ಬ್ರೇಕಿಂಗ್ ನ್ಯೂಸ್
08-08-25 09:25 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.8 : ತೀವ್ರ ಕುತೂಹಲ ಮೂಡಿಸಿದ್ದ ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಳಿಯ ಕಲ್ಲೇರಿ ಕಾಡಿನಲ್ಲಿ ಹೂತಿಟ್ಟಿದ್ದಾನೆ ಎನ್ನಲಾಗಿದ್ದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ಮಾಡಿದ್ದಾರೆ. 15ನೇ ನಂಬರ್ ಎಂದು ಗುರುತು ಹಾಕಿ, ದೂರುದಾರ ಹೇಳಿದ ರೀತಿಯಲ್ಲೇ ಆಸುಪಾಸಿನ ನಾಲ್ಕು ಕಡೆ ಅಗೆದರೂ ಅಸ್ಥಿಪಂಜರದ ಯಾವುದೇ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಾಲಾ ಸಮವಸ್ತ್ರದಲ್ಲಿಯೇ 15 ವರ್ಷದ ಬಾಲಕಿಯನ್ನು ಕಲ್ಲೇರಿ ಎಂಬಲ್ಲಿ ಹೂತಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದು ಒಟ್ಟು ಪ್ರಕರಣ ತೀವ್ರ ಸಂಚಲನ ಎಬ್ಬಿಸಲು ಕಾರಣವಾಗಿತ್ತು. ಧರ್ಮಸ್ಥಳ ಸ್ನಾನಘಟ್ಟದ ಬಳಿಯ 14 ಗುರುತು ಬಳಿಕ ಶುಕ್ರವಾರ ಮಧ್ಯಾಹ್ನ ನೇರವಾಗಿ ದೂರುದಾರ ಕಲ್ಲೇರಿ- ಬೋಳಿಯಾರಿನ ದಟ್ಟ ಅರಣ್ಯಕ್ಕೆ ಕರೆದೊಯ್ದಿದ್ದ. ಇದರಂತೆ ಕಾರ್ಮಿಕರು ಮತ್ತು ಸಣ್ಣ ಹಿಟಾಚಿಯ ಜೊತೆಗೇ ಅಧಿಕಾರಿಗಳು ಕಾಡಿಗೆ ತೆರಳಿದ್ದು ದೂರುದಾರ ಹೇಳಿದಂತೆ ಗುರುತು ಹಾಕಿದ್ದಾರೆ. ಆನಂತರ, ಅಲ್ಲಿನ ರಹಸ್ಯ ಭೇದಿಸುವ ಸಲುವಾಗಿ ಅಗೆತ ಮಾಡಿದ್ದಾರೆ.


15ನೇ ಮಾರ್ಕ್ ಹಾಕಿ, ಶೋಧ ಕಾರ್ಯ ನಡೆಸಿದ್ದಾರೆ. ಆನಂತರ, ಯಾವುದೇ ಅಸ್ಥಿಪಂಜರದ ಕುರುಹು ಸಿಗದೇ ಇದ್ದುದರಿಂದ ಅಲ್ಲಿಯೇ ಅಕ್ಕ ಪಕ್ಕದಲ್ಲಿ ನಾಲ್ಕು ಕಡೆ ತೋರಿಸಿದಂತೆ ಅಲ್ಲಿಯೂ ಅಗೆತ ಮಾಡಿದ್ದಾರೆ. ಮೊದಲು ಗುರುತು ಹಾಕಿದ್ದು 15 ಮತ್ತು ಆನಂತರದ್ದು 15 ಎ ಎಂದು ಗುರುತು ಹಾಕಿ ಅಗೆಯಲಾಗಿದೆ. ಮತ್ತೆರಡು ಪಾಯಿಂಟ್ ಗಳಿಗೆ ನಂಬರ್ ನಮೂದಿಸಿಲ್ಲ. ಆದರೂ ಅಲ್ಲಿ ಅಗೆದು ನೋಡಿದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಎಸ್ಐಟಿ ಮೂಲಗಳಿಂದ ತಿಳಿದುಬಂದಿದೆ. 2010ರಲ್ಲಿ ಕಲ್ಲೇರಿ ಎಂಬಲ್ಲಿ 15 ವರ್ಷದ ಶಾಲಾ ಬಾಲಕಿಯನ್ನು ಮೇಲ್ವಿಚಾರಕರ ಸೂಚನೆಯಂತೆ ಹೂತು ಹಾಕಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿ ಅಧಿಕಾರಿಗಳು ಆ ಜಾಗಕ್ಕೆ ನೇರವಾಗಿ ಕರೆದೊಯ್ದು ಸ್ಥಳ ಶೋಧ ನಡೆಸಿದ್ದಾರೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಹೋಗುವ ಹೆದ್ದಾರಿಯಲ್ಲಿ ಎರಡು ಕಿಮೀ ಸಾಗಿದಾಗ ಕಲ್ಲೇರಿ- ಬೋಳಿಯಾರ್ ಸಿಗುತ್ತದೆ. ಹೆದ್ದಾರಿಯಿಂದ ಒಳಭಾಗದ ಕಾಡಿಗೆ ದೂರುದಾರ ಪೊಲೀಸರನ್ನು ಕರೆದೊಯ್ದಿದ್ದ. ಇದೇ ಸ್ಥಳದಲ್ಲಿ ಹೂತಿದ್ದೇನೆ ಎಂದು ಹೇಳಿ ಅಗೆತ ಮಾಡಿದರೂ ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಅಲ್ಲಿನ ಶೋಧ ಕಾರ್ಯದ ಬಳಿಕ ಎಸ್ಐಟಿ ತಂಡ ಸಂಜೆ 6 ಗಂಟೆ ವೇಳೆಗೆ ಅಲ್ಲಿಂದ ಮರಳಿತ್ತು.
In a development that had stirred intense curiosity, the Special Investigation Team (SIT) on Thursday conducted a search in the dense Kalleri forest near the Dharmasthala–Subrahmanya state highway, at a spot where a complainant had claimed to have buried a 15-year-old schoolgirl in uniform.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 10:52 pm
Mangalore Correspondent
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
24-10-25 10:07 am
Mangalore Correspondent
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm