ಬ್ರೇಕಿಂಗ್ ನ್ಯೂಸ್
06-09-25 10:15 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.6 : ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಮೂಲದ ಬಗ್ಗೆ ಎಸ್ಐಟಿ ತನಿಖೆ ತೀವ್ರಗೊಳಿಸಿದ್ದು ಅದನ್ನು ಬಂಗ್ಲೆಗುಡ್ಡೆ ಕಾಡಿನಿಂದಲೇ ತರಲಾಗಿತ್ತು ಎನ್ನುವ ಬಲವಾದ ಅನುಮಾನ ಮೂಡಿದೆ. ದಿಢೀರ್ ಬೆಳವಣಿಗೆಯಲ್ಲಿ ದೂರುದಾರ ಚಿನ್ನಯ್ಯ ಪೊಲೀಸರಿಗೆ ನೀಡಿದ್ದ ಬುರುಡೆಯನ್ನು ಬಂಗ್ಲೆಗುಡ್ಡೆ ಕಾಡಿನಿಂದಲೇ ತರಲಾಗಿತ್ತು ಎನ್ನುವ ಮಾಹಿತಿ ಆಧರಿಸಿ ಎಸ್ಐಟಿ ಅಧಿಕಾರಿಗಳು ಇದೀಗ ಸೌಜನ್ಯಾ ಮಾವ ವಿಠಲ ಗೌಡರನ್ನು ಆ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಇದಕ್ಕೂ ಮುನ್ನ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್ ತಂದುಕೊಟ್ಟಿದ್ದಾಗಿ ಸಾಮಾಜಿಕ ಹೋರಾಟಗಾರ ಜಯಂತ್ ಹೇಳಿಕೆ ನೀಡಿದ್ದರು. ಇದರಂತೆ ಗಿರೀಶ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದು ಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇದರ ಬೆನ್ನಲ್ಲೇ ಸೌಜನ್ಯಾ ಮಾವ ವಿಠಲ ಗೌಡ ಅವರನ್ನು ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆದಿರುವುದರಿಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆಯೇ ಎಂಬ ಅನುಮಾನವೂ ಇದೆ.
ಮಾಹಿತಿ ಪ್ರಕಾರ, ತಲೆಬುರುಡೆ ಸಂಗ್ರಹ ಸಂದರ್ಭದಲ್ಲಿ ಚಿನ್ನಯ್ಯನ ಜೊತೆ ಬಂಗ್ಲೆಗುಡ್ಡ ಕಾಡಿಗೆ ವಿಠಲ ಗೌಡ ಅವರೂ ತೆರಳಿದ್ದರು ಎನ್ನಲಾಗುತ್ತಿದೆ. ವಿಚಾರಣೆ ವೇಳೆ, ಚಿನ್ನಯ್ಯನ ಜೊತೆ ಕಾಡಿಗೆ ತೆರಳಿದ್ದು ಹೌದು. ಬುರುಡೆ ತೆಗೆದಿದ್ದು ಮಾತ್ರ ಚಿನ್ನಯ್ಯನೇ ಎಂದು ವಿಠಲಗೌಡ ಪೊಲೀಸರಿಗೆ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ವಿಠಲ ಗೌಡರನ್ನು ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದ ವಿಚಾರ ಧರ್ಮಸ್ಥಳ ಭಾಗದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದ್ದು ಚಿನ್ನಯ್ಯ ಬಳಿಕ ಬುರುಡೆ ಪ್ರಕರಣದಲ್ಲಿ ವಿಠಲ ಗೌಡರನ್ನು ಅರೆಸ್ಟ್ ಮಾಡುತ್ತಾರಾ ಎಂಬ ಶಂಕೆ ಮೂಡಿದೆ.
ಇದೇ ವೇಳೆ, ಆರೋಪಿ ಚಿನ್ನಯ್ಯನ 14 ದಿನಗಳ ಕಸ್ಟಡಿ ಅವಧಿ ಮುಗಿದಿದ್ದು ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆತನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿದೆ ಎಂಬ ಮಾಹಿತಿ ಇದೆ.
In a major development in the Dharmasthala case, the Special Investigation Team (SIT) has intensified its probe into the origin of the human skull submitted as evidence. Investigators now strongly suspect that the skull was brought from Banglegudde forest. On this basis, SIT officials took Vittal Gowda, uncle of victim Soujanya, to the forest location for questioning. Earlier, complainant Chinnayya had handed over the skull to the police. Sources suggest that Vittal Gowda may have accompanied Chinnayya when the skull was collected from the forest.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
10-07-26 05:25 pm
HK News Staffer
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
10-07-26 05:29 pm
HK News Staffer
ರೆಡ್ ಅಲರ್ಟ್; ರಜೆ ಆದೇಶ ಪಾಲಿಸದ ಹತ್ತಕ್ಕೂ ಹೆಚ್ಚು...
10-07-26 03:25 pm
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾ...
10-07-26 02:22 pm
ಟೀಚರ್ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು ; ಈ ಅವಮಾನ...
09-07-26 09:11 pm
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm