ಬ್ರೇಕಿಂಗ್ ನ್ಯೂಸ್
09-08-25 09:42 pm Mangalore Correspondent ಕರಾವಳಿ
ಮಂಗಳೂರು, ಆ.9 : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮುಕ್ತ ಮಂಗಳೂರು ಅಭಿಯಾನದಡಿ ನಡೆಸಿದ ಪೊಲೀಸ್ ಕಾರ್ಯಾಚರಣೆಯಲ್ಲಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ. ಕುದ್ರೋಳಿ ಖಂಡತ್‌ಪಳ್ಳಿ ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಅಬ್ದುಲ್ ಸಮದ್ @ ಚಮ್ಮು ಎಂಬಾತನನ್ನು ದಸ್ತಗಿರಿ ಮಾಡಿ 1 ಕೆಜಿ 40 ಗ್ರಾಂ ಗಾಂಜಾವನ್ನು ಸ್ವಾಧೀನ ಪಡಿಸಿಕೊಂಡಿದ್ದು ಮಂ.ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ನಾಡು ಲಿಂಗಪಯ್ಯನ ಕಾಡು ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದು ದಾಳಿ ನಡೆಸಿ ಸ್ಥಳೀಯ ನಿವಾಸಿ ಧರ್ಮಲಿಂಗ ಎಂಬಾತನನ್ನು ಬಂಧಿಸಿ ಆತನ ಬಳಿಯಿದ್ದ ಸುಮಾರು 1ಕೆ.ಜಿ 90 ಗ್ರಾಂ ಗಾಂಜಾ ಪ್ರಕರಣ ಸ್ವಾಧೀನಪಡಿಸಲಾಗಿದ್ದು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಬಂದು ಸ್ಥಳೀಯ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದು ಮರವೂರು ಎಂಬಲ್ಲಿ ದಾಳಿ ನಡೆಸಿ ಬಿಹಾರ ಮೂಲದ ದೋಲತ್ ಕುಮಾರ್ ಶರ್ಮಾ, ಮಹಮ್ಮದ್ ಖುಷಲಂ ಎಂಬವರನ್ನು ಬಂಧಿಸಿ, ಅವರ ಬಳಿಯಿದ್ದ ಸುಮಾರು 1 ಕೆ.ಜಿ 189 ಗ್ರಾಂ ಗಾಂಜಾ ಮತ್ತು 219 ಗ್ರಾಂ ಬಾಂಗ್ ಅನ್ನು ಸ್ವಾಧೀನಪಡಿಸಲಾಗಿದ್ದು, ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪಡೀಲ್ ಸಮೀಪ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ಕಾರ್ತಿಕ್ ಮತ್ತು ಮೋಹಿತ್ ಎಂಬವರನ್ನು ದಸ್ತಗಿರಿ ಮಾಡಿ 800 ಗ್ರಾಂ ಗಾಂಜಾ ವಶಪಡಿಸಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ಪ್ರಣವ್ ಕೆ ವಿ. ಎಂಬಾತ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ದಸ್ತಗಿರಿ ಮಾಡಿ 1 ಕೆಜಿ 100 ಗ್ರಾಂ ಗಾಂಜಾವನ್ನು ಸ್ವಾಧೀನಪಡಿಸಿ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಸಾರ್ವಜನಿಕರಿಗೆ ನಿರಂತರ ಗಾಂಜಾ ಮಾರಾಟ ಮಾಡುತ್ತಿರುವವರ ಬಗ್ಗೆ ಮತ್ತು ಇತರ ಮೂಲಗಳ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು ಇವರೆಲ್ಲರನ್ನು ಪತ್ತೆ ಹಚ್ಚಲು ಠಾಣಾ ವ್ಯಾಪ್ತಿಗಳಲ್ಲಿ ಈಗಾಗಲೇ ತಂಡಗಳನ್ನು ರಚಿಸಿದ್ದು, ಪತ್ತೆಗೆ ಕಾರ್ಯ ಪ್ರವೃತ್ತರಾಗಿರುತ್ತಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
Under the “Drug-Free Mangaluru” campaign, Mangaluru City Police have arrested a total of seven individuals for selling ganja to college students, youth, and the public in various parts of the Commissionerate limits. In Kudroli, Khadatpalli area, police apprehended Abdul Samad alias Chammu, who was selling ganja to students and youths, and seized 1 kg 40 g of ganja from him. A case has been registered at the Mangaluru North Police Station.
09-08-25 10:12 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
09-08-25 10:53 pm
Mangalore Correspondent
Drug’s Mangalore, Police, Arrest: ಡ್ರಗ್ಸ್ ಮುಕ...
09-08-25 09:42 pm
ಧರ್ಮಸ್ಥಳ ಕ್ಷೇತ್ರದ ಘನತೆ ಕುಗ್ಗಿಸಲೆತ್ನಿಸುತ್ತಿರುವ...
09-08-25 08:10 pm
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm