ಬ್ರೇಕಿಂಗ್ ನ್ಯೂಸ್
03-10-25 11:07 pm Mangalore Correspondent ಕರಾವಳಿ
ಮಂಗಳೂರು, ಅ.3 : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಆಚಾರ್ಯ ಮಠ ವಠಾರದಲ್ಲಿ ಇತಿಹಾಸ ಪ್ರಸಿದ್ಧ ಮಂಗಳೂರು ಶಾರದಾ ಮಹೋತ್ಸವದ 103ನೇ ವರ್ಷದ ಪ್ರಯುಕ್ತ ವಿಶೇಷ ಹಾಗೂ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.
ನಾಲ್ಕು ದಿನಗಳ ಪರ್ಯಂತ ಶ್ರೀ ದೇವಿಯ ಮೃತಿಕಾ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ಪ್ರತಿದಿನ ಮಾತೆಯ ವಿಗ್ರಹಕ್ಕೆ ವಿಶೇಷ ಸರಸ್ವತಿ , ದುರ್ಗಾ, ಚಂಡಿಕಾ ದೇವಿ ಅಲಂಕಾರದೊಂದಿಗೆ ಅಲಂಕರಿಸಿ ಕೊನೆಯ ದಿನಂದಂದು ಶಾರದಾ ಮಾತೆಯ ಅಲಂಕಾರದಿಂದ ಶೃಂಗರಿಸಿ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ವಿಶೇಷ ಹರಕೆಯ ಹುಲಿ ವೇಷಧಾರಿಗಳಿಂದ ಹುಲಿವೇಷ ನರ್ತನ ಸೇವೆ, ಕೇರಳದ ಸುಪ್ರಸಿದ್ದ ಚೆಂಡೆ ವಾದನ, ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.







ದೇವಳದ ಸ್ವಯಂಸೇವಕರಿಂದ ಶಾರದಾ ಮಾತೆಯ ವಿಗ್ರಹಕ್ಕೆ ಭುಜ ಸೇವೆಯೊಂದಿಗೆ ಪ್ರಾರಂಭಗೊಂಡು ಶ್ರೀ ವೆಂಕಟರಮಣ ದೇವಳದಿಂದ ಹೊರಟು ಗದ್ದೆಕೇರಿ , ನವಭಾರತ್ ವೃತ್ತ , ಡೋಂಗೇರಕೇರಿ , ನ್ಯೂ ಚಿತ್ರ ಜುಂಕ್ಷನ್, ಕೆಳಗಿನ ಕಾರ್ಸ್ಟ್ರೀಟ್ , ರಥಬೀದಿಯಲ್ಲಿ ಶೋಭಾಯಾತ್ರೆ ನಡೆದು ಮಹಾಮಾಯ ತೀರ್ಥದಲ್ಲಿ ಜಲಸ್ತಂಭನ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ.ಉಮಾನಂದ ಮಲ್ಯ , ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ, ಕಾಶೀನಾಥ್ ಆಚಾರ್ಯ, ಸುರೇಶ್ ಆಚಾರ್ಯ , ಜಯಂತ್ ಆಚಾರ್ಯ, ಶಾರದಾ ಮಹೋತ್ಸವ ಸಮಿತಿಯ ಜಿ . ದತ್ತಾತ್ರೇಯ ಭಟ್ , ಸುರೇಶ್ ವಿ ಕಾಮತ್, ಸತೀಶ್ ಪ್ರಭು, ಗಣೇಶ್ ಬಾಳಿಗಾ, ಶ್ರೀ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ, ಗಣೇಶ್ ಕಾಮತ್ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ದೇಶ, ವಿದೇಶಗಳಿಂದ ಸಹಸ್ರಾರು ಶ್ರೀ ಮಾತೆಯ ಭಜಕರು ಪಾಲ್ಗೊಂಡು ಪುನೀತರಾದರು.
ಚಿತ್ರ : ಮಂಜು ನೀರೇಶ್ವಾಲ್ಯ
The historic 103rd Sharada Mahotsava at Sri Venkataramana Temple and Acharya Math in Mangaluru’s Car Street concluded with grandeur on Friday. Over four days, the idol of Goddess Sharada was adorned in various forms — Saraswati, Durga, Chandika, and finally Sharada Mata — before being taken in a vibrant procession.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am