ಬ್ರೇಕಿಂಗ್ ನ್ಯೂಸ್
11-08-25 03:33 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.11 : ಧರ್ಮಸ್ಥಳದಲ್ಲಿ ಹೆಣ ಹೂತಿದ್ದಾರೆ ಎಂಬ ಆರೋಪದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿರುವಾಗಲೇ 38 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೊಲೆಯಾಗಿದೆ ಎಂದು ಹೇಳಲಾದ ಪದ್ಮಲತಾ ಎಂಬ ಪಿಯುಸಿ ವಿದ್ಯಾರ್ಥಿನಿಯ ಕುಟುಂಬಸ್ಥರು ಮುಂದೆ ಬಂದಿದ್ದು, ಎಸ್ಐಟಿ ತಂಡಕ್ಕೆ ದೂರು ನೀಡಿದ್ದಾರೆ.
ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಸ್ಥಳೀಯ ಸಿಪಿಐಎಂ ಪಕ್ಷದ ನಾಯಕರ ಜೊತೆಗೆ ಪದ್ಮಲತಾ ಅವರ ಅಕ್ಕ ಇಂದ್ರಾವತಿ ಬಂದಿದ್ದು, 38 ವರ್ಷಗಳ ಹಿಂದೆ ನಾಪತ್ತೆಯಾಗಿ ಆಬಳಿಕ ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪದ್ಮಲತಾ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಇಂದ್ರಾವತಿ, ನನ್ನ ತಂಗಿ ಪದ್ಮಲತಾ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು. 1986ರ ಡಿಸೆಂಬರ್ 12ರಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಬಸ್ಸಿನಲ್ಲಿ ಬಂದಿದ್ದವಳು ಕಾಣೆಯಾಗಿದ್ದಳು. ಆನಂತರ, ಎರಡು ತಿಂಗಳ ನಂತರ 1987ರ ಫೆಬ್ರವರಿ 17ರಂದು ನೆರಿಯಾ ಹೊಳೆಯ ಬದಿಯಲ್ಲಿ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶಾಲು ಮತ್ತು ಕೈಗೆ ಕಟ್ಟಿದ ವಾಚ್ ಆಧಾರದಲ್ಲಿ ಶವವನ್ನು ಗುರುತಿಸಲಾಗಿತ್ತು. ನನ್ನ ತಂದೆ ದೇವಾನಂದರು ಆಗ ಕಮ್ಯುನಿಸ್ಟ್ ಪಕ್ಷದಲ್ಲಿ ಸಕ್ರಿಯವಾಗಿದ್ದರು. ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದಲ್ಲದೆ ಅಸಹಜ ಸಾವಿಗೆ ಕಾರಣರಾದ ಆರೋಪಿಗಳ ಬಂಧನಕ್ಕಾಗಿ ಪಕ್ಷದ ಮೂಲಕ ಹೋರಾಟ ನಡೆಸಿದ್ದರು. ಬಳಿಕ ರಾಜ್ಯ ಸರಕಾರ ಸಿಐಡಿ ತಂಡದಿಂದ ತನಿಖೆ ನಡೆಸಿತ್ತು. ಆಗ ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದ್ದಲ್ಲದೆ, ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದ ರಾಚಯ್ಯ ಅವರು ನಮ್ಮ ಬೋಳಿಯಾರಿನಲ್ಲಿದ್ದ ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಸಿಐಡಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸದೆ ಪತ್ತೆಯಾಗದ ಪ್ರಕರಣ ಎಂದು ಹಿಂಬರಹ ನೀಡಿದ್ದರು.
ನನ್ನ ತಂಗಿಯನ್ನು ಯೋಜಿತ ರೀತಿಯಲ್ಲಿ ಅಪಹರಿಸಿ ಅತ್ಯಾಚಾರ, ಕೊಲೆ ನಡೆಸಿದ್ದಾರೆಂಬ ಅನುಮಾನಗಳಿದ್ದ ಕಾರಣ ಮುಂದೆಯಾದರೂ ತನಿಖೆ ನಡೆಸಿ ನ್ಯಾಯ ಪಡೆಯಬೇಕೆಂದು ಆಕೆಯ ಶವವನ್ನು ಸುಡದೆ ಹೂಳಲಾಗಿತ್ತು. ಅದನ್ನು ಹೊರ ತೆಗೆದು ತನಿಖೆ ನಡೆಸಿದರೆ ಕೊಲೆಯಾದ ಬಗ್ಗೆ ಖಚಿತತೆ ಸಿಗಲಿದ್ದು, ನನಗೆ ತಿಳಿದ ಸಾಕ್ಷಿ ನುಡಿಯಲು ಸಿದ್ಧಳಿದ್ದೇನೆ. ಪ್ರಕರಣದ ಮರು ತನಿಖೆ ಮಾಡಬೇಕೆಂದು ಎಸ್ಐಟಿ ತಂಡದ ಮುಂದೆ ಕೇಳಿಕೊಂಡಿದ್ದೇನೆ ಎಂದು ಇಂದ್ರಾವತಿ ಹೇಳಿದ್ದಾರೆ.
ಸಿಪಿಐಎಂ ಮುಖಂಡ ಬಿ.ಎಂ.ಭಟ್ ಮತ್ತು ಲಕ್ಷ್ಮಣ ಗೌಡ ಪಾಂಗಾಳ ನೇತೃತ್ವದಲ್ಲಿ ಎಸ್ಐಟಿ ಕಚೇರಿಗೆ ದೂರು ನೀಡಲಾಗಿದ್ದು, ಪೊಲೀಸರು ದೂರನ್ನು ಸ್ವೀಕರಿಸಿದ್ದಾರೆ. ಪದ್ಮಲತಾ ಶವ ಪತ್ತೆ ಪ್ರಕರಣ 38 ವರ್ಷಗಳ ಹಿಂದೆ ಭಾರೀ ಸಂಚಲನ ಎಬ್ಬಿಸಿದ್ದ ಘಟನೆಯಾಗಿದ್ದು, ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು.
Even as the Special Investigation Team (SIT) is probing allegations of human remains being buried in Dharmasthala, a new complaint has emerged in a 38-year-old case. The family of Padmalatha, a PUC student allegedly murdered in 1986, has approached the SIT seeking a fresh investigation.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
24-10-25 11:57 am
Mangalore Correspondent
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
24-10-25 10:07 am
Mangalore Correspondent
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm