ಬ್ರೇಕಿಂಗ್ ನ್ಯೂಸ್
14-08-25 10:29 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.14 : ಧರ್ಮಸ್ಥಳದಲ್ಲಿ ಶವ ಶೋಧ ಕಾರ್ಯಾಚರಣೆ 15ನೇ ದಿನವೂ ಮುಂದುವರಿದಿದ್ದು ನೇತ್ರಾವತಿ ಸ್ನಾನಘಟ್ಟ, ಬಂಗ್ಲೆಗುಡ್ಡೆ, ಕಲ್ಲೇರಿ ಕಾಡಿನ ಬಳಿಕ ದ್ವಾರಕಾಶ್ರಮದ ಬಳಿ ಶೋಧ ಕಾರ್ಯ ನಡೆಸಲಾಗಿದೆ. ಇಲ್ಲಿ 17ನೇ ಪಾಯಿಂಟ್ ಗುರುತಿಸಿ ಶೋಧಕ್ಕಾಗಿ ಅಗೆದಿದ್ದು ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.
13ನೇ ಸ್ಥಳದಲ್ಲಿ ಹಲವು ಹೆಣ ಹೂತಿದ್ದಾಗಿ ದೂರುದಾರ ಹೇಳಿದ್ದ. ಹೀಗಾಗಿ ಎರಡು ದಿನ ಕಾರ್ಯಾಚರಣೆ ನಡೆಸಿದ್ದು ಅಲ್ಲಿ ಶೋಧ ನಡೆಸಿದರೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಅಲ್ಲಿ ಎರಡು ದಿನಗಳ ಕಾಲ 18 ಅಡಿ ಆಳಕ್ಕೆ, ಮತ್ತೊಂದು ಕಡೆ 13 ಅಡಿ ಅಗಲಕ್ಕೆ ಅಗೆಯಲಾದರೂ, ಕುರುಹು ಪತ್ತೆಯಾಗಿಲ್ಲ. ಈ ನಡುವೆ ಇಬ್ಬರು ಸಾಕ್ಷಿದಾರರು ಮುಂದೆ ಬಂದಿದ್ದು, 13ನೇ ಜಾಗದಲ್ಲಿ ಶವ ಹೂತಿದ್ದನ್ನು ನಾವೂ ನೋಡಿದ್ದೇವೆ ಎಂದು ಸ್ಥಳೀಯರಾದ ತುಕಾರಾಮ ಗೌಡ ಹಾಗೂ ಪುರಂದರ ಗೌಡ ಹೇಳಿದ್ದಾರೆ.
ಎಸ್ ಐಟಿಗೆ ದೂರು ಕೊಡಲಾಗಿದೆ. ಅವರು ತನಿಖೆ ನಡೆಸಿದ್ರೆ ನಾವು ಎಲ್ಲಾ ಸಾಕ್ಷಿ ಹೇಳಲು ಸಿದ್ಧ ಎಂದು ಈ ಇಬ್ಬರು ತಿಳಿಸಿದ್ದಾರೆ. ನೇತ್ರಾವತಿ ನದಿ ತಡದಲ್ಲಿ ಶವ ಹೂತಿರುವ ಪ್ರಕರಣದಲ್ಲಿ ಒಬ್ಬ ಅಧಿಕಾರಿಯ ಪಾತ್ರವೂ ಇದೆ, ಅದನ್ನು ಎಸ್ ಐಟಿ ಬಳಿ ಹೇಳುತ್ತೇವೆ. ಅಂಬಾಸಿಡರ್ ಕಾರಿನ ಡಿಕ್ಕಿಯಿಂದ ಹೆಣ ತೆಗೆದು ಸಂಜೆ 4-5 ಗಂಟೆಯ ವೇಳೆಗೆ ಕದ್ದು ಮುಚ್ಚಿ ಹೆಣ ಹೂತಿದ್ದನ್ನು ನಾನು ನೋಡಿದ್ದೇನೆ ಎಂದು ಪುರಂದರ ಗೌಡ ಹೇಳಿದ್ದಾರೆ.
ಇದರ ಬಗ್ಗೆ ಭಯದಿಂದ ಇಲ್ಲಿಯವರೆಗೂ ಹೇಳಿರಲಿಲ್ಲ. ಈಗ ಎಸ್ ಐಟಿ ರಚನೆ ಮಾಡಿರುವುದರಿಂದ ಧೈರ್ಯದಿಂದ ಹೇಳಿದ್ದೇವೆ ಎಂದು ಹೇಳಿದ್ದಾರೆ. ಈಗ ಹೆಣದ ಕುರುಹು ಸಿಗದಿರಲು ಆ ಜಾಗ ಅಭಿವೃದ್ಧಿಯಾಗಿರುವುದೇ ಕಾರಣ ಎಂದು ಪುರಂದರಗೌಡ ಹೇಳಿದ್ದಾರೆ. ಭಾರಿ ಮಳೆ ಬಂದು ಪ್ರವಾಹ ಆದ ಕಾರಣ, ಅಣೆಕಟ್ಟು ಕೆಲಸದ ಕಾರಣದಿಂದಾಗಿಯೂ ಆ ಜಾಗದ ವ್ಯತ್ಯಾಸ ಆಗಿದೆ ಎಂದು ಪುರಂದರ ಗೌಡ ಹೇಳಿದ್ದಾರೆ.
The search operation for alleged buried bodies in Dharmasthala entered its 15th day, with Special Investigation Team (SIT) officials shifting their focus to the area near Dwarkashrama after earlier digs at Netravati bathing ghat, Banglegudde, and Kalleri forest yielded no results.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
26-08-26 12:47 pm
HK News Staffer
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm