ಬ್ರೇಕಿಂಗ್ ನ್ಯೂಸ್
03-11-25 12:37 pm Mangalore Correspondent ಕರಾವಳಿ
ಮಂಗಳೂರು, ನ.3 : ಬೆಂಗಳೂರಿನ ಕುಂಬಳಗೋಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿಯೊಬ್ಬರು ಭಾನುವಾರ ಸಸಿಹಿತ್ಲು ಬೀಚ್ ಬಳಿಯ ನಂದಿನಿ ನದಿ ಅಳಿವೆಯಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾರೆ.
ಬೆಂಗಳೂರು ಗಿರಿನಗರ 80 ಅಡ್ಡ ರಸ್ತೆ ನಿವಾಸಿ ಪ್ರಸನ್ನ ಸಿ.ಎಲ್. ಎಂಬವರ ಪುತ್ರ ಪ್ರಣವ್ ಚಂದ್ರ (24) ನೀರುಪಾಲಾದ ವಿದ್ಯಾರ್ಥಿ. ಒಟ್ಟು ಏಳು ಮಂದಿ ಗೆಳೆಯರು ಶುಕ್ರವಾರ ಮಂಗಳೂರಿಗೆ ಬಂದಿದ್ದು ಎಲ್ಲರೂ ಹೈಸ್ಕೂಲ್, ಪಿಯು ಕಾಲೇಜಿನ ಸಹಪಾಠಿಗಳಾಗಿದ್ದು ಬೇರೆ ಬೇರೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ.
ಮಂಗಳೂರಿಗೆ ಬಂದ ಬಳಿಕ ಶುಕ್ರವಾರ ರೂಮ್‌ನಲ್ಲಿ ತಂಗಿದ್ದು, ಬಳಿಕ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಭಾನುವಾರ ಸಸಿಹಿತ್ಲು ಬೀಚ್ ಬಳಿಯ ನಂದಿನಿ ನದಿ ಅಳಿವೆಗೆ ಆಗಮಿಸಿ ನೀರಾಟದಲ್ಲಿ ತೊಡಗಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಇವರು ಸಮುದ್ರಕ್ಕೆ ಇಳಿದ ಸ್ಥಳದ ಬಳಿ ನಂದಿನಿ ನದಿ ಅಳಿವೆ ಹೆಜಮಾಡಿ ನೂತನ ಬಂದರಿನ ಬ್ರೇಕ್‌ವಾಟರ್ ಇದೆ. ಈ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯದಂತೆ ಬೀಚ್‌ನ ಗೃಹರಕ್ಷಕ ದಳ ಸಿಬ್ಬಂದಿ, ಲೈಫ್ ಗಾರ್ಡ್ ಗಳು ಎಚ್ಚರಿಕೆ ನೀಡಿದ್ದರೂ ಅವರ ಮಾತು ಕೇಳದೆ ದೂರದ ಸ್ಥಳಕ್ಕೆ ಬಂದು ಅಪಾಯಕಾರಿ ಅಳಿವೆ ಜಾಗದಲ್ಲಿ ಇಳಿದಿದ್ದರು. ಅಲೆಗಳಿಗೆ ಸಿಲುಕಿದ್ದ ಪ್ರಣವ್ ಮೊದಲಿಗೆ ಬಂಡೆ ಕಲ್ಲು ಹಿಡಿದುಕೊಂಡು ಪಾರಾಗಲು ಯತ್ನಿಸಿದ್ದರು. ಆದರೆ ಬಂಡೆಯಿಂದ ದೂರವಿದ್ದ ಈ ಸ್ಥಳಕ್ಕೆ ಉಳಿದವರು ಧಾವಿಸಿ ರಕ್ಷಿಸಲು ಯತ್ನಿಸುವಷ್ಟರಲ್ಲಿ ಅವರು ನೀರುಪಾಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ, ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ. ಕುಟುಂಬಸ್ಥರು ರಾತ್ರಿ ವೇಳೆ ಸಸಿಹಿತ್ಲು ಕಿನಾರೆ ಬಳಿ ಆಗಮಿಸಿದ್ದಾರೆ.
ಬ್ರೇಕ್ ವಾಟರ್ ಅಪಾಯಕಾರಿ ಸ್ಥಳ
ಅಳಿವೆ ಪಕ್ಕದ ಬ್ರೇಕ್ ವಾಟರ್ ನೂತನ ಹೆಜಮಾಡಿ ಬಂದರಿಗೆ ಸೇರಿದ್ದು ಇದರ ಮೇಲೆ ಯಾರೂ ಹೊಗದಂತೆ ತಡೆಬೇಲಿಯಾಗಲಿ, ಎಚ್ಚರಿಕೆ ಫಲಕವಾಗಲೀ ಇಲ್ಲ. ಮಾತು ಕೇಳದೆ ಯುವಕರು ಬೈಕ್ ನಲ್ಲಿ ಹೋಗುತ್ತಾರೆ. ಗಾಳ ಹಾಕುವವರೂ ಹೋಗುತ್ತಾರೆ ಎನ್ನುತ್ತಾರೆ ಸ್ಥಳೀಯರು.
A 24-year-old engineering student from Bengaluru drowned while swimming near the estuary of the Nandini River at Sasihithlu Beach on Sunday. The deceased has been identified as Pranav Chandra (24), son of Prasanna C.L., a resident of Girinagar 80th Cross, Bengaluru, and a second-year student at a private engineering college in Kumbalgodu.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am