ಬ್ರೇಕಿಂಗ್ ನ್ಯೂಸ್
29-11-25 10:01 pm Mangalore Correspondent ಕರಾವಳಿ
ಮಂಗಳೂರು, ನ.29 : ಒಂದು ವರ್ಷದ ಹಿಂದೆ ಆರಂಭಗೊಂಡ ಡಿ.ಕೆ. ಟ್ರಾನ್ಸ್ ಪೋರ್ಟ್ ಅಂಡ್ ಲಾಜಿಸ್ಟಿಕ್ ಸರ್ವಿಸಸ್ ಕಂಪನಿಯ ಮಂಗಳೂರು ಕಚೇರಿಯನ್ನು ನಗರದ ನಾಗುರಿಯಲ್ಲಿ ಆರಂಭಿಸಲಾಯಿತು. ನಾಗುರಿಯ ಆಂಜೆಲ್ ಚರ್ಚ್ ಫಾದರ್ ಫೆಡ್ರಿಕ್ ಮೊಂತೇರೊ ಮತ್ತು ಫಾದರ್ ಸ್ಟ್ಯಾನಿ ಫೆರ್ನಾಂಡಿಸ್ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಜನರಲ್ ಸೆಕ್ರಟರಿ ಮಿಥುನ್ ರೈ, ಎಂಸಿಸಿ ಬ್ಯಾಂಕ್ ಚೇರ್ಮನ್ ಅನಿಲ್ ಲೋಬೊ, ಉದ್ಯಮಿ ಜಾನ್ ಸುರೇಶ್, ದಕ್ಷಿಣ ಕನ್ನಡ ಟ್ರಕ್ ಅಸೋಸಿಯೇಶನ್ ಅಧ್ಯಕ್ಷ ಸುಶಾಂತ್ ಶೆಟ್ಟಿ, ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ಚಿತ್ತರಂಜನ್, ಏಂಜೆಲ್ ರೆಸಿಡೆನ್ಸಿ ಮಾಲಕ ಯೋಗಿಶ್ ಪೂಜಾರಿ, ಮಾಜಿ ಕಾರ್ಪೊರೇಟರ್ ಗಳಾದ ಶೋಭಾ ಪೂಜಾರಿ, ಸಂದೀಪ್ ಗರೋಡಿ, ಉದ್ಯಮಿ ದೀಪಕ್ ಡರ್ಮನ್ ಡಿಸೋಜ, ತುಳುನಾಡ ರಕ್ಷಣಾ ವೇದಿಕೆಯ ಯೋಗಿಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



ಡಿಕೆ ಟ್ರಾನ್ಸ್ ಪೋರ್ಟ್ ಲಾಜಿಸ್ಟಿಕ್ಸ್ ಡಿಕೆಜಿಓಸಿ ಸಂಸ್ಥೆಯ ಅಂಗಸಂಸ್ಥೆಯಾಗಿದ್ದು, ಫೈನಾನ್ಸ್, ಸೊಸೈಟಿ ಸೇರಿದಂತೆ ಹಲವು ಸಂಸ್ಥೆಗಳನ್ನು ನಡೆಸುತ್ತಿದ್ದು 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಆಲ್ವಿನ್ ಜೋಯೆಲ್ ಸಂಸ್ಥೆಯ ಚೇರ್ಮನ್ ಆಗಿದ್ದು, ಸಮೂಹ ಸಂಸ್ಥೆಗಳಾಗಿ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಆಲ್ವಿನ್ ಜೋಯೆಲ್, ಸಾರಿಗೆ ಸಂಸ್ಥೆಯನ್ನು ಮುನ್ನಡೆಸುವುದು ಸುಲಭದ ಕೆಲಸ ಅಲ್ಲ. ನಮ್ಮ ಸಂಸ್ಥೆಯ ಸರ್ವರ ಅಪೇಕ್ಷೆಯಂತೆ ಸಾರಿಗೆ ಉದ್ಯಮಕ್ಕೆ ಕೈಹಾಕಿದ್ದು ಒಂದು ವರ್ಷದಲ್ಲಿ ಐದು ಜಿಲ್ಲೆಗಳಲ್ಲಿ ವ್ಯವಹಾರ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ ವೇಳೆಗೆ ಮತ್ತೆರಡು 18 ಚಕ್ರದ ಬೃಹತ್ ಟ್ರಕ್ಕನ್ನು ಸೇವೆಗೆ ಇಳಿಸಲಾಗುವುದು. ದಕ್ಷಿಣ ಭಾರತ ವ್ಯಾಪ್ತಿಯಲ್ಲಿ ನಮ್ಮ ಉದ್ಯಮ ವಿಸ್ತರಣೆಗೆ ನೀಲನಕ್ಷೆ ಮಾಡಿಕೊಂಡಿದ್ದೇವೆ. ಸರಿಯಾದ ಯೋಜನೆ ಮತ್ತು ಉದ್ಯೋಗಿಗಳ ಶ್ರಮದಿಂದ ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸಬಹುದು ಎನ್ನುವ ಧೈರ್ಯ ಬಂದಿದೆ ಎಂದು ಹೇಳಿದರು. ಸಂಸ್ಥೆಯ ಪ್ರವರ್ತಕಿ ಲೀಸಿ ಡಿಸೋಜ ಉಪಸ್ಥಿತರಿದ್ದರು.
The Mangaluru office of DK Transport & Logistic Services, which was launched a year ago, was inaugurated at Naguri in the city. The new office was inaugurated by Angel Church Naguri’s Fr. Fredrick Montero and Fr. Stany Fernandes.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm