ಬ್ರೇಕಿಂಗ್ ನ್ಯೂಸ್
12-08-25 11:06 pm Mangalore Correspondent ಕರಾವಳಿ
ಮಂಗಳೂರು, ಆ.12 : ಧರ್ಮಸ್ಥಳ ಬಳಿ ನೂರಾರು ಹೆಣಗಳನ್ನು ಹೂತ ಆರೋಪದ ಪ್ರಕರಣದಲ್ಲಿ ವಕೀಲರ ಬೇಡಿಕೆಯಂತೆ ಎಸ್ಐಟಿ ಅಧಿಕಾರಿಗಳು ಜಿಪಿಆರ್ ತಂತ್ರಜ್ಞಾನ ಬಳಸಿಯೂ ಶೋಧನೆ ಮಾಡಿದ್ದಾರೆ. ಭಾರೀ ಕುತೂಹಲ ಕೆರಳಿಸಿದ್ದ ನೇತ್ರಾವತಿ ಸ್ನಾನಘಟ್ಟದ ಬಳಿಯಲ್ಲಿ ಗುರುತಿಸಿರುವ 13ನೇ ಪಾಯಿಂಟ್ ನಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸಿ ಡ್ರೋಣ್ ಮೂಲಕ ಸ್ಕ್ಯಾನ್ ಮಾಡಿದರೂ ಯಾವುದೇ ಸಾಕ್ಷ್ಯ ಲಭಿಸಿಲ್ಲ.
ಸಮಾಧಿಗಳನ್ನು ಅಗೆಯುತ್ತ ಹೋದರೂ, ಶವಗಳ ಸಾಕ್ಷ್ಯ ಸಿಗದೇ ಇದ್ದಾಗ ದೂರುದಾರನ ಪರ ವಕೀಲರು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರನ್ನು ಬಳಸಿ ಶವ ಶೋಧ ನಡೆಸುವಂತೆ ಆಗ್ರಹ ಮಾಡಿದ್ದರು. ಆದರೆ ಆ ಯಂತ್ರವನ್ನು ತರುವುದು ತುಂಬ ವೆಚ್ಚದಾಯಕ ಆಗಿದ್ದರಿಂದ ಅದನ್ನು ತರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಕೊನೆಗೆ, ರಾಜ್ಯದ ಡಿಜಿಪಿಯವರೇ ಜಿಪಿಆರ್ ಯಂತ್ರದ ಶೋಧ ಕಾರ್ಯಕ್ಕೆ ಒಪ್ಪಿಗೆ ನೀಡಿದ್ದರು. ಅದರಂತೆ, ಅತಿ ಹೆಚ್ಚು ಶವಗಳನ್ನು ಹೂತಿದ್ದೇನೆಂದು ಹೇಳಿದ್ದ 13ನೇ ಪಾಯಿಂಟ್ ನಲ್ಲಿಯೇ ಜಿಪಿಆರ್ ಶೋಧನೆಗೆ ಎಸ್ಐಟಿ ಮುಂದಾಗಿತ್ತು. ಇದಲ್ಲದೆ, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿಯವರೇ ಖುದ್ದಾಗಿ ಬಂದು ಜಿಪಿಆರ್ ಶೋಧ ಕಾರ್ಯಕ್ಕೆ ನೇತೃತ್ವ ನೀಡಿದ್ದರು.



ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನ ವರೆಗೂ ಜಿಪಿಆರ್ ಯಂತ್ರವನ್ನು ಡ್ರೋಣ್ ಮೂಲಕ ಇಡೀ ಪ್ರದೇಶವನ್ನು ಸ್ಕ್ಯಾನ್ ಮಾಡಲಾಯಿತು. ಆನಂತರ, ಅದರಲ್ಲಿ ದೊರೆತ ಸಿಗ್ನಲನ್ನು ಕಂಪ್ಯೂಟರ್ ಪರದೆಗೆ ಹಾಕಿ ನೋಡಲಾಯಿತು. ಆದರೆ ಅದರಲ್ಲಿ ಯಾವುದೇ ಅಸ್ಪಷ್ಟ ಪದರಗಳು ಅಥವಾ ಅಸ್ಥಿಪಂಜರ ಇರುವಂಥದ್ದು ಪತ್ತೆಯಾಗಲಿಲ್ಲ. ಹಾಗಿದ್ದರೂ, ಜಿಪಿಆರ್ ನಲ್ಲಿ ಏನೂ ಸಿಗಲಿಲ್ಲ ಎಂದು ಎಸ್ಐಟಿ ಅಲ್ಲಿಗೇ ಕಾರ್ಯಾಚರಣೆ ಮುಗಿಸಲಿಲ್ಲ. ದೂರುದಾರ 13ನೇ ಪಾಯಿಂಟ್ ನಲ್ಲಿ ಶವ ಹೂತಿದ್ದೇನೆಂದು ಅಂದಾಜಿನಲ್ಲಿ ಗುರುತಿಸಿದ್ದ ಸ್ಥಳವನ್ನು ಜೆಸಿಬಿ ಬಳಸಿ ಅಗೆದು ನೋಡಲಾಯಿತು. ಸಂಜೆಯ ವೇಳೆಗೆ ಸುಮಾರು 18 ಅಡಿಯ ವರೆಗೂ ಸುಮಾರು 20 ಅಡಿಯ ಉದ್ದಗಲಕ್ಕೆ ಗುಂಡಿ ತೋಡಿದ್ದು, ಶವದ ಎಲುಬು ಇನ್ನಿತರ ಯಾವುದೇ ವಸ್ತುಗಳು ಸಿಗಲಿಲ್ಲ.
ಮಾಹಿತಿ ಪ್ರಕಾರ, ಈ ಜಾಗದಲ್ಲಿ ದೂರುದಾರ ತೋರಿಸುವ ಎಲ್ಲ ಗುರುತುಗಳಲ್ಲಿಯೂ ಎಸ್ಐಟಿ ತಂಡ ಬುಧವಾರವೂ ಗುಂಡಿ ತೋಡಿ ಶೋಧಿಸುವ ಸಾಧ್ಯತೆಯಿದೆ. ಶವ ಹೂತಿದ್ದಾನೆಂಬ ಆರೋಪದ ಪ್ರಕರಣ ಇಡೀ ದೇಶಾದ್ಯಂತ ಭಾರೀ ಸಂಚಲನ ಎಬ್ಬಿಸಿರುವುದರಿಂದ ದೂರುದಾರನ ಹೇಳಿಕೆಯನ್ನು ಪರಿಗಣಿಸಬೇಕಾಗುತ್ತದೆ. ಆತ ಸೂಚಿಸಿದ ಸ್ಥಳಗಳಲ್ಲಿ ಶೋಧನೆಯನ್ನೂ ಮಾಡಬೇಕಾಗುತ್ತದೆ. ಇದೇ ಪ್ರಕಾರ, ಎಸ್ಐಟಿ ತಂಡ ಈವರೆಗೂ ಶೋಧ ಕಾರ್ಯ ನಡೆಸಿದ್ದು, 13ನೇ ಪಾಯಿಂಟ್ ಅಗೆದ ಬಳಿಕ ರಾಜ್ಯ ಸರಕಾರಕ್ಕೆ ಮಧ್ಯಂತರ ವರದಿಯನ್ನೂ ಸಲ್ಲಿಸುವ ಸಾಧ್ಯತೆಯಿದೆ.
ವಿಶೇಷ ಅಂದ್ರೆ, ಮಂಗಳವಾರ ಅಗೆಯುವ ಸಂದರ್ಭದಲ್ಲಿ ಪೊಲೀಸರು ಕೂಡ ಹೆಚ್ಚು ಕಟ್ಟುನಿಟ್ಟು ಮಾಡಲಿಲ್ಲ. ಅಡ್ಡಲಾಗಿ ಪರದೆಯನ್ನೂ ಕಟ್ಟಿರಲಿಲ್ಲ. ಮಾಧ್ಯಮ ತಂಡಗಳು ತುಸು ದೂರದಲ್ಲಿ ನಿಂತು ಅಗೆಯುವ ಕಾರ್ಯವನ್ನು ನೇರ ಪ್ರಸಾರದಲ್ಲಿ ತೋರಿಸಿದವು. ಈ ಹಿಂದೆ ಎಲ್ಲ ಕಡೆಯೂ ಅಡ್ಡ ಪರದೆಗಳನ್ನು ಕಟ್ಟಿ ಶೋಧ ಕಾರ್ಯ ತೋರಿಸದಂತೆ ತಡೆಯಲಾಗಿತ್ತು. ಜನರನ್ನೂ ಹತ್ತಿರಕ್ಕೆ ಬರುವುದಕ್ಕೆ ಬಿಡುತ್ತಿರಲಿಲ್ಲ. ಈಗ ಸ್ಥಳದಲ್ಲಿ ಸೇರುತ್ತಿರುವ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಜಾಲತಾಣದಲ್ಲಿ ಮಾತ್ರ ಪರ- ವಿರೋಧ ಎನ್ನುವಂತೆ ಟೀಕೆ, ಟಿಪ್ಪಣಿ ಕೇಳಿಬರುತ್ತಿದೆ.
In the sensational Dharmasthala mass grave allegation case, the Special Investigation Team (SIT) has deployed Ground Penetrating Radar (GPR) technology to search for human remains, but no skeletal evidence has been found so far.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm