಕಪಕ್ಷೀಯ ನಡೆ ತೋರುತ್ತಿದ್ದರೆಂದು ಆರೋಪಗಳಿದ್ದವು. ಹೊಯ್ಗೆ ಮಾಫಿಯಾ ದಲ್ಲಾಳಿಗಳು ಕಮಿಷನರ್ ಕಚೇರಿಗೇ ಬರುತ್ತಿದ್ದರೆಂಬ ಆರೋಪಗಳೂ ಇದ್ದವು. ಅಲ್ಲದೆ, ಯಾವುದೇ ಮಹತ್ವದ ಘಟನೆಗಳಾದ ಸಂದರ್ಭದಲ್ಲೂ ಕಮಿಷನರ್ ಸ್ಥಳಕ್ಕೆ ಬಂದು ಇತರೇ ಪೊಲೀಸರಿಗೆ ಮೋಟಿವೇಶನ್ ಕೊಡುವ ಕೆಲಸ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೋ ಏನೋ ಕೇವಲ ಆರೇ ತಿಂಗಳಲ್ಲಿ ಮಂಗಳೂರು ಕಮಿಷನರ್ ಮಹತ್ವದ ಹುದ್ದೆಯಿಂದ ತೆರವು ಮಾಡಲಾಗಿದ್ದು ಯಾವುದೇ ಮಹತ್ವ ಇರದ ಕೆಎಸ್ ಆರ್ ಪಿ ಡಿಐಜಿ ಆಗಿ ವರ್ಗ ಮಾಡಲಾಗಿದೆ. ಈ ಹುದ್ದೆಯನ್ನು ಡಿಮೋಶನ್ ಎಂದೇ ಪರಿಗಣಿಸಲಾಗುತ್ತದೆ.
ಇದೇ ವೇಳೆ, ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿಯಾಗಿ ಕರ್ತವ್ಯದಲ್ಲಿದ್ದ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂದಾರು ಅವರನ್ನು ಭಟ್ಕಳ ಉಪ ವಿಭಾಗದ ಎಸ್ಪಿ ಆಗಿ ಪ್ರಮೋಟ್ ಮಾಡಲಾಗಿದೆ.
Mangaluru city commissioner Vikash Kumar Vikash has been transferred with immediate effect. Shashi Kumar appointed as New Police Commissioner of Mangalore City. Shashi Kumar who was earlier the superintendent of police, internal security division will now assume th
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
01-11-25 01:31 pm
Mangalore Correspondent
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm