ಬ್ರೇಕಿಂಗ್ ನ್ಯೂಸ್
28-09-25 08:12 pm Mangalore Correspondent ಕರಾವಳಿ
ಮಂಗಳೂರು, ಸೆ.28 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ-2025’ರ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್, ಯೂನಿಯನ್ ಬ್ಯಾಂಕ್ ವತಿಯಿಂದ ಭಾನುವಾರ ಮೂರನೇ ಆವೃತ್ತಿಯ ರಾಜ್ಯ ಮಟ್ಟದ ಮಂಗಳೂರು ದಸರಾ ಮ್ಯಾರಥಾನ್-2025 ಸ್ಪರ್ಧೆ ನಡೆಯಿತು.
ಮ್ಯಾರಥಾನ್ ನಲ್ಲಿ ಚಿಣ್ಣರಿಂದ ವೃದ್ಧರ ವರೆಗೂ 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕೇರಳ ಸಹಿತ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡರು. 21 ಕಿಮೀ ರನ್, ೧೦ ಕಿಮೀ ರನ್, 5 ಕಿಮೀ ರನ್, 2 ಕೆ ಸ್ಯಾರಿ ರನ್ ಆಯೋಜಿಸಲಾಗಿತ್ತು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. 21 ಕಿ.ಮೀ. ಪ್ರಥಮ ವಿಜೇತರಿಗೆ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ., ತೃತೀಯ 10 ಸಾವಿರ ರೂ., 10 ಕಿ.ಮೀ. ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ., ತೃತೀಯ 5 ಸಾವಿರ ರೂ., 5 ಕಿ.ಮೀ.ನಲ್ಲಿ ಪ್ರಥಮ 5 ಸಾವಿರ ರೂ., ದ್ವಿತೀಯ 2 ಸಾವಿರ ರೂ., ತೃತೀಯ 1 ಸಾವಿರ ರೂ. ನೀಡಲಾಯಿತು.










ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಚಾಲನೆ ನೀಡಿದರು. ಯೂನಿಯನ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಮುಖ್ಯಸ್ಥ ನರಸಿಂಹ ಕುಮಾರ್, ವಲಯ ಮುಖ್ಯಸ್ಥೆ ತೇಜಸ್ವಿನಿ ವಿ.ಸಿ., ಕುದ್ರೋಳಿ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ಲೀಲಾಕ್ಷ ಕರ್ಕೇರಾ, ಜೂಯಿಸ್ ಫಿಟ್ನೆಸ್ ಕ್ಲಬ್‌ನ ರಾಜೇಶ್ ಪಾಟಾಲಿ ಮತ್ತಿತರರು ಇದ್ದರು.
ಬಹುಮಾನ ವಿಜೇತರು
21 ಕಿ.ಮೀ. ಮ್ಯಾರಥಾನ್ ಪುರುಷರ ವಿಭಾಗ: ಪ್ರಥಮ-ಲೈಡ್ ಶಫ್ರಂಗ್ ಲಮಾರೆ (01:26:29), ದ್ವಿತೀಯ -ಶಿವಾನಂದ್ (01:29:29:), ತೃತೀಯ: ಕಿರಣ್ ಕುಮಾರ್ ಕುಲಾಲ್ (02:00:56), ಮಹಿಳೆಯರ ವಿಭಾಗದಲ್ಲಿ ಪ್ರಥಮ: ನಂದಿನಿ (01:52:23), ದ್ವಿತೀಯ: ಆಶಾ ಪತ್ರೋಸೆ (01:59:02) ತೃತೀಯ: ಸಾಕ್ಷಿ (02:00:57)
10 ಕಿ.ಮೀ. ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಪ್ರಥಮ: ಶ್ರೀಧರ್ (48:15), ದ್ವಿತೀಯ: ಐರಪ್ಪ ಹಲಗಣ್ಣನವರ್ (48:42), ತೃತೀಯ: ಘನಶ್ಯಾಮ್ ಪ್ರಸಾದ್ (49:52), ಮಹಿಳೆಯರ ವಿಭಾಗದಲ್ಲಿ ಪ್ರಥಮ: ಚರಿಷ್ಮ (59:47), ದ್ವಿತೀಯ: ಶ್ರೇಯಾ (59:59), ತೃತೀಯ: ಮರಿಯ ಲವೀನ ರೋಡ್ರಿಗಸ್ (01:00:18) ಹಾಗೂ 5 ಕಿ.ಮೀ. ಮ್ಯಾರಥಾನ್ ಪುರಷರ ವಿಭಾಗದಲ್ಲಿ ಪ್ರಥಮ: ಆರ್. ಮಹೇಶ್ (18:12), ದ್ವಿತೀಯ: ಪುನೀತ್ ಕುಮಾರ್ (18:31), ತೃತೀಯ: ನಾಗರಾಜ್ (19:15), ಮಹಿಳೆಯರ ವಿಭಾಗದಲ್ಲಿ ಪ್ರಥಮ: ನಾಗಿಣಿ (23:03), ದ್ವಿತೀಯ: ರೇಖ (12:03), ತೃತೀಯ: ರಿತುಶ್ರೀ (26:00)
As part of Mangaluru Dasara-2025 celebrations, the third edition of the state-level marathon was held at Kudroli Shri Gokarnanatheshwara Temple premises. Organized by Joois Fitness Club and Union Bank, the event drew over 2,000 participants from Karnataka and Kerala across 21 km, 10 km, 5 km and 2 km categories. Separate races were held for men and women, with winners awarded cash prizes up to ₹25,000. City Police Commissioner Sudheer Kumar Reddy flagged off the marathon in the presence of dignitaries.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am