ಬ್ರೇಕಿಂಗ್ ನ್ಯೂಸ್
03-09-25 10:52 pm Mangalore Correspondent ಕರಾವಳಿ
ಮಂಗಳೂರು, ಸೆ.3 : 43 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕಳೆದ ಒಂದು ವರ್ಷದಿಂದ ಅತಿಯಾದ ಋತುಸ್ರಾವ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ನೋವಿನ ಲಕ್ಷಣಗಳನ್ನು ಹೊಂದಿದ್ದರು. ತಪಾಸಣೆಯ ವೇಳೆ ಆಕೆಗೆ ಎಂಡೊಮೆಟ್ರಿಯೋಸಿಸ್ ಸೋಂಕು ಇರುವುದು ಪತ್ತೆಯಾಗಿತ್ತು. ಇದಕ್ಕಾಗಿ ಹಲವು ಆಸ್ಪತ್ರೆಗಳನ್ನು ಸಂದರ್ಶಿಸಿದ್ದರೂ ಗುಣ ಕಂಡಿರಲಿಲ್ಲ. ಒಂದು ವಾರದಿಂದ ಹೊಟ್ಟೆಯ ಭಾಗದಲ್ಲಿ ತೀವ್ರ ನೋವು, ಜ್ವರದಿಂದ ಬಳಲಿ ಅತ್ತಾವರದ ಕೆಎಂಸಿ ಆಸತ್ರೆಗೆ ಬಂದಿದ್ದರು.
ಸ್ಕ್ಯಾನಿಂಗ್ ಮತ್ತು ಎಂಆರ್ ಐ ಪರೀಕ್ಷೆ ನಡೆಸಿದಾಗ ಅಂಡಾಶಯದಲ್ಲಿ ಬೈಲ್ಯಾಟರಲ್ ಎಂಡೋಮೆಟ್ರಿಯೋಟಿಕ್ ಗಂಟುಗಳು ಇರುವುದು ಹಾಗೂ ಅಕ್ಯೂಟ್ ಪೆಲ್ವಿಕ್ ಇನ್ಫ್ಲಮೇಟರಿ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿದ್ದವು. ಆಕೆಗೆ ಇಂಟಾವೇನಸ್ ಆ್ಯಂಟಿಬಯಾಟಿಕ್ ಔಷಧ ನೀಡಿ ಒಂದು ವಾರ ನಿಗಾ ಇರಿಸಲಾಯಿತು. ಆದರೆ ಜ್ವರ ಮತ್ತು ನೋವು ಕಡಿಮೆಯಾಗದಿದ್ದರಿಂದ ಪ್ರಸೂತಿ ವಿಭಾಗದ ತಜ್ಞರು ಶಸ್ತ್ರಚಿಕಿತ್ಸೆ ಅಗತ್ಯವೆಂದು ನಿರ್ಧರಿಸಿದರು. ಹಿರಿಯ ಪ್ರಸೂತಿ ತಜ್ಞೆ ಡಾ| ನೀನಾ ಮಹಾಲೆ ಮತ್ತು ಹಿರಿಯ ಜನರಲ್ ಸರ್ಜನ್ ಡಾ| ಪೂರ್ಣಚಂದ್ರ ತೇಜಸ್ವಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು ಹೊಟ್ಟೆಯ ಭಾಗದಲ್ಲಿ ಕೀವು ತುಂಬಿರುವುದು, ಪೆಲ್ವಿಕ್ ಭಾಗದಲ್ಲಿ ಬಾವು ಹಾಗೂ ಗರ್ಭಕೋಶ, ಎರಡೂ ಫಾಲೋಪಿಯನ್ ನಾಳಗಳು ಮತ್ತು ಅಂಡಾಶಯಗಳು ಹೊಟ್ಟೆಗೆ ಅಂಟಿಕೊಂಡಿರುವುದು ತಿಳಿದುಬಂತು. ಇದು ಬಹಳ ಸಂಕೀರ್ಣ ಪ್ರಕರಣವಾಗಿದ್ದು, ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು.
ಪೆಲ್ವಿಸ್ ಭಾಗದ ಅಂಗಾಂಗಗಳು ರೋಗಪೀಡಿತವಾಗಿ ಪರಸ್ಪರ ಅಂಟಿಕೊಂಡಿದ್ದರೂ ಅವುಗಳನ್ನು ಯಶಸ್ವಿಯಾಗಿ ಬೇರ್ಪಡಿಸುವಲ್ಲಿ ಶಸ್ತ್ರಚಿಕಿತ್ಸಾ ತಜ್ಞರ ತಂಡ ಯಶಸ್ವಿಯಾಯಿತು. ಪೋಸ್ಟ್ ಆಪರೇಟಿವ್ ವಾರ್ಡ್ ನಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದ ಘಟಕ ಮುಖ್ಯಸ್ಥ ಡಾ.ಅಪರ್ಣಾ ಭಟ್, ಡಾ.ನೀನಾ ಮಹಾಲೆ ಮತ್ತು ಡಾ.ಸೌದಾ ಅವರ ನೇತೃತ್ವದಲ್ಲಿ ನಿಕಟ ನಿಗಾದಡಿ ಚಿಕಿತ್ಸೆ ನೀಡಲಾಯಿತು. ರೋಗಿ ಬಳಿಕ ಉತ್ತಮವಾಗಿ ಚೇತರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ತಂಡ ಪ್ರಯತ್ನ, ವೈದ್ಯಕೀಯ ನೈಪುಣ್ಯ ಮತ್ತು ಶಸ್ತ್ರಚಿಕಿತ್ಸೆ ಕೌಶಲಗಳು ಇಂತಹ ಕ್ಲಿಷ್ಟಕರ ಪ್ರಕರಣಗಳನ್ನು ನಿಭಾಯಿಸುವಲ್ಲಿ ಬಹಳ ನಿರ್ಣಾಯಕ ಎಂಬುದನ್ನು ಅತ್ತಾವರ ಕೆಎಂಸಿಯಲ್ಲಿ ನಡೆಸಲಾಗಿರುವ ಈ ಚಿಕಿತ್ಸೆ ಸಾಬೀತುಪಡಿಸಿದೆ.
A 43-year-old woman suffering from a rare gynecological condition has successfully undergone a complex surgery at KMC Hospital, Attavar. The patient had been experiencing heavy menstrual bleeding and severe abdominal pain for nearly a year. Medical investigations revealed that she was suffering from endometriosis.
05-04-26 07:24 pm
HK News Staffer
ಟೋಲ್ ಬೂತ್ಗಳಲ್ಲಿ ಇನ್ಮುಂದೆ ಸಂಚಾರ ಸರಾಗ ; ದೇಶಾದ್...
04-04-26 07:33 pm
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
05-04-26 12:37 pm
HK News Staffer
ಇರಾನ್ ಗೆ ಅಮೆರಿಕ ಮತ್ತೆ 48 ಗಂಟೆಗಳ ಗಡುವು ; ಒಂದು...
04-04-26 10:53 pm
ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಪಟ್ಟಿ ಬಿಡುಗಡೆ; ತಮಿಳ...
03-04-26 07:52 pm
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
05-04-26 11:03 am
HK News Staffer
ನಾಸಿಕ್ ಭೀಕರ ದುರಂತ; ನಿಯಂತ್ರಣ ತಪ್ಪಿ ಬಾವಿಗೆ ಬಿದ್...
04-04-26 05:42 pm
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am