ಬ್ರೇಕಿಂಗ್ ನ್ಯೂಸ್
07-09-25 10:59 pm Mangalore Correspondent ಕರಾವಳಿ
ಮಂಗಳೂರು, ಸೆ.7 : ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶನಿವಾರ ಸ್ಥಳ ಮಹಜರು ನಡೆಸಿದಾಗ ಮತ್ತೆರಡು ಮಾನವ ತಲೆಬುರುಡೆಗಳು ಪತ್ತೆಯಾಗುವೆ ಎಂದು ಹೇಳಾಗುತ್ತಿದ್ದು ಎಸ್ಐಟಿ ತಂಡದ ತನಿಖೆಗೆ ಹೊಸ ಆಯಾಮ ಸಿಕ್ಕಿದೆ.
ಶನಿವಾರ ಎಸ್ಐಟಿ ಅಧಿಕಾರಿಗಳು ಸೌಜನ್ಯಾ ಮಾವ ವಿಟಲ ಗೌಡರನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ, ಅದೇ ಸ್ಥಳದಲ್ಲಿ ಮತ್ತೆರಡು ಮಾನವ ಬುರುಡೆ ಮತ್ತು ಎಲುಬುಗಳು ಪತ್ತೆಯಾಗಿವೆ. ಈ ಜಾಗದಲ್ಲಿ ಹಿಂದೆ ಚಿನ್ನಯ್ಯ ಜಾಗ ತೋರಿಸಿದ ಸಂದರ್ಭದಲ್ಲಿ ಸ್ಥಳ ಶೋಧ ನಡೆಸಲಾಗಿತ್ತು.ಆದರೆ ಆಗ ಕಾಣಿಸಿರದ ತಲೆಬುರುಡೆ ಈಗ ಕಂಡಿರುವುದು ಅಚ್ಚರಿ ಸೃಷ್ಟಿಸಿದೆ. ಚಿನ್ನಯ್ಯ ಉದ್ದೇಶಪೂರ್ವಕ ಈ ಜಾಗವನ್ನು ತೋರಿಸಿರಲಿಲ್ಲವೇ ಎಂಬ ಶಂಕೆ ಮೂಡಿದೆ.

ನೂರಾರು ಶವಗಳನ್ನು ಹೂತ ಬಗ್ಗೆ ಚಿನ್ನಯ್ಯನ ಹೇಳಿಕೆ ಆಧರಿಸಿ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಸಂದರ್ಭದಲ್ಲಿ ಚಿನ್ನಯ್ಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶವ ಹೂತಿರುವ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಗೆ ಹೇಳಿದ್ದ ಎನ್ನಲಾಗಿದೆ. ಇದೇ ಮಾಹಿತಿ ಆಧರಿಸಿ ವಿಠಲ ಗೌಡರನ್ನು ಸ್ಥಳಕ್ಕೆ ಕಳಿಸಿ ತಲೆಬುರುಡೆ ತರುವಂತೆ ಮಾಡಲಾಗಿತ್ತು ಎನ್ನುವ ಮಾಹಿತಿ ಇದೆ. ಇದೇ ವೇಳೆ ವಿಡಿಯೋ ವನ್ನೂ ಮಾಡಿದ್ದರಂತೆ. ಚಿನ್ನಯ್ಯ ಆರೋಪಿಯಾಗಿ ಬದಲಾದ ನಂತರ ಎಸ್ಐಟಿ ತನಿಖೆ ತಲೆಬುರುಡೆಯತ್ತ ತಿರುಗಿತ್ತು. ಈ ವೇಳೆ ತನಗೇನೂ ಗೊತ್ತಿಲ್ಲ ಎಂದು ಚಿನ್ನಯ್ಯ ಹೇಳಿದ್ದ. ಆನಂತರ, ಜಯಂತ್ ಮಾತಿನಂತೆ ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡರನ್ನು ಕರೆಸಿ ವಿಚಾರಣೆ ಮಾಡಿದ್ದರು.
ವಿಠಲ ಗೌಡ ತಲೆಬುರುಡೆ ತಂದಿರುವ ವಿಷಯ ತಿಳಿಸಿದ್ದು ಈಗ ಮತ್ತೆ ಅದೇ ಜಾಗದಲ್ಲಿ ಸ್ಥಳ ಶೋಧ ನಡೆಸಲಾಗಿದೆ. ಈಗ ಮತ್ತೆರಡು ಬುರುಡೆ ಪತ್ತೆಯಾಗಿದೆ ಎಂಬ ಸುದ್ದಿ ಹರಡಿದ್ದು ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಕಾಡಿಗೆ ಪೊಲೀಸರ ಭದ್ರತೆ ಏರ್ಪಡಿಸಿದ್ದಾರೆ.
The Special Investigation Team (SIT) probing the Dharmasthala case has tightened security around the Banglegudde forest after suspicions arose that two more human skulls and bones were found during a spot inspection on Saturday. The development has added a new dimension to the ongoing investigation.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm