ಬ್ರೇಕಿಂಗ್ ನ್ಯೂಸ್
29-09-25 11:02 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.29 : ಇತ್ತೀಚೆಗೆ ಬೆಳ್ತಂಗಡಿ ನ್ಯಾಯಾಲಯದ ಮುಂದೆ ದೂರುದಾರ ಚಿನ್ನಯ್ಯ ಮತ್ತೊಮ್ಮೆ ಹೇಳಿಕೆ ನೀಡಿರುವ ವಿಚಾರದಲ್ಲಿ ಎಸ್ಐಟಿ ಅಧಿಕಾರಿಗಳು ಹೊಸತಾಗಿ ತನಿಖೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅದರಲ್ಲಿ ಹೇಳಿರುವ ಅಂಶಗಳು, ಅದರ ವಾಸ್ತವ ಆಧರಿಸಿ ತನಿಖಾ ಪ್ರಕ್ರಿಯೆ ಚುರುಕಾಗುವ ಸಾಧ್ಯತೆ ಇದೆ. ಇದೇ ವೇಳೆ, ಈವರೆಗೂ ಎಸ್ಐಟಿ ಸರಕಾರಕ್ಕಾಗಲೀ, ಕೋರ್ಟಿಗಾಗಲೀ ಯಾವುದೇ ಮಧ್ಯಂತರ ವರದಿಯನ್ನು ಸಲ್ಲಿಸಿಲ್ಲ ಎನ್ನುವ ವಿಚಾರವೂ ತಿಳಿದುಬಂದಿದೆ.
ಕಳೆದೊಂದು ವಾರದಲ್ಲಿ ಚಿನ್ನಯ್ಯ ಶಿವಮೊಗ್ಗ ಜೈಲಿನಿಂದ ಮೂರು ಬಾರಿ ಬೆಳ್ತಂಗಡಿ ಕೋರ್ಟಿಗೆ ಬಂದು ಸೆಕ್ಷನ್ 183 ಅಡಿ ಹೇಳಿಕೆ ದಾಖಲಿಸಿದ್ದಾನೆ. ಈ ವೇಳೆ, ತಾನು ಮೊದಲಿಗೆ ನೀಡಿರುವ ಹೇಳಿಕೆಯಿಂದ ವಿಮುಖಗೊಂಡಿದ್ದಾನೆ ಎಂದೂ ಹೇಳಲಾಗುತ್ತಿದೆ. ಆದರೆ ಈಗಾಗಲೇ ಆತನ ವಿರುದ್ಧ ಸುಳ್ಳು ಸಾಕ್ಷಿ ವಿಚಾರದಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಲಾಗಿದೆ. ಅಲ್ಲದೆ, ಆತನ ಹೇಳಿಕೆಯಂತೆ ಗಿರೀಶ್ ಮಟ್ಟಣ್ಣವರ್, ಜಯನ್, ವಿಠಲ ಗೌಡರನ್ನು ಕರೆದು ವಿಚಾರಣೆ ನಡೆಸಲಾಗಿತ್ತು. ಇವರ ವಿಚಾರಣೆ ಸಂದರ್ಭದಲ್ಲಿ ವ್ಯತಿರಿಕ್ತ ಹೇಳಿಕೆ ಬಂದಿದ್ದರಿಂದ ಚಿನ್ನಯ್ಯ ಸುಳ್ಳು ಹೇಳುತ್ತಿದ್ದಾನೆಯೇ ಎಂಬ ಸಂಶಯ ಮೂಡಿತ್ತು.
ಹೀಗಾಗಿ ಹೊಸ ಹೇಳಿಕೆಯನ್ನು ಆಧರಿಸಿ ಅಧಿಕಾರಿಗಳು ಏಕಾಏಕಿ ತನಿಖಾ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆ ಇಲ್ಲ. ತನ್ನನ್ನು ಬಲವಂತದಿಂದ ಹೇಳಿಕೆ ಕೊಡಿಸುವಂತೆ ಮಾಡಿದ್ದರು ಎಂದು ಹೇಳಿದ್ದರೂ, ಆತನ ಹಿಂದಿನ ಹೇಳಿಕೆ ಮತ್ತು ಸೌಜನ್ಯಾ ಹೋರಾಟಗಾರರು ನೀಡಿರುವ ಹೇಳಿಕೆಯನ್ನು ತಾಳೆ ಹಾಕಿ ನೋಡಲಿದ್ದಾರೆ. ಚಿನ್ನಯ್ಯ ತನಗೆ ತಲೆಬುರುಡೆ ಬಗ್ಗೆ ಗೊತ್ತಿಲ್ಲ ಎಂದರೂ, ಆಬಳಿಕ ಅದನ್ನು ಬಂಗ್ಲೆಗುಡ್ಡೆ ಕಾಡಿನಿಂದಲೇ ತರಲಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿತ್ತು. ಅದೇ ರೀತಿ ಚಿನ್ನಯ್ಯ ತನ್ನ ಹೇಳಿಕೆ ಬದಲಿಸಿದರೂ, ಅಧಿಕಾರಿಗಳ ತನಿಖೆ ಕರಾರುವಾಕ್ಕಾಗಿದ್ದರೆ ಅದರಲ್ಲಿ ಆತನೇ ಮತ್ತೆ ಸಿಕ್ಕಿಬೀಳುವ ಸಾಧ್ಯತೆ ಇದೆ. ಚಿನ್ನಯ್ಯ ಕೋರ್ಟಿಗೆ ನೀಡಿರುವ ಹೇಳಿಕೆಯ ಪ್ರತಿ ಸಿಕ್ಕ ಬಳಿಕವೇ ಅಧಿಕಾರಿಗಳು ಈ ಬಗ್ಗೆ ನಿರ್ಣಯಿಸಲಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ, ಈವರೆಗೂ ಎಸ್ಐಟಿ ಸರಕಾರಕ್ಕಾಗಲೀ, ಕೋರ್ಟಿಗಾಗಲೀ ಯಾವುದೇ ಮಧ್ಯಂತರ ವರದಿಯನ್ನು ಸಲ್ಲಿಸಿಲ್ಲ ಎನ್ನುವ ವಿಚಾರವೂ ತಿಳಿದುಬಂದಿದೆ. ಎರಡು ದಿನಗಳ ಹಿಂದೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು ಮತ್ತು ಎಸ್ಐಟಿ ತನಿಖೆಯಿಂದ ವಾಸ್ತವ ಹೊರ ಬರುತ್ತಿದೆ ಎಂದು ಹೇಳಿಕೆ ನೀಡಿರುವುದು ತನಿಖಾ ವರದಿ ಸರಕಾರಕ್ಕೆ ಸಲ್ಲಿಕೆ ಆಗಿದೆಯಾ ಎನ್ನುವ ಅನುಮಾನ ಮೂಡಿಸಿತ್ತು.
ಇದೇ ವೇಳೆ, ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧನ ಭೀತಿ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಅವರ ಮನೆಗೆ ಈಗಾಗಲೇ ಮೂರು ಬಾರಿ ನೋಟೀಸ್ ಅಂಟಿಸಿರುವ ಪೊಲೀಸರು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಇದಲ್ಲದೆ, ಪ್ರಕರಣ ಸಂಬಂಧಿಸಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬರುವಂತೆಯೂ ಪೊಲೀಸರು ಸೂಚನೆ ನೀಡಿದ್ದಾರೆ. ತಿಮರೋಡಿಯನ್ನು ಬಂಧಿಸುವ ಸಾಧ್ಯತೆ ಅರಿತಿರುವ ಹೋರಾಟಗಾರರ ತಂಡವು ಅವರಿಗೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೊಡಿಸುವ ಯತ್ನದಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟಿನಲ್ಲಿ ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿದ್ದು, ಸೆ.30ರ ಮಂಗಳವಾರ ಮಧ್ಯಾಹ್ನ ಸರಕಾರಿ ವಕೀಲರು ಆಕ್ಷೇಪ ವಾದ ಮಂಡಿಸಲಿದ್ದಾರೆ. ತಿಮರೋಡಿ ಪರವಾಗಿ ಹಿರಿಯ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ವಾದ ಮಂಡಿಸಿದ್ದಾರೆ.
In the Dharmasthala case, complainant Chinnayya has reportedly given a fresh statement before the Belthangady court, raising the possibility of the SIT reopening its investigation.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm