ಬ್ರೇಕಿಂಗ್ ನ್ಯೂಸ್
02-11-25 06:57 pm Mangalore Correspondent ಕರಾವಳಿ
ಮಂಗಳೂರು, ನ.2 : ನಗರದ ನ್ಯೂ ಉರ್ವ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಯೋನೆಕ್ಸ್ - ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೂರು ವಿಭಾಗದಲ್ಲಿ ಭಾರತಕ್ಕೆ ಸ್ವರ್ಣ ಸಿಕ್ಕಿದೆ.
ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಥಾಯ್ಲೆಂಡಿನ ಆಟಗಾರರಾದ ಹತಾಯ್‌ತಿಪ್ ಮಿಜದ್ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿ ಭಾರತದ ಶ್ರೀನಿಧಿ ನಾರಾಯಣನ್ ಮತ್ತು ರೆಶಿಕಾ ಉತಯಸೂರ್ಯನ್ ಜೋಡಿಯನ್ನು 21-7, 21-11 ಸೆಟ್‌ಗಳಿಂದ ಪರಾಭವಗೊಳಿಸಿ ಚಾಂಪಿಯನ್ ಪಟ್ಟಕ್ಕೇರಿತು. ಭಾರತದ ಜೋಡಿ ರನ್ನರ್ ಅಪ್ ಪಡೆಯಿತು.






ಮಹಿಳೆಯರ ಸಿಂಗಲ್ಸ್ ಪಂದ್ಯಾಟದಲ್ಲಿ 3ನೇ ಶ್ರೇಯಾಂಕದ ಭಾರತದ ಮಾನ್ಸಿ ಸಿಂಗ್ ಅವರು ಚಾಂಪಿಯನ್ ಆದರು. ಅವರ ಎದುರಾಳಿ ಆಟಗಾರ್ತಿ 4ನೇ ಶ್ರೇಯಾಂಕದ ಭಾರತದ ಅಶ್ಮಿತಾ ಚಲಿಹಾ ರನ್ನರ್ ಅಪ್ ಆಗಿ ಮಾನ್ಯತೆ ಪಡೆದರು. ಇವರ ಸ್ಕೋರ್ ವಿವರ: 21-17, 22-20. ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮತ್ತು ಕಾರ್ಯದರ್ಶಿ ಸುಪ್ರೀತ್ ಆಳ್ವ ವಿಜೇತರಿಗೆ ಪದಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮತ್ತೆ ಭಾರತದ್ದೇ ಜೋಡಿ ಮುಖಾಮುಖಿಯಾದರು. ಅಗ್ರ ಶ್ರೇಯಾಂಕದ ರಿತ್ವಿಕ್ ಸಂಜೀವ್ ಸತೀಶ್ ಕುಮಾರ್ ಚಾಂಪಿಯನ್ ಪಟ್ಟ ಗಳಿಸಿದರು. ಎದುರಾಳಿ ಆಟಗಾರ ರೌನಕ್
ಚೌಹಾಣ್ ರನ್ನರ್ ಅಪ್ ಸ್ಥಾನ ಪಡೆದರು. ಇವರ ಸ್ಕೋರ್ ವಿವರ: 14-21, 21-19, 21-19. ಇವರಿಗೆ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಪದಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತದ ಎರಡನೇ ಶ್ರೇಯಾಂಕದ ಧ್ರುವ ರಾವತ್ ಮತ್ತು ಮನೀಷಾ ಕೆ ಜೋಡಿಯು 18-21, 21-18 ಮತ್ತು 22-20 ಸೆಟ್‌ಗಳಿಂದ ಎದುರಾಳಿ ಥಾಯ್ಲೆಂಡಿನ ತನಾವಿನ್ ಮ್ಯಾದೀ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿಯನ್ನು ಮಣಿಸಿ ಚಾಂಪಿಯನ್ ಪಟ್ಟ ಗಳಿಸಿತು. ಈ ಪಂದ್ಯ ಕೊನೆಯ ವರೆಗೂ ರೋಚಕತೆಯನ್ನು ಕಾಯ್ದುಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಇವರಿಗೆ ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಪದಕ ಹಾಗೂ ಸ್ಮರಣಿಕೆ ನಿಡಿ ಗೌರವಿಸಿದರು.
ಪುರುಷರ ಡಬಲ್ಸ್ ನಲ್ಲಿ ಸಿಂಗಾಪುರದ ಎರಡು ತಂಡಗಳು ಮುಖಾಮುಖಿಯಾದವು. ಎಂಗ್ ಕೀಟ್ ವೆಸ್ಲಿ ಕೊಹ್ ಮತ್ತು ಅಗ್ರ ಶ್ರೇಯಾಂಕದ ಜುನ್‌ಸ್ಯುಕೆ ಕುಬೊ ಜೋಡಿಯು ಎದುರಾಳಿ 8ನೇ ಶ್ರೇಯಾಂಕದ ಡೊನೊವನ್ ವಿಲಾರ್ಡ್ ವೀ ಮತ್ತು ಜಿಯಾ ಹವೊ ಹೊವಿನ್ ವೊಂಗ್ ಜೋಡಿಯನ್ನು 21-12, 21-17 ಅಂಕಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇವರಿಗೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪದಕ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
The Yonex–Sunrise Chief Minister’s Mangaluru India International Challenge 2025 badminton tournament concluded at the New Urwa Indoor Stadium, with India bagging three gold medals across categories.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am