ಬ್ರೇಕಿಂಗ್ ನ್ಯೂಸ್
20-11-25 10:48 pm Mangalore Correspondent ಕರಾವಳಿ
ಪುತ್ತೂರು, ನ.20 : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ನಡೆದಿದೆ.
ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿಯ ದಿ.ವಾಲ್ಟರ್ ರೋಡ್ರಿಗಸ್ ಎಂಬವರ ಪುತ್ರ ಚೇತನ್(29) ಮೃತ ಯುವಕ. ತನ್ನ ಮನೆಯಲ್ಲೇ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಚೇತನ್ ಜೀವಾಂತ್ಯ ಮಾಡಿಕೊಂಡಿದ್ದಾರೆ. ಪದವಿ ಮುಗಿಸಿ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಚೇತನ್ ಕೆಲ ಸಮಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಈ ಬಗ್ಗೆ ಪುತ್ತೂರಿನ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಬುಧವಾರ ಶಿಕ್ಷಕಿಯಾಗಿರುವ ತಾಯಿಯನ್ನು ಕಾಲೇಜಿನ ವರೆಗೆ ಬಿಟ್ಟು ಬಂದಿದ್ದ ಚೇತನ್ ಮನೆಗೆ ಬಂದು ಸಾವಿಗೆ ಶರಣಾಗಿದ್ದಾನೆ.
ತಾಯಿ ಎಂದಿನಂತೆ ಮಧ್ಯಾಹ್ನ ದೂರವಾಣಿ ಕರೆ ಮಾಡಿದಾಗ ಮಗ ಕರೆ ಸ್ವೀಕರಿಸದೆ ಇದ್ದಾಗ ಮನೆಯ ಬಳಿ ಕೆಲಸ ಮಾಡುತ್ತಿದ್ದವರಿಗೆ ಕರೆ ಮಾಡಿದ್ದರು. ಮಗ ಕರೆ ಸ್ವೀಕರಿಸುತ್ತಿಲ್ಲ, ಸ್ವಲ್ಪ ವಿಚಾರಿಸಿ ಎಂದಿದ್ದರು. ಮನೆಯ ಬಳಿ ಬಂದಾಗ ಚಿಲಕ ಹಾಕಿದ್ದು ಕಿಟಕಿಯಿಂದ ನೋಡಿದಾಗ ಚೇತನ್ ಫ್ಯಾನಿಗೆ ನೇಣು ಬಿಗಿದು ನೇತಾಡಿರುವ ಸ್ಥಿತಿಯಲ್ಲಿರುವುದು ಕಂಡಿದೆ. ತಾಯಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A 29-year-old young man suffering from mental depression died by suicide at his home in Noojibaltila, Kadaba taluk. The deceased has been identified as Chetan, son of D. Walter Rodrigues from Kodankeri in Noojibaltila.
21-11-25 10:19 am
Bangalore Correspondent
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
21-11-25 02:26 pm
HK News Desk
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
20-11-25 10:48 pm
Mangalore Correspondent
Mangalore, Dharmasthala Case: ಧರ್ಮಸ್ಥಳ ಪ್ರಕರಣ...
20-11-25 10:08 pm
'ಮಹಿಷಾಸುರ'ನ ವೇಷ ಕಳಚುತ್ತಿದ್ದಂತೆ ಯಕ್ಷಗಾನ ಕಲಾವಿದ...
20-11-25 01:42 pm
ಡಿ.3ರಂದು ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧೀಜಿ 'ಸಂವ...
19-11-25 10:46 pm
ಯಕ್ಷಗಾನದ ಬಗ್ಗೆ ಅವಹೇಳನ ; ಬಿಳಿಮಲೆ ಅವರನ್ನು ಅಧ್ಯಕ...
19-11-25 07:28 pm
20-11-25 10:53 pm
Bangalore Correspondent
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am
B C Road, Crime, Mangalore: ಗ್ರಾಹಕಿ ಸೋಗಿನಲ್ಲಿ...
19-11-25 11:17 pm
Shri Tatvamasi Charitable Trust, Fraud: ಸುಳ್ಯ...
19-11-25 09:26 pm