ಬ್ರೇಕಿಂಗ್ ನ್ಯೂಸ್
17-08-25 04:13 pm Mangalore Correspondent ಕರಾವಳಿ
ಮಂಗಳೂರು, ಆ.16 : ತಲಪಾಡಿ ಟೋಲ್ ಗೇಟ್ ನಲ್ಲಿ ಟೋಲ್ ತಪ್ಪಿಸಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ. ಎದುರಿನ ಕಾರು ಸಾಗಿದ ಬೆನ್ನಲ್ಲೇ ಹಿಂದಿನಿಂದ ಕಾರನ್ನು ಚಲಾಯಿಸಲು ಯತ್ನಿಸಿ ಡಿಕ್ಕಿಯಾಗಿದ್ದು ಇದರ ನೆಪದಲ್ಲಿ ಕಾರಿನಲ್ಲಿದ್ದ ಎರಡು ಕುಟುಂಬಗಳ ಮಧ್ಯೆ ವಾಗ್ವಾದ, ಗಲಾಟೆ ನಡೆದಿದೆ. ಘಟನೆಯನ್ನು ಹಿಂದು - ಮುಸ್ಲಿಂ ಕುಟುಂಬಗಳು ಪ್ರತಿಷ್ಠೆಯಾಗಿ ತೆಗೆದುಕೊಂಡು ಈಗ ಪೊಲೀಸರ ಕಠಿಣ ಕ್ರಮ ಎದುರಿಸುವಂತಾಗಿದೆ.
ಮುಸ್ಲಿಂ ಮಹಿಳೆ ಮತ್ತು ಆಕೆಯ ಮಗುವನ್ನು ಹೊಂದಿದ್ದ ಮಾರುತಿ 800 ಕಾರನ್ನು 19 ವರ್ಷದ ಹುಡುಗ ಡ್ರೈವಿಂಗ್ ಮಾಡುತ್ತಿದ್ದ. ಈ ಕಾರು ತಲಪಾಡಿ ಟೋಲ್ ಗೇಟ್ ಪಾಸ್ ಆಗುತ್ತಿದ್ದಂತೆ ಟೋಲ್ ತಪ್ಪಿಸುವ ಯತ್ನವಾಗಿ, ಹಿಂದಿದ್ದ ಸ್ವಿಫ್ಟ್ ಕಾರನ್ನು ಅದರ ಚಾಲಕ ಹಠಾತ್ ಮುಂದೆ ಚಲಾಯಿಸಿದ್ದಾನೆ. ಈ ವೇಳೆ, ಎದುರಿನ ಕಾರಿಗೆ ತಾಗಿದೆ ಎನ್ನಲಾಗುತ್ತಿದ್ದು ಮಾರುತಿ 800 ಕಾರಿನವರು ಮತ್ತು ಟೋಲ್ ಸಿಬಂದಿ ಸ್ವಿಫ್ಟ್ ಕಾರಿನಲ್ಲಿದ್ದವರನ್ನು ತರಾಟೆಗೆತ್ತಿಕೊಂಡಿದ್ದಾರೆ. ಈ ವೇಳೆ ಸ್ವಿಫ್ಟ್ ಕಾರಿನಲ್ಲಿದ್ದವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು ಮಾರುತಿ 800 ಕಾರಿನವರು ಬೆನ್ನಟ್ಟಿ ಅಡ್ಡ ಹಾಕಿದ್ದಾರೆ. ಅಲ್ಲಿ ಎರಡು ಕಡೆಯವರ ಮಧ್ಯೆ ಗಲಾಟೆಯಾಗಿದ್ದು ಪರಸ್ಪರ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಬಳಿಕ ಇವರ ಜಗಳವನ್ನು ಬಿಡಿಸಿ ಪೊಲೀಸರನ್ನು ಕರೆಸಿದ್ದಾರೆ. ಸ್ವಿಫ್ಟ್ ಕಾರಿನಲ್ಲಿದ್ದವರು ಮೂವರು ಹಿಂದು ಯುವಕರಾಗಿದ್ದು ತಮ್ಮ ಕಾರು ಡಿಕ್ಕಿಯಾಗಿಲ್ಲ. ಎದುರಿನಲ್ಲಿದ್ದ ಮಾರುತಿ ಕಾರಿನವರೇ ತಗಾದೆ ಎಬ್ಬಿಸಿದ್ದಾರೆ ಎಂದು ವಾದಿಸಿದ್ದಾರೆ.
ಶನಿವಾರ ಸಂಜೆ ಈ ಘಟನೆಯಾಗಿದ್ದು ಇದರ ನೆಪದಲ್ಲಿ ತಲಪಾಡಿ ಬಳಿಯಲ್ಲಿ ಕೆಲ ಹೊತ್ತು ವಾಗ್ವಾದ, ತಳ್ಳಾಟ ಆಗಿತ್ತು. ಬಳಿಕ ಉಳ್ಳಾಲ ಪೊಲೀಸರು ಎರಡೂ ಕಡೆಯವರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ರಾತ್ರಿ ವರೆಗೂ ಪೊಲೀಸರ ಮುಂದೆಯೂ ಇವರ ವಾಗ್ವಾದ ನಿಲ್ಲಲಿಲ್ಲ. ಪ್ರತಿಷ್ಠೆಗೆ ಬಿದ್ದು ದೂರು ನೀಡಿದ್ದು ಎರಡು ಕಡೆಯಿಂದಲು ಕೊಲೆ ಯತ್ನ ಕೇಸು ದಾಖಲಾಗಿದೆ. ಹಲ್ಲೆಯಾದ ಬಗ್ಗೆ ಎರಡು ಕಡೆಯವರೂ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಹಿಂದಿನ ಕಾರು ಡಿಕ್ಕಿಯಾದ ಬಗ್ಗೆ ಮಾರುತಿ 800 ಕಾರಿನಲ್ಲಿ ಯಾವುದೇ ಗುರುತು ಕಂಡುಬಂದಿಲ್ಲ. ಹೀಗಾಗಿ ನಾವು ಡಿಕ್ಕಿ ಹೊಡೆದಿಲ್ಲ. ಸುಮ್ಮನೆ ನಮ್ಮನ್ನು ಅಡ್ಡ ಹಾಕಿದ್ದರು ಎಂದು ಸ್ವಿಫ್ಟ್ ಕಾರಿನಲ್ಲಿದ್ದವರು ವಾದಿಸಿದ್ದಾರೆ. ಪೊಲೀಸರ ಮುಂದೆಯೂ ಎರಡು ಕಡೆಯವರು ವಾಗ್ವಾದ ನಡೆಸಿದ್ದರು.
ಆದರೆ ಈ ಘಟನೆ ನೆಪದಲ್ಲಿ ಯೂಟ್ಯೂಬ್ ಮಾಧ್ಯಮದಲ್ಲಿ ಮುಸ್ಲಿಂ ಕುಟುಂಬಕ್ಕೆ ಹಲ್ಲೆಯಾಗಿದೆ ಎಂದು ತಪ್ಪಾಗಿ ಸುದ್ದಿ ಪ್ರಸಾರ ಮಾಡಿದ್ದು ಹಿಂದು -ಮುಸ್ಲಿಂ ಕಾರಣಕ್ಕೆ ಹಲ್ಲೆ ಘಟನೆಯೆಂದು ಬಿಂಬಿಸುವ ಯತ್ನ ನಡೆದಿತ್ತು. ಈ ಸುದ್ದಿ ವೈರಲ್ ಆಗುತ್ತಲೇ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚತ್ತಿದ್ದು ತಪ್ಪು ಸುದ್ದಿ ಬಿತ್ತರಿಸಿ ಜನರನ್ನು ಉದ್ರೇಕಿಸಿದರೆ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ, ಯಾರು ಕೂಡ ಘಟನೆ ಬಗ್ಗೆ ತಿಳಿಯದೆ ತಮಗೆ ತೋಚಿದಂತೆ ಸುದ್ದಿ ಮಾಡಬಾರದು. ಖಚಿತ ಮಾಹಿತಿ ಇಲ್ಲದೆ ತಮಗೆ ಬೇಕಾದ ರೀತಿ ಸುದ್ದಿ ಮಾಡುವುದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ತಪ್ಪು ಸಂದೇಶ ಹರಡುವ ರೀತಿ ಸುದ್ದಿ ಪ್ರಸಾರ ಮಾಡಿದ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಇದಲ್ಲದೆ, ಕ್ಷುಲ್ಲಕ ನೆಪದಲ್ಲಿ ಹಿಂದು - ಮುಸ್ಲಿಂ ಎನ್ನುವ ಕಾರಣಕ್ಕೆ ಪೊಲೀಸರ ಮುಂದೆ ವಾಗ್ವಾದ ನಡೆಸಿ ಇದನ್ನು ಮುಂದುವರಿಸಿದರೆ ಎರಡು ಕಡೆಯವರ ವಿರುದ್ಧವೂ ಸುಮೊಟೊ ಕೇಸು ದಾಖಲಿಸಿ ಬಂಧನ ಕ್ರಮ ಜರುಗಿಸುವುದಾಗಿ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
A minor traffic scuffle at the Talapady Toll Plaza on Saturday evening escalated into a communal flashpoint after a toll evasion attempt led to a clash between two families, one Hindu and one Muslim. The incident quickly went viral after some YouTube channels falsely portrayed it as a communal assault.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 03:02 pm
HK News Desk
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm