Mangalore Skeleton Found in Dharmasthala, Site No. 6: ಧರ್ಮಸ್ಥಳ ; ಆರನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ, ಎಸ್ಐಟಿ ತಂಡದಿಂದ ದೃಢ 

31-07-25 01:37 pm       Mangalore Correspondent   ಕರಾವಳಿ

ಧರ್ಮಸ್ಥಳ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಗುರುತಿಸಲಾದ ಆರನೇ ಪಾಯಿಂಟ್ ನಲ್ಲಿ ಸಮಾಧಿ ಅಗೆತ ನಡೆಸಲಾಗಿದ್ದು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಎಸ್ಐಟಿ ಮೂಲಗಳು ದೃಢಪಡಿಸಿವೆ. 

ಬೆಳ್ತಂಗಡಿ, ಜುಲೈ 31 : ಧರ್ಮಸ್ಥಳ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಗುರುತಿಸಲಾದ ಆರನೇ ಪಾಯಿಂಟ್ ನಲ್ಲಿ ಸಮಾಧಿ ಅಗೆತ ನಡೆಸಲಾಗಿದ್ದು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಎಸ್ಐಟಿ ಮೂಲಗಳು ದೃಢಪಡಿಸಿವೆ. 

ಹೆಣ ಹೂತ ಪ್ರಕರಣ ಸಂಬಂಧಿಸಿ ಮೂರು ದಿನಗಳಿಂದ ಸಾಕ್ಷ್ಯ ಪತ್ತೆಗಾಗಿ ಎಸ್ಐಟಿ ತಂಡ ಕಾರ್ಮಿಕರ ಮೂಲಕ ಅಗೆಯುವ ಕೆಲಸದಲ್ಲಿ ತೊಡಗಿದೆ. ಮೂರು ದಿನಗಳಲ್ಲಿ ಗುರುತು ಹಾಕಿದ ಐದು ಕಡೆ ಅಗೆತ ನಡೆಸಿದಾಗ, ಯಾವುದೇ ಸಾಕ್ಷ್ಯ ಲಭಿಸಿರಲಿಲ್ಲ.‌

ಇಂದು ಬೆಳಗ್ಗಿನಿಂದ ಆರನೇ ಸಮಾಧಿ ಜಾಗದಲ್ಲಿ ಅಗೆಯಲಾಗಿದ್ದು ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಜೋಪಾನವಾಗಿ ಅಗೆಯುವ ಕೆಲಸ ನಡೆಯುವ ಸಾಧ್ಯತೆ ಇದೆ. ಸ್ಥಳದಲ್ಲಿ ಡಿಐಜಿ ಅನುಚೇತ್, ಎಸ್ಪಿ ಜಿತೇಂದ್ರ ದಯಾಮ, ಪುತ್ತೂರು ಎಸಿ ಸ್ಟೆಲ್ಲಾ ಮೇರಿಸ್ ಇದ್ದಾರೆ. ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿ ಅಗೆಯುವ ಕೆಲಸ ಮಾಡಲಾಗುತ್ತಿದ್ದು ಹೆಣ ಹೂತ ಪ್ರಕರಣ ಸಾರ್ವಜನಿಕರ ಗಮನ ಸೆಳೆದಿದೆ.

In a major breakthrough in the high-profile Dharmasthala human remains case, the Special Investigation Team (SIT) has uncovered skeletal remains at Point Number 6, one of the 13 locations previously marked based on the complainant's statements.