ಬ್ರೇಕಿಂಗ್ ನ್ಯೂಸ್
04-09-25 11:07 pm Mangalore Correspondent ಕರಾವಳಿ
ಮಂಗಳೂರು, ಸೆ.4 : ಸೌಜನ್ಯಾ ಕೊಲೆ ಪ್ರಕರಣವನ್ನು ಆರ್.ಅಶೋಕ್ ಗೃಹ ಸಚಿವರಾಗಿದ್ದಾಗಲೇ ಮುಚ್ಚಿ ಹಾಕಿದ್ದು. ಇಡೀ ಪ್ರಕರಣವನ್ನು ಇಲಾಖೆ ಮೂಲಕ ಒತ್ತಡ ಹೇರಿ ಹಳ್ಳ ಹಿಡಿಸಿದ್ದೇ ಅಶೋಕ್. ಹೀಗಾಗಿ ಈಗ ಧರ್ಮಸ್ಥಳ ಪ್ರಕರಣದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸೌಜನ್ಯಾ ಪ್ರಕರಣ ಮರು ತನಿಖೆಯಾದರೆ ಎಲ್ಲಿ ತನ್ನ ಬುಡಕ್ಕೆ ಬರುತ್ತಾ ಎಂಬ ಭಯದಲ್ಲಿ ಏನೇನೋ ಬಡಬಡಿಸುತ್ತಿದ್ದಾರೆ ಎಂದು ಸೌಜನ್ಯಾ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಕಿಡಿಕಾರಿದ್ದಾರೆ.
ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಗಿರೀಶ್, ಸೌಜನ್ಯಾ ತಾಯಿ ಭೇಟಿಗೆ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿರುವ ರಾಜಕಾರಣಿ ಬಂದಿದ್ದಾರೆ. ಇದಕ್ಕಾಗಿ ವಿಜಯೇಂದ್ರ ಅವರನ್ನು ಅಭಿನಂದಿಸುತ್ತೇನೆ. ಯಡಿಯೂರಪ್ಪ ಗರಡಿಯಲ್ಲಿ ಬೆಳೆದವರು ವಿಜಯೇಂದ್ರ. ನಾನು ಕೂಡ ಯಡಿಯೂರಪ್ಪ ಗರಡಿಯಲ್ಲೇ ಬೆಳೆದವನು. 2006-08ರಲ್ಲಿ ರಾಜ್ಯ ಯುವಮೋರ್ಚಾ ಕಾರ್ಯದರ್ಶಿ, ಅಧ್ಯಕ್ಷನಾಗಿದ್ದೆ. ಯಡಿಯೂರಪ್ಪ ಅವರೇ ನನ್ನನ್ನು ನೇಮಕ ಮಾಡಿದ್ದರು. ಆದರೆ ಸೌಜನ್ಯಾ ಪ್ರಕರಣ ನಡೆದಾಗ ಅಶೋಕ್ ಗೃಹ ಸಚಿವರಾಗಿದ್ದರು. ತಾನೇ ಒತ್ತಡ ಹೇರಿ ಸೌಜನ್ಯಾ ಪ್ರಕರಣವನ್ನು ಮುಚ್ಚಿ ಹಾಕಿದ್ದರು. 2013ರ ಚುನಾವಣೆ ವರೆಗೂ ನಾನು ಬಿಜೆಪಿಯಲ್ಲೇ ಇದ್ದೆ. ವಿಜಯೇಂದ್ರ ಎಂಥವರು ಅಂತ ನನಗೆ ಗೊತ್ತು. ಮಧ್ಯರಾತ್ರಿ ಕರೆ ಮಾಡಿದರೂ ರಿಸೀವ್ ಮಾಡಿ ಕಾರ್ಯಕರ್ತರಿಗೆ ಸ್ಪಂದಿಸುವ ದೊಡ್ಡ ಗುಣ ವಿಜಯೇಂದ್ರ ಅವರಿಗಿದೆ. ಆದರೆ ಈಗ ದೇವಸ್ಥಾನ ವಿರುದ್ಧ ಷಡ್ಯಂತ್ರ ಎಂದು ಚಲೋ ಮಾಡಲು ಬರುವಾಗ ನನಗೆ ಒಂದು ಕರೆ ಮಾಡಿ ಕೇಳುತ್ತಿದ್ದರೆ ನಾನೇ ಬಂದು ವರದಿ ಒಪ್ಪಿಸುತ್ತಿದ್ದೆ.
ಆದರೆ ಈ ಅಶೋಕ್ ಯಾವ ರೀತಿಯ ಮನುಷ್ಯ ಅಂದ್ರೆ ಪಡಿತರ ಅಂಗಡಿಗಳಲ್ಲಿ ತಿಂದು ತಿಂದು ಕೊಬ್ಬಿದ ಹೆಗ್ಗಣದಂತೆ. ತಿಂದು ತೇಗಿ ಕೊಬ್ಬಿದ್ದಾರೆ. ಅವರಿಗೆ ಜನಸಾಮಾನ್ಯರ ನೋವು ಅರ್ಥ ಆಗಲ್ಲ.
ಸೌಜನ್ಯಾಳ ಶವವನ್ನೂ ಯಾರಿಗೂ ಸಿಗದಂತೆ ಹೂತು ಹಾಕುತ್ತಿದ್ದರು. ಅಂದು ಸಂಜೆ ನಾಪತ್ತೆ ವಿಚಾರ ತಿಳಿಯುತ್ತಲೇ ಐದು ಸಾವಿರದಷ್ಟು ಜನರು ಧರ್ಮಸ್ಥಳದಲ್ಲಿ ಸೇರಿದ್ದರು. ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಆಕೆಯ ಹೆಣವನ್ನು ಮರುದಿನ ನಸುಕಿನಲ್ಲಿ ತಂದು ಹಾಕಲಾಗಿತ್ತು. ಜನ ಸೇರದೇ ಇರುತ್ತಿದ್ದರೆ ಇದೇ ಚಿನ್ನಯ್ಯ ಮಣ್ಣಸಂಕದ ಕಾಡಿನಲ್ಲಿ ಹೂತು ಹಾಕುತ್ತಿದ್ದ. ಅದೇ ಜಾಗದಲ್ಲಿ ನಾಲ್ಕೈದು ಹೆಣಗಳನ್ನು ಹೂತು ಹಾಕಿದ್ದಾಗಿ ಚಿನ್ನಯ್ಯ ಹೇಳಿದ್ದಾನೆ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ಮಾಡಲಿ, ಸತ್ಯ ಹೊರ ಬರುತ್ತದೆ ಎಂದು ಗಿರೀಶ್ ಮಟ್ಟಣ್ಣನವರ್ ವಿಡಿಯೋದಲ್ಲಿ ಹೇಳಿದ್ದಾರೆ.
Activist Girish Mattannanavar, who has been campaigning for justice in the Sowjanya murder case, has launched a scathing attack on former Home Minister R. Ashoka, alleging that he was directly responsible for suppressing the case when he held the Home portfolio.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am