ಬ್ರೇಕಿಂಗ್ ನ್ಯೂಸ್
04-08-25 09:51 pm Mangalore Correspondent ಕರಾವಳಿ
ಮಂಗಳೂರು, ಆ.4 : ವಿದ್ಯುತ್ ಸರಬರಾಜು ನಿಗಮದ ನೌಕರರಿಗೆ ಮತ್ತು ಅವರ ಆಶ್ರಿತರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಕಾಂಗ್ರೆಸ್ ಸರಕಾರ ಗ್ರಾಹಕರಿಂದಲೇ ಹಣ ವಸೂಲಿ ಮಾಡುತ್ತಿದೆಯೆಂಬ ಆರೋಪ ಮತ್ತು ಬಿಜೆಪಿ ಪ್ರತಿಭಟನೆ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತು ಮಾಜಿ ಶಾಸಕ ಜೆ.ಆರ್ ಲೋಬೊ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗಲೇ ಕಾನೂನಿಗೆ ತಿದ್ದುಪಡಿ ಮಾಡಿ ನೌಕರರ ಪಿಂಚಣಿಗೆ ಗ್ರಾಹಕರಿಂದಲೇ ಹಣ ಸಂಗ್ರಹಿಸಲು ಕಾನೂನು ತಂದಿತ್ತು. ಅದರ ಪ್ರಕಾರ, ಈಗ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿದೆ ವಿನಾ ಹೊಸ ನೀತಿಯಲ್ಲ. ಬಿಜೆಪಿ ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ತೋರಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಕುಲಶೇಖರದ ಮೆಸ್ಕಾಂ ಕಚೇರಿ ಎದುರಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಲೋಬೊ ಸುದ್ದಿಗೋಷ್ಟಿ ನಡೆಸಿದ್ದು, 2021ರಲ್ಲಿ ಬಿಜೆಪಿ ಸರಕಾರ ಇದ್ದಾಗಲೇ ಕಾನೂನಿಗೆ ತಿದ್ದುಪಡಿ ಮಾಡಿತ್ತು. ಅದಕ್ಕೂ ಹಿಂದೆ ಪಿಂಚಣಿ ಮೊತ್ತವನ್ನು ಸರಕಾರವೇ ಭರಿಸುತ್ತಿತ್ತು. ಆಗಿಂದಾಗ್ಗೆ ಅನುದಾನ ಕೊಡುವ ಪರಿಪಾಠ ಇತ್ತು. 202ರ ವರೆಗೆ 12,700 ಕೋಟಿ ಮೊತ್ತವನ್ನು ಈ ಉದ್ದೇಶಕ್ಕಾಗಿ ನೀಡಲಾಗಿತ್ತು. ಆದರೆ 2022ರ ಮಾರ್ಚ್ 9ರಂದು ಗ್ರಾಹಕರಿಂದಲೇ ಈ ಮೊತ್ತವನ್ನು ಸಂಗ್ರಹಿಸಲು ಹೊಸ ಕಾನೂನು ತಂದು 2022ರ ಡಿಸೆಂಬರ್ ನಲ್ಲಿ ಅದನ್ನು ಜಾರಿಗೊಳಿಸಿತ್ತು. ಎಫ್ ಕೆಸಿಸಿಐ ವತಿಯಿಂದ ಇದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರೂ, ಸರಕಾರ ಕೈಗೊಂಡ ನಿಯಮವೆಂದು 2024ರ ಮಾರ್ಚ್ 25ರಂದು ನ್ಯಾಯಾಧೀಶರು ವಿಚಾರಣೆ ಪೂರ್ತಿಗೊಳಿಸಿ ಅರ್ಜಿಯನ್ನು ವಜಾಗೊಳಿಸಿ ಕಾನೂನು ಜಾರಿಗೆ ಅವಕಾಶ ಕೊಟ್ಟಿದ್ದರು.
ಇದರಂತೆ, ಕಾನೂನು ಜಾರಿಯಾಗಿದ್ದರೂ, ಬಿಜೆಪಿ ಶಾಸಕರು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ತಂದ ಕಾನೂನು ಪ್ರಕಾರ 2026, 27 ಮತ್ತು 28ರ ಸಾಲಿನಲ್ಲಿ ನೌಕರರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ವರ್ಷಕ್ಕೆ ತಲಾ 766 ಕೋಟಿ ಅಗತ್ಯವಿದೆಯೆಂದು ಮನಗಂಡು ಕಾಂಗ್ರೆಸ್ ಸರಕಾರ ಗ್ರಾಹಕರಿಗೆ ತಲಾ 36 ಪೈಸೆಯಂತೆ ವಸೂಲಿ ಮಾಡಲು ಆದೇಶ ಮಾಡಿದೆ. ವೇದವ್ಯಾಸ ಕಾಮತ್ ಅಧಿವೇಶನದಲ್ಲಿ ಇದ್ದಾಗಲೇ ಈ ಕಾನೂನು ಜಾರಿಗೆ ತಂದಿದ್ದರೂ ಈಗ ಏನೂ ತಿಳಿಯದಂತೆ ವರ್ತಿಸುತ್ತಿದ್ದಾರೆ. ಮೆಸ್ಕಾಂನಲ್ಲಿ 39 ಸಾವಿರ ನೌಕರರಿದ್ದು, ಅವರ ಶ್ರೇಯೋಭಿವೃದ್ದಿಗಾಗಿ ಕೈಗೊಂಡಿದ್ದ ಕಾನೂನು ಇದಾಗಿದ್ದರೂ ಬಿಜೆಪಿ ಮೊಸಳೆ ಕಣ್ಣೀರಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪದ್ಮರಾಜ್ ಪೂಜಾರಿ, ಶಶಿಧರ ಹೆಗ್ಡೆ, ಟಿಕೆ ಸುಧೀರ್, ವಿಕಾಸ್ ಶೆಟ್ಟಿ ಮತ್ತಿತರರಿದ್ದರು.
Amid rising political heat over the collection of pension and gratuity funds for electricity corporation employees from consumers, the Congress has issued a clarification, asserting that it is simply implementing a law passed by the previous BJP government.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm