ಬ್ರೇಕಿಂಗ್ ನ್ಯೂಸ್
05-08-25 04:29 pm Mangalore Correspondent ಕರಾವಳಿ
ಮಂಗಳೂರು, ಆ.5 : ಪಾಕಿಸ್ಥಾನ ವಿರುದ್ಧ 1965 ಮತ್ತು 1971ರಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಬಳಕೆಯಾಗಿದ್ದ ಭಾರತೀಯ ಭೂಸೇನೆಯ ಯುದ್ಧ ಟ್ಯಾಂಕರ್ ಟಿ-55 ಸಂಸದ ಕ್ಯಾ.ಬ್ರಿಜೇಶ್ ಚೌಟರ ಕೋರಿಕೆ ಮೇರೆಗೆ ಮಂಗಳೂರಿಗೆ ಆಗಮಿಸಿದ್ದು, ಸದ್ಯಕ್ಕೆ ನಗರದ ಕದ್ರಿ ಸರ್ಕಿಟ್ ಹೌಸ್ ಬಳಿಯಲ್ಲಿ ಇರಿಸಲಾಗಿದೆ.
ಭಾರತೀಯ ಸೇನೆಯಲ್ಲಿ 1961ರಿಂದ 2001ರ ವರೆಗೆ ಸೇವೆಯಲ್ಲಿದ್ದ ಈ ಯುದ್ಧ ಟ್ಯಾಂಕರನ್ನು ಪುಣೆಯ ಕಿರ್ಕಿಯಲ್ಲಿರುವ ಭಾರತೀಯ ಸೇನೆಯ ಡಿಪೋದಲ್ಲಿ ಇರಿಸಲಾಗಿತ್ತು. ಅದನ್ನು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ವಿಶೇಷ ಟ್ರೈಲರ್ ನಲ್ಲಿ ಮಂಗಳೂರಿಗೆ ತರಿಸಲಾಗಿದೆ. ಇತ್ತೀಚೆಗೆ ಸಂಸದ ಬ್ರಿಜೇಶ್ ಚೌಟ, ಸೇನೆಯಲ್ಲಿ ಸೇವೆಗೈದ ಟ್ಯಾಂಕರ್ ಒಂದನ್ನು ಉಚಿತವಾಗಿ ಮಂಗಳೂರಿಗೆ ನೀಡಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದರು. ಇದರಂತೆ, ಯುದ್ಧ ಟ್ಯಾಂಕ್ ಅನ್ನು ಮಂಗಳೂರು ನಗರಕ್ಕೆ ತರಿಸಲಾಗಿದೆ.


ಅಂದಹಾಗೆ, ಈ ಯುದ್ಧ ಟ್ಯಾಂಕ್ ಅನ್ನು ಕದ್ರಿಯಲ್ಲಿರುವ ವಾರ್ ಮೆಮೋರಿಯಲ್ ಬಳಿಯಲ್ಲೇ ಇರಿಸುವ ಯೋಜನೆ ಇದೆಯಂತೆ. ವೀರ ಯೋಧರನ್ನು ಸ್ಮರಿಸುವ ಮತ್ತು ಸೇನೆಗೆ ಸೇರುವ ಯುವಕರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಯುದ್ಧ ಟ್ಯಾಂಕರನ್ನು ಮಂಗಳೂರು ನಗರ ಮಧ್ಯದಲ್ಲಿ ಇರಿಸಬೇಕೆಂದು ಸಂಸದ ಚೌಟರು ಯೋಚನೆ ಹೊಂದಿದ್ದಾರೆ. ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿಯಾಗಿರುವ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ಯುದ್ಧ ಸ್ಮರಣಿಕೆ ರೀತಿಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಕದ್ರಿ ಯುದ್ಧ ಸ್ಮಾರಕದ ಬಳಿಯಲ್ಲಿ ಸೂಕ್ತ ವೇದಿಕೆಯನ್ನು ನಿರ್ಮಿಸಿ ಯುದ್ಧ ಟ್ಯಾಂಕರ್ ಇರಿಸಬೇಕೆಂಬ ಯೋಜನೆ ಇದೆಯೆಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಬರೋಬ್ಬರಿ 40 ಟನ್ ತೂಕವಿರುವ ಟಿ-55 ಯುದ್ಧ ಟ್ಯಾಂಕರ್ ಶುಕ್ರವಾರ ಪುಣೆಯಿಂದ ಹೊರಟಿದ್ದು ಮೂರು ದಿನದ ಪ್ರಯಾಣದ ಬಳಿಕ ಸೋಮವಾರ ರಾತ್ರಿ ಮಂಗಳೂರು ತಲುಪಿದೆ.
A historic T-55 battle tank, which was part of India’s military operations during the 1965 and 1971 wars against Pakistan, has arrived in Mangaluru and is currently stationed near the Kadri Circuit House. The tank has been brought to the city following a request by MP Capt. Brijesh Chowta.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm